ಜೈಲಿನಲ್ಲಿದ್ದ ಮಗನನ್ನು ನೋಡಿ ಆತನಿಗೆ ಬಟ್ಟೆಗಳಿದ್ದ ಬ್ಯಾಗ್ ನೀಡಲು ಬಂದ ತಂದೆಯೇ ಜೈಲುಪಾಲಾಗಿರುವ ಘಟನೆ ನಡೆದಿದೆ. ಮಗನ ಸ್ನೇಹಿತ ಕೊಟ್ಟಿದ್ದ ಬಟ್ಟೆ ಬ್ಯಾಗ್‌ಅನ್ನು ಮಗನಿಗೆ ನೀಡುವ ವೇಳೆ ಅಪ್ಪ ಲಾಕ್ ಆಗಿದ್ದಾನೆ.
ಮಂಡ್ಯ (ಡಿ.13): ಜೈಲಿನಲ್ಲಿದ್ದ ಮಗನನ್ನು ನೋಡಲು ಬಂದ ತಂದೆಯೇ ಕೈದಿಯಾಗಿರುವ ಮನಕಲುಕುವ ಘಟನೆ ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಪುತ್ರನ ದುಶ್ಚಟಕ್ಕೆ ಅಮಾಯಕ ತಂದೆ ಈಗ ಜೈಲು ಪಾಲಾಗಿದ್ದಾರೆ. ಮಗನಿಗಾಗಿ ಅಪ್ಪ ಜೈಲಿಗೆ ತಂದಿದ್ದ ಬಟ್ಟೆ ಬ್ಯಾಗ್‌ನಲ್ಲಿ ಗಾಂಜಾ ಇದ್ದ ಕಾರಣ, ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಗನ ಸ್ನೇಹಿತ ಕೊಟ್ಟಿದ್ದ ಬಟ್ಟೆ ಬ್ಯಾಗ್‌ಅನ್ನು ತಂದು ಅಪ್ಪ ಲಾಕ್ ಆಗಿದ್ದಾನೆ. ಮನಕಲಕುವ ಘಟನೆಗೆ ಮಂಡ್ಯ ಕಾರಾಗೃಹ ಸಾಕ್ಷಿಯಾಗಿದೆ. ರೌಡಿಶೀಟರ್ ಮಧುಸೂಧನನ ತಂದೆ ಗಾಂಜಾ ತಂದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ ಮಧುಸೂಧನ್, ತನ್ನ ತಂದೆಗೆ ಸ್ನೇಹಿತ ನೀಡುವ ಬಟ್ಟೆ ಬ್ಯಾಗ್‌ಅನ್ನು ತರುವಂತೆ ತಂದೆಗೆ ತಿಳಿಸಿದ್ದ. ಮಧುಸೂದನ್ ಸೂಚನೆಯಂತೆ ಆತನ ತಂದೆ ಶಿವಣ್ಣ ಜೈಲಿಗೆ ಬಟ್ಟೆ ಬ್ಯಾಗ್‌ಅನ್ನು ತಂದಿದ್ದರು.
ಮಗನ ಮೇಲಿನ ಪ್ರೀತಿಗೆ ಆತನ ಮಾತನ್ನು ನಂಬಿ ಜೈಲಿಗೆ ಬಟ್ಟೆ ಬ್ಯಾಗ್ ತಂದಿದ್ದ ಶಿವಣ್ಣಗೆ ಶಾಕ್ ಆಗಿದೆ. ಜೈಲು ಸಿಬ್ಬಂದಿ ಬ್ಯಾಗ್ ಪರಿಶೀಲನೆ ವೇಳೆ ಗಾಂಜಾ ಪತ್ತೆಯಾಗಿದ್ದು. ತಕ್ಷಣ ಜೈಲು ಸಿಬ್ಬಂದಿ ಶಿವಣ್ಣನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಈ ವೇಳೆ ಶಿವಣ್ಣ ಮಗನ ಸೂಚನೆಯಂತೆ ಬ್ಯಾಗ್ ತಂದೆ ಎಂದು ಹೇಳಿದ್ದಾರೆ. ಗಾಂಜಾ ಇದ್ದ ಬಗ್ಗೆ ತನಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ ಎಂದು ಶಿವಣ್ಣ ಹೇಳಿದ್ದಾರೆ. ಇನ್ನೊಂದೆಡೆ ತಾನೇ ಬ್ಯಾಗ್ ತರಿಸಿದ್ದಾಗಿ ಮಧುಸೂದನ್ ತಪ್ಪೊಪ್ಪಿಗೆ ಮಾಡಿಕೊಂಡಿದ್ದಾನೆ. ಸಹ ಕೈದಿ ಸಂಜು ಸೂಚನೆಯಂತೆ ಮಧುಸೂಧನ್ ಬ್ಯಾಗ್ ತರಿಸಿದ್ದಾನೆ. ಈಗ ಎನ್ ಡಿ ಪಿಎಸ್ ಕಾಯ್ದೆಯಡಿ ಶಿವಣ್ಣ ಬಂಧನವಾಗಿದ್ದು, ಬ್ಯಾಗ್ ಕೊಟ್ಟ ಮಧುಸೂಧನನ ಸ್ನೇಹಿತನಿಗಾಗಿ ಪೊಲೀಸರ ಶೋಧ ಕಾರ್ಯ ನಡೆಸಿದ್ದಾರೆ.