Mandya: 23 ಮಂದಿ ನಾಮಪತ್ರ ವಾಪಸ್‌

By Kannadaprabha News  |  First Published Apr 25, 2023, 12:23 PM IST

ಮೇ 10 ರಂದು ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ಏಳು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದವರಲ್ಲಿ 23 ಮಂದಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡಿದ್ದಾರೆ.


ಮಂಡ್ಯ :  ಮೇ 10 ರಂದು ನಡೆಯಲಿರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ ಏಳು ಕ್ಷೇತ್ರಗಳಿಂದ ನಾಮಪತ್ರ ಸಲ್ಲಿಸಿದ್ದವರಲ್ಲಿ 23 ಮಂದಿ ತಮ್ಮ ಉಮೇದುವಾರಿಕೆಯನ್ನು ಹಿಂಪಡೆದುಕೊಂಡಿದ್ದಾರೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಎಚ್‌.ಡಿ.ದೇವಪ್ರಸಾದ್‌-ಪಕ್ಷೇತರ, ಎಲ್‌.ಕೆ.ಶಿವಣ್ಣ-ಪಕ್ಷೇತರ, ಸಿದ್ದರಾಜು-ಪಕ್ಷೇತರ ಮತ್ತು ಶರತ್‌ಚಂದ್ರ-ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 4 ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸಿ.ಪ್ರಕಾಶ್‌-ಪಕ್ಷೇತರ ಮತ್ತು ಸಿ.ಟಿ.ಬೀರೇಶ್‌-ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 2 ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದಾರೆ.

Tap to resize

Latest Videos

ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಪಿ.ವಿ ಸುಂದರಮ್ಮ -ಪಕ್ಷೇತರ, ಸಿ.ಎಸ್‌.ಪುಟ್ಟರಾಜು -ಪಕ್ಷೇತರ ಮತ್ತು ಟಿ.ವಿ.ಅರುಣಕುಮಾರ್‌ -ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 3 ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.

ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಡಾ.ಹೆಚ್‌.ಕೃಷ್ಣ- ಪಕ್ಷೇತರ, ಎಚ್‌.ಎನ್‌ ಯೋಗೇಶ್‌- ಪಕ್ಷೇತರ, ಮಹಾಲಿಂಗಪ್ಪ (ಮಹಾಲಿಂಗೇಗೌಡ)- ಪಕ್ಷೇತರ, ಎಸ್‌.ಜೆ.ಮಂಜುನಾಥ್‌-ಪಕ್ಷೇತರ, ಕೆ.ಎಸ್‌ ಮಲ್ಲಿಕಾರ್ಜುನ-ಪಕ್ಷೇತರ, ಕೆ.ಪಿ ಆನಂದ-ಪಕ್ಷೇತರ ಮತ್ತು ಡಿ.ಎಸ್‌.ರವಿಕುಮಾರ್‌-ಪಕ್ಷೇತರ ಅಭ್ಯರ್ಥಿ ಸೇರಿ ಒಟ್ಟು 7 ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.

