'ಸಿದ್ದರಾಮಯ್ಯಗೆ ಅಷ್ಟೊಂದು ಆಸ್ತಿ ಎಲ್ಲಿಂದ ಬಂತು?'

By Kannadaprabha News  |  First Published Apr 25, 2023, 12:12 PM IST

ಸಮಾಜವಾದದಿಂದ ಬಂದ ಸಿದ್ದರಾಮಯ್ಯನವರ ಉದ್ಯೋಗ ಏನು? ಇಷ್ಟೊಂದು ಆಸ್ತಿ ಅವರಿಗೆ ಎಲ್ಲಿಂದ ಬಂತು ಎಂಬುದನ್ನು ಸಾಬೀತುಪಡಿಸಿ ನಂತರ ಬೇರೆಯವರ ವಿರುದ್ದ ಟೀಕೆ ಮಾಡಲಿ ಎಂದು ಶಾಸಕ ಸಾ.ರಾ. ಮಹೇಶ್‌ ಅಕ್ರೋಶ ವ್ಯಕ್ತಪಡಿಸಿದರು.


 ಭೇರ್ಯ :  ಸಮಾಜವಾದದಿಂದ ಬಂದ ಸಿದ್ದರಾಮಯ್ಯನವರ ಉದ್ಯೋಗ ಏನು? ಇಷ್ಟೊಂದು ಆಸ್ತಿ ಅವರಿಗೆ ಎಲ್ಲಿಂದ ಬಂತು ಎಂಬುದನ್ನು ಸಾಬೀತುಪಡಿಸಿ ನಂತರ ಬೇರೆಯವರ ವಿರುದ್ದ ಟೀಕೆ ಮಾಡಲಿ ಎಂದು ಶಾಸಕ ಸಾ.ರಾ. ಮಹೇಶ್‌ ಅಕ್ರೋಶ ವ್ಯಕ್ತಪಡಿಸಿದರು.

ಹೊಸ ಅಗ್ರಹಾರ ಹೋಬಳಿಯ ಮಾರಗೌಡನಹಳ್ಳಿ ಗ್ರಾಮದ ಬಸವೇಶ್ವರ ದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭಿಸಿ ಮಾತನಾಡಿದ ಅವರು, ವೀರಶೈವ- ಲಿಂಗಾಯುತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಹೇಳಿಕೆ ಅಕ್ಷಮ್ಯ ಅಪರಾದ ಎಂದು ದೂರಿದರು.

Latest Videos

undefined

ಸಿದ್ದರಾಮಯ್ಯ ಅವರು ರೈತರು ಅಲ್ಲ, ವ್ಯಾಪರಸ್ಥರು ಅಲ್ಲ, ಉದ್ದಿಮೆದಾರರು ಅಲ್ಲ, ಅದರೆ ಇಷ್ಟೊಂದು ಆಸ್ತಿ ಸಂಪಾದನೆ ಮಾಡಲು ಭ್ರಷ್ಟಾಚಾರದಿಂದ ಅಲ್ಲದೇ ಬೇರೆ ಎಲ್ಲಿಂದ ಬಂತು ಎಂಬುದನ್ನು ಅವರೇ ಬಹಿರಂಗ ಪಡಿಸಲಿ ಎಂದು ಸವಾಲೆಸೆದರು.

ನಾವು ರಿಯೆಲ…ಎಸ್ಟೆಟ್‌ ಉದ್ದಿಮೆಯಾಗಿದ್ದು ರಾಜಕಾರಣದಲ್ಲಿರುವವರು ಒಬ್ಬಬರು ಒಂದೊಂದು ಉದ್ಯೋಗದಲ್ಲಿ ತೊಡಗಿದ್ದು ಅವರ ಅಸ್ತಿವಿವರಗಳನ್ನು ಆದಾಯ ತೆರಿಗೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿರುತ್ತಾರೆ. ಅದರೆ ರಾಜಕೀಯವನ್ನೇ ಉದ್ಯೋಗ ಮಾಡಿಕೊಂಡಿರುವ ಸಿದ್ದರಾಮಯ್ಯ ಬೇರೆಯವರನ್ನು ಟೀಕೆ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.

ನನ್ನ 15 ವರ್ಷದ ಅಧಿಕಾರವಧಿಯಲ್ಲಿ ಎಂದು ಯಾರಿಂದಲೂ ಸ್ವಂತಕ್ಕಾಗಿ ಒಂದು ರೂಪಾಯಿ ಹಣವನ್ನು ಪಡೆದಿಲ್ಲ ಮತ್ತು ನಾನು 2004 ರ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ನನ್ನ ಅಸ್ತಿ ಎಷ್ಟುಇತ್ತು ಮತ್ತು 2008, 2013, 2018 ರಲ್ಲಿ ಹಾಗೂ ಇಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮತ್ತು ತೆರಿಗೆ ಇಲಾಖೆಗೆ ಸಲ್ಲಿಸಿರುವ ಮಾಹಿತಿಯನ್ನು ಒಂದು ಸಾರಿ ಪರಿಶೀಲಿಸಿ ನೋಡಿ ನನ್ನ ಸಾಲ . 20 ಕೋಟಿ ಆಗಿದೆ ಎಂದು ಮತದಾರರಿಗೆ ತಿಳಿಸಿದರು.

