ಸ್ಫೋಟಕ ಸುದ್ದಿ: ಕೆಆರ್‌ಎಸ್ ಡ್ಯಾಂಗೆ ಕಾದಿದೆ ಗಂಡಾಂತರ!

By Web DeskFirst Published Sep 27, 2018, 10:38 AM IST
Highlights

ಕಾವೇರಿ ಕಣಿವೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್ ಎಸ್ ಡ್ಯಾಂ)ಗೆ ಕಂಟಕ ಇದೆ ಎಂದು ಆಘಾತಕಾರಿ ಸುದ್ದಿಯೊಂದು ತಿಳಿದುಬಂದಿದೆ.

ಬೆಂಗಳೂರು, [ಸೆ.27]:  ಕಾವೇರಿ ಕಣಿವೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟು (ಕೆಆರ್ ಎಸ್ ಡ್ಯಾಂ)ಗೆ ಕಂಟಕ ಇದೆ ಎಂದು ಆಘಾತಕಾರಿ ಸುದ್ದಿಯೊಂದು ತಿಳಿದುಬಂದಿದೆ.

ಮಂಡ್ಯ ಜಿಲ್ಲೆಯ ಜನರ ಜೀವಾಳು ಕೆಆರ್ ಎಸ್ ಡ್ಯಾಂಗೆ ಗಂಡಾಂತರ ಇದೆ ಎಂದು ಕರ್ನಾಟಕ ರಾಜ್ಯ ಸೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸ್ಫೋಟಕ ವರದಿ ನೀಡಿದೆ.

ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಡ್ಯಾಂಗೆ ಕಂಟಕ ಎದುರಾಗಲಿದೆ ಎಂದು ರ್ನಾಟಕ ರಾಜ್ಯ ಸೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಂಡ್ಯ ಜಿಲ್ಲಾಧಿಕಾರಿಗೆ ವರದಿ ನೀಡಿದೆ.

ಡ್ಯಾಂನ 15 ರಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧಿಸುವಂತೆ ಮಂಡ್ಯ ಜಿಲ್ಲಾಧಿಕಾರಿಗೆ ಕರ್ನಾಟಕ ರಾಜ್ಯ ಸೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಸಲಹೆ ನೀಡಿದೆ.

ಅಣೆಕಟ್ಟೆ ಸುರಕ್ಷತೆ ದೃಷ್ಠಿಯಿಂದ ಈ ಹಿಂದೆ ಗಣಿಗಾರಿಕೆ ನಿಷೇಧಿಸಲಾಗಿತ್ತು.  ಪಾಂಡವಪುರ ತಹಸೀಲ್ದಾರ್ ಮೂರು ತಿಂಗಳು ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿದ್ದರು. ಆದರೆ,  ಪ್ರಭಾವಿ ವ್ಯಕ್ತಿಗಳ ಒತ್ತಡದಿಂದ ನಿಷೇಧ ತೆರವುಗೊಳಿಸಲಾಗಿತ್ತು,

click me!