ಆಮ್‌ ಆದ್ಮಿಯಿಂದ 212ರ ಪೈಕಿ 17 ಮಹಿಳೆಯರಿಗೆ ಟಿಕೆಟ್‌

 ಮೈಸೂರು  :  ಇತ್ತೀಚೆಗೆ ‘‘ರಾಷ್ಟ್ರೀಯ ಪಕ್ಷ’ ಎಂಬ ಮಾನ್ಯತೆ ಪಡೆದ ಆಮ್‌ ಆದ್ಮಿ ಪಾರ್ಟಿಯು ಕರ್ನಾಟಕದಲ್ಲಿ 212 ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಪೈಕಿ,ಮಿಕ್ಕೆಲ್ಲ ಪಕ್ಷಗಳಿಗಿಂತ ಹೆಚ್ಚು, 17 ಮಹಿಳೆಯರಿಗೆ ಆಪ್‌ ಟಿಕೆಟ್‌ ನೀಡಿದೆ ಜಿಲ್ಲಾ ಮಾಧ್ಯಮ ಉಸ್ತುವಾರಿ ಜಿ.ಆರ್‌. ವಿದ್ಯಾರಣ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೇವಲ 36 ಕ್ಷೇತ್ರಗಳು ಪರಿಶಿಷ್ಟಜಾತಿಗೆ ಮೀಸಲಾಗಿದ್ದರೂ ಸಹ ಆಪ್‌ 49 ಪರಿಶಿಷ್ಟಜಾತಿಗೆ ಸೇರಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಇದು ಮಿಕ್ಕೆಲ್ಲಾ ಪಕ್ಷಗಳಿಗಿಂತಲೂ ಅಧಿಕ. ಅದೇ ರೀತಿಯಲ್ಲಿ 10 ಎಸ್‌.ಟಿ., 40 ಲಿಂಗಾಯತ, 29 ಒಕ್ಕಲಿಗ, 25 ಮುಸ್ಲಿಂ, 20 ಹಿಂದುಳಿದ ವರ್ಗಗಳು, 6 ಈಡಿಗ, 5 ಮರಾಠ, 4 ರೆಡ್ಡಿ, 4 ಕ್ರಿಶ್ಚಿಯನ್‌, 3 ಕೊಡವ. 2 ಜೈನ್‌ ಹಾಗೂ 5 ಬ್ರಾಹ್ಮಣರಿಗೂ ಟಿಕೆಟ್‌ ನೀಡಿದೆ.

212 ಅಭ್ಯರ್ಥಿಗಳು ಎಲ್ಲರಂತೆ ಜನ ಸಾಮಾನ್ಯರು; ಇವರಲ್ಲಿ ಬಡವರು-ಶ್ರೀಮಂತರು ಎಲ್ಲರೂ ಇದ್ದಾರೆ. ಬೇರೆ ಬೇರೆ ವೃತ್ತಿಯಲ್ಲಿ ಚೆನ್ನಾಗಿ ಸಂಪಾದನೆ ಮಾಡಿದ ಮಾತ್ರಕ್ಕೆ ಅವರು ಜನಸಾಮಾನ್ಯರೆಂಬ ಸ್ಥಾನ ಕಳೆದುಕೊಳ್ಳುವುದಿಲ್ಲ. ಪ್ರಥಮ ಬಾರಿಗೆ ಸ್ಪರ್ಧೆ ಮಾಡುತ್ತಿರುವವÃ Üಪೈಕಿ ಚುನಾವಣಾ ನಾಮಪತ್ರದೊಂದಿಗೆ ಕಟ್ಟಲು ಠೇವಣಿ ಹಣ ಹೊಂದಿಸುವುದೂ ಕಷ್ಟವಾಗಿ, ತಮ್ಮ ಗೋಲಕ ಒಡೆದು ಒಂದು-ಎರಡು ರುಪಾಯಿ ನಾಣ್ಯಗಳಿಂದ ರೂ. ಐದು ಸಾವಿರ ಠೇವಣಿ ಕಟ್ಟಿರುವ ಬಡ ರೈತರೂ ಇದ್ದಾರೆ. ಆಮ್‌ ಆದ್ಮಿ ಪಾರ್ಟಿ ಬ್ಯಾಂಕ್‌ ಬ್ಯಾಲೆನ್ಸ್‌ ನೋಡಿ ಇವರಿಗೆ ಟಿಕೇಟ್‌ ನೀಡಿಲ್ಲ, ಇವರ ಜಾತಿ-ಧರ್ಮ ನೋಡಿ ಟಿಕೆಟ್‌ ನೀಡಿಲ್ಲ. ಕೆಲವೆಡೆ ಸಾಮಾನ್ಯ ಮತ್ತು ಕಾಯ್ದಿರಿಸಿದ ಕ್ಷೇತ್ರಗಳಲ್ಲಿಪರಿಶಿಷ್ಟಪಂಗಡಕ್ಕೆ ಸೇರಿದ ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ ಎಲ್ಲಾ 224 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ ಎಂಬುದನ್ನು ಬಿಟ್ಟರೆ ಆಮ್‌ ಆದ್ಮಿ ಪಾರ್ಟಿ ಈ ಚುನಾವಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದ ಅವರು ವಿವರಿಸಿದ್ದಾರೆ.