ನಾನು ಪ್ರತಿ ಗ್ರಾಮದಲ್ಲಿಯೂ ಪ್ರತಿಯೊಬ್ಬರ ಮನೆಗೆ ಬಂದು ಮತ ಕೇಳಲು ಸಮಯದ ಅಭಾವ ಇದ್ದು ಸಾಧ್ಯವಿಲ್ಲ. ಪ್ರತಿಯೊಬ್ಬ ಕಾರ್ಯಕರ್ತನು ಒಬ್ಬ ಶಾಸಕನಾಗಿ ಒಬ್ಬ ಅಭ್ಯರ್ಥಿಯಾಗಿ ನೀವೇ ಪ್ರತಿಯೊಬ್ಬರ ಮನೆಗೆ ತೆರಳ 15 ವರ್ಷಗಳ ಅಭಿವೃದ್ಧಿಯ ಬಗ್ಗೆ ಮಾಹಿತಿ ನೀಡಿ ಮತಕೇಳುವ ಜವಾಬ್ದಾರಿ ನಿಮ್ಮದೇ ನೀವೆ ಅಭ್ಯರ್ಥಿ ಎಂದು ಮನವರಿಕೆ ಮಾಡಿ ಎಂದ ಶಾಸಕ ಸಾ.ರಾ. ಮಹೇಶ್‌ ಕೋರಿದರು.

ಪ್ರತಿಸ್ಪರ್ಧಿ ಆಸ್ತಿ ಎಷ್ಟು?

ಎರಡು ಚುನಾವಣೆಯಲ್ಲಿ ಸೋತಿ ಎಲ್ಲವನ್ನು ಕಳೆದುಕೊಂಡೆ ಎನ್ನುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಚುನಾಯಿತನಾಗುವಾಗ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ಎಷ್ಟು? ಈಗಿರುವ ಅಸ್ತಿ ಎಷ್ಟು? ತಾಲೂಕಿನಲ್ಲಿ ಎರಡು ಪೆಟ್ರೋಲ್‌ ಬಂಕ್‌ ಮತ್ತು ಬೆಂಗಳೂರಿನಲ್ಲಿ ಗ್ಯಾಸ್‌ ಏಜಿನ್ಸಿ ಸೇರಿದಂತೆ ಸಂಪಾದನೆ ಮಾಡಿರುವ ಅಸ್ತಿ ಎಲ್ಲಿಂದ ಬಂತು ಹಾಗಾದರೆ ಕಳೆದುಕೊಂಡಿರುವುದು ಏನು ಎಂಬುದನ್ನು ಸಾರ್ವಜನಿಕರಿಗೆ ತಿಳಿಸಲಿ ಎಂದು ಸವಾಲು ಎಸೆದರು.

ಅಡಗೂರು, ಗಳಿಗೆಕೆರೆ, ದೊಡ್ಡೇಕೊಪ್ಪಲು, ಕಾರ್ಗಹಳ್ಳಿ, ಬಡಕನಕೊಪ್ಪಲು, ಮಂಚನಹಳ್ಳಿ, ಬಾಲೂರು, ಬಾಲೂರು ಹೊಸಕೊಪ್ಪಲು, ಹಂಪಾಪುರ ಗ್ರಾಮದಲ್ಲಿ ಸಭೆಯಲ್ಲಿ ಶಾಸಕ ಸಾ.ರಾ. ಮಹೇಶ್‌ ಮಾತನಾಡಿ ಮತಯಾಚಿಸಿದರು.

ಈ ವೇಳೆ ಅಖಿಲ ವೀರಶೈವ ಲಿಂಗಾಯತ ಮಹಾಸಭಾದ ಮಾಜಿ ಅಧ್ಯಕ್ಷ ಅಡಗೂರು ಚೆನ್ನಬಸಪ್ಪ, ಜಿಪಂ ಮಾಜಿ ಸದಸ್ಯ ಅಚ್ಯುತಾನಂದ್‌, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ತಾಲೂಕು ವಿಶ್ವಕರ್ಮ ಸಮಾಜದ ಮುಖಂಡ ನಂಜುಂಡಚಾರ್‌, ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಮೈಮುಲ್‌ ನಿರ್ದೇಶಕ ಎ.ಟಿ. ಸೋಮಶೇಖರ್‌, ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ…. ರಮೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಹಂಪಾಪುರ ಕುಮಾರ್‌, ಮೆಡಿಕಲ್‌ ರಾಜಣ್ಣ, ಉಪಾಧ್ಯಕ್ಷ ಡೈರಿ ಪ್ರಕಾಶ, ಮಿರ್ಲೆ ತುಕರಾಂ, ಪ್ರಧಾನ ಕಾರ್ಯದರ್ಶಿ ಮಿರ್ಲೆ ಧನಂಜಯ ಮೊದಲಾದವರು ಇದ್ದರು.

click me!