ಸನಾತನ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮ ವಿಶ್ವದಲ್ಲೇ ಇಲ್ಲ: ಮಂತ್ರಾಲಯ ಶ್ರೀಗಳ ಹೇಳಿಕೆ

Published : Aug 25, 2026, 10:44 AM IST
Mantralaya Math Seer makes significant statement on Ram Mandir donation theft Sanatana Dharma

ಸಾರಾಂಶ

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ರಾಮಮಂದಿರ ಹುಂಡಿ ಕಳ್ಳತನ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ, ಮತ್ತು ಧಾರ್ಮಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ಮಠ-ಮಾನ್ಯಗಳಲ್ಲಿ ಆರ್ಥಿಕ ಪಾರದರ್ಶಕತೆಯ ಅಗತ್ಯವನ್ನು ಒತ್ತಿಹೇಳಿದ ಅವರು, ದಲಿತ ಕೇರಿಗೆ ಭೇಟಿ ನೀಡುವುದು ತಮಗೆ ಹೊಸದಲ್ಲ ಎಂದರು

ರಾಯಚೂರು (ಆ.25): ಮಠ-ಮಾನ್ಯಗಳು, ಸಂಘ-ಸಂಸ್ಥೆಗಳ ಆರ್ಥಿಕ ವಿಚಾರ ಆಡಳಿತದಲ್ಲಿ ಪಾರದರ್ಶಕವಾಗಿರಬೇಕು. ಆಡಳಿತ ನಡೆಸೋರು ಇದನ್ನೆಲ್ಲ ಗಮನಿಸಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ ಸಂಬಂಧ ಆಂಧ್ರಪ್ರದೇಶದ ಮಂತ್ರಾಲಯ ಮಠದಲ್ಲಿ ಮೌನಮುರಿದ ಶ್ರೀಗಳು, ರಾಮ ಮಂದಿರ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರ ತನಿಖೆ ನಡೆಸ್ತಿದೆ. ಈ ವಿಚಾರವಾಗಿ ತನಿಖೆ ಮುಂದುವರಿದಿದೆ. ನ್ಯಾಯಾಲಯದ ಹಂತದಲ್ಲಿ ಈ ವಿಚಾರ ತನಿಖೆ ನಡೆಯುತ್ತಿದೆ. ಅಲ್ಲಿ ನಿಜವಾಗಿಯೂ ಹುಂಡಿ ಕಳ್ಳತನ ನಡೆದಿದ್ರೆ ಅದರ ಬಗ್ಗೆ ಉತ್ತರ ಪ್ರದೇಶ ಸರ್ಕಾರ ಖಂಡಿತ ಕ್ರಮ ಕೈಗೊಳ್ಳುತ್ತೆ ಎಂದರು.

ಸನಾತನ ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂದು ಧರ್ಮ ಇಲ್ಲ:

ದೇಶ ರಾಜ್ಯದಲ್ಲಿ ನಿರಂತರವಾಗಿ ಹಿಂದೂ ಧರ್ಮದ ಮೇಲೆ ದಬ್ಬಾಳಿಕೆ ನಡೆತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀಗಳು, ಈ ವಿಶ್ವದಲ್ಲಿ ಸನಾತನ ಹಿಂದೂ ಧರ್ಮ ಪ್ರಮುಖ ಧರ್ಮವಾಗಿದೆ. ಹಿಂದೂ ಧರ್ಮಕ್ಕೆ ಸಮನಾದ ಮತ್ತೊಂಉ ಇಡೀ ವಿಶ್ವದಲ್ಲೇ ಇಲ್ಲ ಅನ್ನೋ ಮನವರಿಕೆ ಇದೆ. ಇತರೆ ಧರ್ಮದವರ ಜೊತೆ ಗಲಭೆ, ದ್ವೇಷ, ಅಸೂಯೆ ಇಟ್ಟುಕೊಳ್ಳಬಾರದು. ನಮ್ಮ ದೇಶ ಶಾಂತಿಪ್ರಿಯ ದೇಶ, ನಮ್ಮ ರಾಜ್ಯ ಕರ್ನಾಟಕ ಶಾಂತಿಯ ಹೂದೋಟವಿದ್ದಂತೆ. ಇಲ್ಲಿ ಎಲ್ಲರೂ ಅವರವರ ಧರ್ಮ ಆಚರಣೆ ಮಾಡಿಕೊಂಡು ಅಣ್ಣ ತಮ್ಮಂದಿರಂತೆ ಇರಬೇಕು, ಭಾರತಾಂಬೆಯ ಮಕ್ಕಳಾಗಿ ನೆಲೆಸಬೇಕು ಎಂದರು. ಮತೀಯ ಗಲಭೆಯಿಂದ ದೇಶದಲ್ಲಿ ಅಶಾಂತಿ ಮೂಡಿಸದೆ ಎಲ್ಲಾ ಧರ್ಮದವರು ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದ ಶ್ರೀಗಳು, ಹಿಂದೂ ಧರ್ಮದ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ನಾವು ಖಂಡಿಸುತ್ತೇವೆ ಎಂದರು.

