ಮೈಸೂರು ರಾಜವಂಶಸ್ಥರಿಂದಲೇ ಕೆಆರ್ ಎಸ್ ಡ್ಯಾಂಗೆ ಕಂಟಕ?

By Web DeskFirst Published Oct 2, 2018, 1:29 PM IST
Highlights

ಮೈಸೂರು ರಾಜವಂಶಸ್ಥರಿಂದಲೇ ಕೆಆರ್ ಎಸ್ ಡ್ಯಾಂಗೆ ಎದುರಾಯ್ತಾ ಕಂಟಕ? ಇಂತದೊಂದು ಆರೋಪ ಮೈಸೂರು ರಾಜವಂಶಸ್ಥರ ಮೇಲೆ ಕೇಳಿಬಂದಿದೆ. ಏತಕ್ಕೆ ಇಲ್ಲಿದೆ ಫುಲ್ ಡಿಟೇಲ್ಸ್.

ಮಂಡ್ಯ, [ಅ.2]:  ಬೇಬಿ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್ ವಿರುದ್ಧ ದೂರು ದಾಖಲಾಗಿದೆ. 

ಮಂಡ್ಯದ ಬಿಜೆಪಿ ಕಾರ್ಯಕರ್ತ ಸಿ.ಟಿ.ಮಂಜುನಾಥ್ ಎನ್ನುವರು ಮಂಡ್ಯ ಡಿಸಿ ಮೂಲಕ ಸರ್ಕಾರದ ಮುಖ್ಯಕಾರ್ಯದರ್ಶಿಗೆ ರಾಜವಂಶಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ. 

ಬೇಬಿ ಬೆಟ್ಟದ ಸರ್ವೇ ನಂ.1ರ 1625 ಎಕರೆ ಭೂಮಿ ರಾಜವಂಶಕ್ಕೆ ಸೇರಿದ್ದು. ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ರಾಜಮಾತೆ ಪ್ರಮೋದಾದೇವಿ ಅವರು ಪಾಂಡವಪುರ ತಹಶೀಲ್ದಾರ್ ಗೆ ಪತ್ರ ಬರೆದಿದ್ದರು. 

ತಮ್ಮ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳಬೇಕಿರುವುದು ಮಾಲೀಕರ ಕರ್ತವ್ಯ. ಆದರೆ ಬೇಬಿ ಬೆಟ್ಟದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ತಮ್ಮ ಆಸ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ರೂ ರಾಜವಂಶಸ್ಥರು ಮೌನವಿದ್ದಾರೆ. 

ಇದರಿಂದ ಕೆ.ಆರ್​​.ಎಸ್. ಡ್ಯಾಂಗೂ ಅಪಾಯವಿದೆ. ಹಾಗಾಗಿ ರಾಜವಂಶಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿರುವುದಾಗಿ ಮಂಜುನಾಥ್​ ಹೇಳಿದ್ದಾರೆ.

click me!