ನಮ್ಮ ಅಭ್ಯರ್ಥಿಗಳ ಪೈಕಿ 7 ಡಾಕ್ಟರ್‌, 14 ಇಂಜಿನಿಯರ್‌, 20 ವಕೀಲರು, 10 ಶಿಕ್ಷಕರು, 30 ರೈತರು, 29 ಸಮಾಜ ಸೇವಕರು, 2 ಕೃಷಿ ವಿಜ್ಞಾನಿಗಳು, 10 ನಿವೃತ್ತ ಸರಕಾರಿ ನೌಕರರು, 4 ಎಂ.ಟೆಕ್‌., 3 ಪಿ.ಎಚ್‌.ಡಿ., 36 ಸ್ನಾತಕ ಪದವೀಧರರು, 66 ಸ್ನಾತಕೋತ್ತರರು, 63 ವ್ಯಾಪಾರಸ್ಥರು, 10 ಗುತ್ತಿಗೆದಾರರು, 14 ಸ್ವಂತ ಉದ್ಯೋಗಸ್ಥರು,8 ಐಟಿ ನೌಕರರು, 23 ಎಸ್‌.ಎಸ್‌.ಎಲ್‌.ಸಿ, 35 ಪಿ.ಯು.ಸಿ. ಓದಿದವರು ಇದ್ದಾರೆ. ಇವರಲ್ಲಿ ಹಲವರು ದೇಶ ವಿದೇಶದ ಪತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದವರಿದ್ದರೆ ಕೆಲವರುದೇಶ ವಿದೇಶದ ಪತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿ, ಬಿಟ್ಟು ಸಮಾಜ ಸೇವೆಗೆಂದು ಇಲ್ಲಿಗೆ ಹಿಂತಿರುಗಿದವರೂ ಇದ್ದಾರೆ. ಕೆಲವರು ತಮ್ಮ ವಿದ್ಯಾರ್ಹತೆ/ಉದ್ಯೋಗ ತಿಳಿಸಿಲ್ಲ. ಇವರ ಪೈಕಿ ಓರ್ವ ಹೋಟೆಲ್‌ ಕಾರ್ಮಿಕ, ಓರ್ವ ಬಸ್‌ ಕಂಡಕ್ಟರ್‌ ಮತ್ತು ಓರ್ವ ಆಟೋ ಡ್ರೆತ್ರೖವರ್‌ ಸಹ ಇದ್ದಾರೆ.

