ಮಂಡ್ಯ (ಜೂ.13): ಹಳ್ಳಿಗಳಲ್ಲಿ ಕೊರೋನಾ ಮಹಾಮಾರಿ ಬಾಧಿಸುತ್ತಿರುವ ಹಿನ್ನೆಲೆ ಗ್ರಾಮಗಳನ್ನು ಸೋಂಕು ಮುಕ್ತ ಮಾಡಲು ಮಂಡ್ಯ ಜಿಲ್ಲಾಡಳಿತ ಪ್ಲಾನ್ ಮಾಡಿದೆ.
ಸದ್ಯ ಸೋಂಕು ತಡೆಯುವುದರೊಂದಿಗೆ ಮತ್ತೊಂದೆಡೆ ಮೂರನೇ ಅಲೆ ತಡೆಯಲು ಸಿದ್ಧತೆ ನಡೆಸಲಾಗಿದೆ. ಮಂಡ್ಯದ ಹಳ್ಳಿ-ಹಳ್ಳಿಗೆ ತೆರಳಿ ಜನರಿಗೆ ಲಸಿಕೆ ನೀಡಲು ಸಿದ್ಧತೆ ನಡೆದಿದೆ.
undefined
ಪೊಲಿಯೋ ಅಭಿಯಾನದಂತೆ ಕೊರೋನಾ ಲಸಿಕೆ ಅಭಿಯಾನ ನಡೆಸಲು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದ್ದು, ಶಾಲೆ, ಸಮುದಾಯ ಕೇಂದ್ರಗಳಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಸಿದೆ.
ಕೊಂಚ ಏರಿದ್ರೂ ಮತ್ತೆ ಲಾಕ್‌ಡೌನ್ : 2 ಡೋಸ್ ಪಡೆಯೋವರೆಗೆ ಎಚ್ಚರಿಕೆ ವಹಿಸಿ
ಪಾಸಿಟಿವಿಟಿ ರೇಟ್ ಅಥವಾ ಜನಸಂಖ್ಯೆ ಹೆಚ್ಚಿರುವ ಹಳ್ಳಿಗಳಲ್ಲಿ ಮೊದಲು ಲಸಿಕೆ ನೀಡಲಾಗುತ್ತದೆ. ಬಳಿಕ ಉಳಿದೆಡೆ ಲಸಿಕಾ ಕಾರ್ಯಕ್ರಮ ನಡೆಸಲು ಪೂರ್ಣ ತಯಾರಿ ಮಾಡಿಕೊಳ್ಳಲಾಗಿದೆ.
ಮಂಡ್ಯದ ಬಹುತೇಕ ಹಳ್ಳಿಗಳಿಗೆ ಕೊರೋನಾ ಸೋಂಕು ವ್ಯಾಪಿಸಿದ್ದು, ನಗರಪ್ರದೇಶಕ್ಕಿಂತ ಹಳ್ಳಿಗಳಲ್ಲೇ ಹೆಚ್ಚು ಪಾಸಿಟಿವಿಟಿ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಿಂದ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣ ಮಾಡಲು ಜಿಲ್ಲಾಡಳಿತ ಸಂಪೂರ್ಣ ಲಸಿಕಾ ಅಭಿಯಾನಕ್ಕೆ ಮೊರೆಹೋಗಿದೆ.