
ಮಂಡ್ಯ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿ ಸೇರಿದಂತೆ ಕರ್ನಾಟಕ ಕೆಲವು ಜೈಲಿಗಳಿಗೆ ಪ್ರಭಾವಿ ಕೈದಿಗಳಿಗೆ ಹಾಗೂ ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿರುವ ಆರೋಪಿಗಳಿಗೆ ರಾಜ್ಯಾತಿಥ್ಯ ನೀಡುತ್ತಿರುವ ಘಟನೆಗಳು ಪದೇ ಪದೇ ವಿವಾದಕ್ಕೆ ಕಾರಣವಾಗುತ್ತದೆ. ಸದ್ಯ ಇಂತಹದ್ದೇ ಘಟನೆಯೊಂದು ಮಂಡ್ಯದಲ್ಲಿ ಬೆಳಕಿಗೆ ಬಂದಿದ್ದು, ಜಿಲ್ಲೆಯ ಜಿಲ್ಲಾ ನ್ಯಾಯಾಧೀಶರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಘಾತಗಾರಿ ಘಟನೆ ಬೆಳಕಿಗೆ ಬಂದಿದೆ.
ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಗೆ ರಾಜಾತಿಥ್ಯ ನೀಡುತ್ತಿದ್ದ ರಹಸ್ಯ ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿಯಿಂದ ಬೆಳಕಿಗೆ ಬಂದಿದೆ. ಅಕ್ರಮ ಖಾತೆಗಳ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವ್ಯಕ್ತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವುದು ಕಂಡು ನ್ಯಾಯಾಧೀಶರು ಗರಂ ಆಗಿದ್ದರು. ಅದರಲ್ಲೂ ಯಾವುದೇ ಕಾಯಿಲೆ ಇಲ್ಲದವನಿಗೆ ಕಾಯಿಲೆ ಎಂದು ಅಡ್ಮಿಟ್ ಮಾಡಿದ್ದ ಜೈಲಾಧಿಕಾರಿಗಳು ನಡೆ ನ್ಯಾಯಾಧೀಶರಿಗೆ ಕೂಡ ಶಾಕ್ ಕೊಟ್ಟಿತ್ತು.
ಜಿಲ್ಲಾ ಸತ್ರ ನ್ಯಾಯಾಧೀಶ ಸಿ.ಚಂದ್ರಶೇಖರ್ ನೇತೃತ್ವದ ತಂಡದಿಂದ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಆರೋಪಿ ಜೊತೆಗೆ ಯುವತಿ ಇರುವುದು ಕಂಡು ಬಂದಿತ್ತು. ಲೋಕಾಯುಕ್ತ ಪೊಲೀಸರಿಂದ ಅರೆಸ್ಟ್ ಆಗಿದ್ದ ಶ್ರೀರಂಗಪಟ್ಟಣ ADLR ಮಹಮದ್ ಹುಸೇನ್ ಎಂಬ ಆರೋಪಿ ಜೈಲಿನಲ್ಲಿರಬೇಕಿತ್ತು. ಆದರೆ ಹುಸೇನ್ ನನ್ನು ಜೈಲಾಧಿಕಾರಿಗಳು ಮಿಮ್ಸ್‌ಗೆ ದಾಖಲು ಮಾಡಿ, ವಿಶೇಷ ರೂಪ ವ್ಯವಸ್ಥೆಯನ್ನು ಮಾಡಿದ್ದರು. ನ್ಯಾಯಾಧೀಶರ ಪರಿಶೀಲನೆ ವೇಳೆ ಮಿಮ್ಸ್ ಆಸ್ಪತ್ರೆಯಲ್ಲಿ ಸ್ಪೆಷಲ್ ರೂಮ್‌ನಲ್ಲಿ ಅನಧಿಕೃತ ಚಿಕಿತ್ಸೆ ನೀಡುತ್ತಿರುವುದು ಖಚಿತವಾಗಿದೆ.
ಆರೋಪಿಯನ್ನು ಕಂಡು ವೈದ್ಯಾಧಿಕಾರಿಗಳಿಗೆ ನ್ಯಾಯಾಧಶೀರು ಪ್ರಶ್ನಿಸಿ ಮಾಹಿತಿ ಪಡೆದುಕೊಂಡಿದ್ದರು. ಈ ವೇಳೆ ಆತನಿಗೆ ಏನಾಗಿದೆ ಎಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದರಂತೆ. ಅಲ್ಲದೇ, ಇದೇ ವೇಳೆ ಆರೋಪಿ ಇದ್ದ ಸ್ಪೆಷಲ್ ರೂಮ್‌ನಲ್ಲಿ ಮಹಿಳೆಗೆ ಪ್ರಶ್ನಿಸಿದರೆ, ತಾನು ಆರೋಪಿಯ ಗೆಳತಿ ಆಕೆ ಹೇಳಿದ್ದಳಂತೆ.
ಇದರೊಂದಿಗೆ ಗರಂ ಆದ ನ್ಯಾಯಾಧೀಶರು, ಜೈಲಾಧಿಕಾರಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇವನಿಗೆ ಕಾಯಿಲೆ ಇಲ್ಲ ಯಾಕೆ ಇಲ್ಲಿ ಅಡ್ಮಿಟ್ ಮಾಡಿದ್ದೀರಾ? ಎಂದು ಪ್ರಶ್ನಿಸಿದರೆ, ಜೈಲಿನ ವೈದ್ಯರ ಸಲಹೆ ಮೇರೆಗೆ ಸೇರಿಸಿದ್ದೇವೆ ಎಂದು ಜೈಲಾಧಿಕಾರಿ ಹೇಳಿದ್ದರಂತೆ. ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದಿದ್ದೀರಾ ಎಂದು ಕೇಳಿದರೆ, ಇಲ್ಲ ಮುಂದೆ ಗಮನಕ್ಕೆ ತರುತ್ತೇವೆ ಸಮಾಜಯಿಷಿ ನೀಡಿದ್ದರಂತೆ. ಇದರೊಂದಿಗೆ ನ್ಯಾಯಾಧೀಶರು, ಜೈಲಾಧಿಕಾರಿ ಹಾಗೂ ಮಿಮ್ಸ್ ವೈದ್ಯಾಧಿಕಾರಿಗಳಿಗೆ ತಕ್ಷಣ ರಿಪೋರ್ಟ್ ನೀಡಲು ಆದೇಶ ನೀಡಿದ್ದು, ವರದಿ ಬಳಿಕ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.