ದಲಿತರ ಕಾಲೋನಿಗೆ ಹೋಗೋದು ನಮಗೇನು ಹೊಸದಲ್ಲ:

ಇನ್ನು ಪೇಜಾವರ ಶ್ರೀಗಳು ದೆಹಲಿಯ ದಲಿತ ಸಮುದಾಯ ಬಡಾವಣಗೆ ಹೋಗಿ ಪೂಜೆ ನೆರವೇರಿಸಿದ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಂತ್ರಾಲಯ ಶ್ರೀಗಳು, ಯಾವುದೇ ಜನಾಂಗಕ್ಕೆ ಹೋಗೋದು, ಹೋಗದೇ ಇರೋದು ಅಲ್ಲ. ಇಲ್ಲಿ ಎಲ್ಲ ಸಮುದಾಯಗಳು ಭಕ್ತರು ಬರ್ತಾರೆ. ಹಾಗೆ ನೋಡಿದ್ರೆ ನಮ್ಮ ಮಂತ್ರಾಲಯ ಮಠವೇ ಜಾತ್ಯಾತೀತ ಭಕ್ತರನ್ನು ಹೊಂದಿದೆ. ನಾವು ಅನೇಕ ಶೋಷಿತ ಜನರ ಸ್ಥಳಕ್ಕೆ ಹೋಗಿದ್ದೇವೆ, ಅವರಿಗೆ ಸಾಂತ್ವನ ಹೇಳಿದ್ದೇವೆ, ಆತ್ಮಸ್ತೈರ್ಯ, ಆತ್ಮಧೈರ್ಯ ತುಂಬಿದ್ದೇವೆ. ಆದರೆ ಅದನ್ನ ಪ್ರತ್ಯೇಕ ಕಾರ್ಯಕ್ರಮ ಮಾಡುವಂತದ್ದೇನಿಲ್ಲ. ನಾವು ಎಲ್ಲ ಸಮುದಾಯವನ್ನ ಒಟ್ಟಿಗೆ ಕರೆದೊಯ್ಯುತ್ತಿದ್ದೇವೆ. ನಾವು ಯಾವಾಗಲೂ ಆ ಕೆಲಸ ಮಾಡುತ್ತಲೇ ಇದ್ದೇವೆ. ಹೀಗಾಗಿ ನಮಗೆ ಇದು ಹೊಸದೇನಲ್ಲ ಎಂದ ಶ್ರೀಗಳು

PREV
Read more Articles on
click me!

Recommended Stories

ಬರೋಬ್ಬರಿ ಈ 75 ದಿನ KSR ಬೆಂಗಳೂರು ನಿಲ್ದಾಣಕ್ಕೆ ಬರಲ್ಲ ಮೇಮು ರೈಲು; ಭಾಗಶಃ ರದ್ದು
Mandya: ಜೈಲಿನಲ್ಲಿ ಇರಬೇಕಿದ್ದ ಆರೋಪಿ ಗರ್ಲ್‌ಫ್ರೆಂಡ್ ಜೊತೆ, ಆಸ್ಪತ್ರೆಗೆ ಬಂದ ನ್ಯಾಯಾಧೀಶರಿಗೆ ಬಿಗ್ ಶಾಕ್!