ಬಿಎಸ್‌ವೈಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಪೂಜೆ

Suvarna News   | Asianet News
Published : Jan 31, 2020, 11:59 AM IST
ಬಿಎಸ್‌ವೈಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಪೂಜೆ

ಸಾರಾಂಶ

ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುಗಮವಾಗಿ ಬಿಎಸ್‌ವೈ ಆಡಳಿತ ನಡೆಸಬೇಕು ಎಂದು ಕಾರ್ಯಕರ್ತರು ಪ್ರಾರ್ಥಿಸಿದ್ದಾರೆ.

ಮಂಡ್ಯ(ಜ.31): ಸಿಎಂ ಬಿ. ಎಸ್. ಯಡಿಯೂರಪ್ಪ ಅವರಿಗೆ ಮಿಣಿ ಮಿಣಿ ಕಣ್ಣು ತಾಗದಿರಲೆಂದು ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸುಗಮವಾಗಿ ಬಿಎಸ್‌ವೈ ಆಡಳಿತ ನಡೆಸಬೇಕು ಎಂದು ಕಾರ್ಯಕರ್ತರು ಪ್ರಾರ್ಥಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯ ಗೊಂದಲ ನಿವಾರಣೆಗಾಗಿ ಪೂಜೆ ಸಲ್ಲಿಸಲಾಗಿದ್ದು, ಕಂಟಕಗಳು ಕಳೆದು ಸುಗಮವಾಗಿ ಸಂಪುಟ ವಿಸ್ತರಣೆ ಆಗಲೆಂದು ಪೂಜೆ ಸಲ್ಲಿಸಿದ್ದಾರೆ. ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿಗಳಿಂದ ಪೂಜೆ ನಡೆದಿದೆ.

'ಮಿಣಿ ಮಿಣಿ ಕುಮಾರಸ್ವಾಮಿ ಸ್ವಯಂ ಪ್ರಸಿದ್ಧಿ'

ಮಂಡ್ಯದ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ವಿಷೇಶ ಪೂಜೆ ಸಲ್ಲಿಕೆಯಾಗಿದ್ದು, ಯಡಿಯೂರಪ್ಪ ಅವರ ಮೇಲೆ ಯಾರ ಕಣ್ಣು ಬೀಳಬಾರದು. ನಿಂಬೆಹಣ್ಣು, ಟಗರು, ಸರ್ಪಯಾಗ, ಮಿಣಿ ಮಿಣಿ ಕಣ್ಣು, ತಮ್ಮೊಳಗಿನ ಶತ್ರುಗಳಿಂದ ಯಾವುದೇ ತೊಂದರೆಯಾಗಬಾರದು ಎಂದು ಪ್ರಾರ್ಥಿಸಲಾಗಿದೆ.

ಬೆರಳ ತುದಿಯಲ್ಲೇ ಇದೆ ಭಾರೀ ಸಮಸ್ಯೆ!

ಉಳಿದ ಮೂರು ವರ್ಷ ಬಿಎಸ್‌ವೈ ಸುಗಮವಾಗಿ ಸರ್ಕಾರ ನಡೆಸಬೇಕೆಂದು ಪ್ರಾರ್ಥಿಸಿದ ಅಭಿಮಾನಿಗಳು ದೇವಾಲಯದ ಸುತ್ತ ಉರುಳು ಸೇವೆ ಸಲ್ಲಿಸಿದ್ದಾರೆ. ಪೂಜೆ ಮೂಲಕ ಯಡಿಯೂರಪ್ಪ ಅಭಿಮಾನಿಗಳು ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ, ರೇವಣ್ಣಗೆ ಟಾಂಗ್ ಕೊಟ್ಟಿದ್ದಾರೆ.

PREV
click me!

Recommended Stories

ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್! ಏನಿದು ಪ್ರಕರಣ?
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!