ಆಮ್‌ ಆದ್ಮಿ ಪಾರ್ಟಿರಾಜಕೀಯದ ವ್ಯಾಖ್ಯಾನವನ್ನು ಬದಲಿಸಲು ಬಂದಿದೆ. ನಮ್ಮ ಚುನಾವಣಾ ವಿಷಯಗಳು ಕೇವಲ ಜನ ಸಾಮಾನ್ಯರಿಗೆ ಭ್ರಷ್ಟಾಚಾರದಿಂದ ಮುಕ್ತಿ, ಒಳ್ಳೆಯ ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ, ರೈತರಿಗೆ ಅವರ ಬೆಳೆಗೆ ಸೂಕ್ತ ಬೆಂಬಲ ಬೆಲೆ, ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಸುರಕ್ಷೆ, ವೃದ್ಧರಿಗೆ ಸಮ್ಮಾನದ ಜೀವನ, ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿ, ಇವುಗಳ ಮೇಲೆ ಮಾತನಾಡುತ್ತೇವೆ, ಅಷ್ಟೇ ಅಲ್ಲ ಮಿಕ್ಕವರನ್ನೂ ಈ ವಿಷಯದ ಮೇಲೆ ಚರ್ಚೆ ಮಾಡುವಂತೆಒತ್ತಾಯಿಸುತ್ತೇವೆ. ನಮ್ಮ ಪಕ್ಷ ಅಧಿಕಾರದಲ್ಲಿರುವ ದೆಹಲಿ ಮತ್ತು ಪಂಜಾಬಿನಲ್ಲಿ ಇದುವರೆಗೆ ಏನು ಮಾಡಿದೆ ಎಂಬುದನ್ನು ಜನರಿಗೆ ತೋರಿಸಿ ಮತ ಯಾಚಿಸುತ್ತಿದ್ದೇವೆ. ಜೊತೆಗೆ ಈ ರಾಜ್ಯಕ್ಕೆ ನಮ್ಮ ಪಕ್ಷದ ಮತ್ತು ಅವರವರ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿಗಳ ಮುನ್ನೋಟ ಏನಿದೆ ಎಂಬುದನ್ನು ವಿವರಿಸುತ್ತಿದ್ದೇವೆ ಎಂದಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕೆಂಪೇಗೌಡ-ಪಕ್ಷೇತರ, ಎಸ್‌.ಮಂಜುನಾಥ್‌-ಪಕ್ಷೇತರ ಮತ್ತು ಎಂ.ಸಿ.ಚಿದಂಬರ ಪಕ್ಷೇತರ ಸೇರಿ ಒಟ್ಟು 3 ಅಭ್ಯರ್ಥಿಗಳು ನಾಮಪತ್ರ ಹಿಂದಕ್ಕೆ ಪಡೆದಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ವೆಂಕಟೇಶ್‌-ಪಕ್ಷೇತರ, ಮುಜಾಮಿಲ್‌ ಪಾಷ- ಪಕ್ಷೇತರ ಮತ್ತು ಕೆ.ಎಂ ಲೋಹಿತ್‌ ಗೌಡ-ಪಕ್ಷೇತರ ಸೇರಿ 3 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್‌ ಪಡೆದಿದ್ದರೆ, ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಿಂದ ಕೆ.ಮೀನಾಕ್ಷಮ್ಮ -ಪಕ್ಷೇತರ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದಾರೆ.

 

23 ಮಂದಿ ನಾಮಪತ್ರ ವಾಪಸ್‌

ತುಮಕೂರು: ನಾಮಪತ್ರ ವಾಪಸ್‌ ಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ಜಿಲ್ಲೆಯಲ್ಲಿ 23 ಮಂದಿ ವಾಪಸ್‌ ಪಡೆದಿದ್ದಾರೆ. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಈಗ ಕಣದಲ್ಲಿ 131 ಮಂದಿ ಇದ್ದಾರೆ. ಈ ಪೈಕಿ 128 ಪುರುಷರು ಮತ್ತು 3 ಮಹಿಳೆಯರು ಸೇರಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 13, ತಿಪಟೂರಿನಲ್ಲಿ 12, ತುರುವೇಕೆರೆಯಲ್ಲಿ 11, ಕುಣಿಗಲ್‌ನಲ್ಲಿ 8, ತುಮಕೂರು ನಗರದಲ್ಲಿ 14, ತುಮಕೂರು ಗ್ರಾಮಾಂತರದಲ್ಲಿ 13, ಕೊರಟಗೆರೆ 12, ಗುಬ್ಬಿ 10, ಶಿರಾ 15, ಪಾವಗಡ 11, ಮಧುಗಿರಿಯಲ್ಲಿ 12 ಮಂದಿ ಕಣದಲ್ಲಿದ್ದಾರೆ.

click me!