ಒಂದೇ ದಿನದಲ್ಲಿ ಕೊರೋನಾ ಪಾಸಿಟಿವ್, ನೆಗೆಟಿವ್: 84 ಸಾವಿರ ಬಿಲ್

By Kannadaprabha NewsFirst Published Jul 28, 2020, 10:53 AM IST
Highlights

ಸುಳ್ಯದ ಉದ್ಯಮಿಗೆ ಕೊರೋನಾ ಪಾಸಿಟಿವ್‌ ವರದಿ ಬಂದ ಒಂದೇ ದಿನದಲ್ಲಿ ಮತ್ತೊಂದು ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿರುವುದರಿಂದ ಅವರು ಪರೀಕ್ಷಾ ವರದಿಯ ಮೇಲೆಯೆ ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿನಾ ಕಾರಣ ತನ್ನ ಉದ್ಯಮದ ಸಿಬ್ಬಂದಿ ಕ್ವಾರಂಟೈನ್‌ ಸಂಕಷ್ಟಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ಮಂಗಳೂರು(ಜು.28): ಸುಳ್ಯದ ಉದ್ಯಮಿಗೆ ಕೊರೋನಾ ಪಾಸಿಟಿವ್‌ ವರದಿ ಬಂದ ಒಂದೇ ದಿನದಲ್ಲಿ ಮತ್ತೊಂದು ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿರುವುದರಿಂದ ಅವರು ಪರೀಕ್ಷಾ ವರದಿಯ ಮೇಲೆಯೆ ಶಂಕೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿನಾ ಕಾರಣ ತನ್ನ ಉದ್ಯಮದ ಸಿಬ್ಬಂದಿ ಕ್ವಾರಂಟೈನ್‌ ಸಂಕಷ್ಟಎದುರಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ಸುಳ್ಯದ ವಾಣಿಜ್ಯೋದ್ಯಮಿ, ದಿನೇಶ್‌ ಅಡ್ಕಾರ್‌ ಅವರು ಹೃದಯ ಸಂಬಂಧಿ ಸಮಸ್ಯೆಯ ಪರೀಕ್ಷೆಗೋಸ್ಕರ ಸುಳ್ಯದ ವೈದ್ಯರಲ್ಲಿಗೆ ಹೋದಾಗ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರನ್ನು ಕಾಣುವಂತೆ ಸಲಹೆ ನೀಡಿದ್ದರು. ಅದರಂತೆ ಅಲ್ಲಿಗೆ ಹೋದಾಗ ಅಲ್ಲಿ ಕೊರೋನಾ ಟೆಸ್ವ್‌ ಮಾಡಿಸಬೇಕಾಯಿತು. ಅದರ ವರದಿ ಪಾಸಿಟಿವ್‌ ಬದಿತ್ತು. ಜು.21ರಂದು ಗಂಟಲದ್ರವ ತೆಗೆದ ರಿಸಲ್ಟ್ ಜು.22ರಂದು ಸಂಜೆ ಬಂದಿತ್ತು.

ಆಪ್ತ ಸಹಾಯಕಿಗೆ ಸೋಂಕು; ನಿಂಬಾಳ್ಕರ್‌ ಕ್ವಾರಂಟೈನ್‌

ಜು.23ರಂದು ಅಲ್ಲಿಗೆ ಬಂದಿದ್ದ ವೈದ್ಯರ ಸಲಹೆಯಂತೆ ಪುನಃ ಗಂಟಲದ್ರವ ತೆಗೆದು ಖಾಸಗಿ ಆಸ್ಪತæಯೊಂದಕ್ಕೆ ಕಳುಹಿಸಿದಾಗ ಅಲ್ಲಿಯ ಫಲಿತಾಂಶ ನೆಗೆಟಿವ್‌ ಬದಿದೆ. ಆ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾಜ್‌ರ್‍ ಆಗಿದ್ದಾರೆ. ಆದರೆ ಒಂದು ದಿನದ ಅಂತರದಲ್ಲಿ ಈ ರೀತಿ ಪಾಸಿಟಿವ್‌ - ನೆಗೆಟಿವ್‌ ಬಂದಿರುವಂತದ್ದು ಕೊರೋನಾ ವರದಿಯ ಬಗ್ಗೆ ಶಂಕೆ ಮೂಡುವಂತೆ ಮಾಡಿದೆ. ನನಗೆ ಕೊರೊನಾದ ಯಾವ ಲಕ್ಷಣಗಳೂ ಇರಲಿಲ್ಲ.

ಕರ್ನಾಟಕ ಶೀಘ್ರ ದೇಶದ ಕೊರೋನಾ ಹಾಟ್‌ಸ್ಪಾಟ್‌: ರಾಜ್ಯಕ್ಕೆ ಹೊಸ ಆತಂಕ!

ಆದರೂ ಪಾಸಿಟಿವ್‌ ಬಂದುದರಿಂದ ನನ್ನ ಅಂಗಡಿಯ ಕೆಲಸಗಾರರನ್ನು ಕೂಡಾ ಕ್ವಾರಂಟೈನ್‌ನಲ್ಲಿರಲು ಅವರವರ ಊರಿನ ಗ್ರಾಮ ಪಂಚಾಯಿತಿಯವರು ತಿಳಿಸಿದ್ದಾರೆ. ಇದರಿಂದಾಗಿ ಕೆಲಸಗಾರರಿಲ್ಲದೆ ಅಂಗಡಿ ತೆರೆಯುವಂತಿಲ್ಲ. ಲಾಕ್‌ಡೌನ್‌ ಇದ್ದುದರಿಂದ ಕೆಲಸಗಾರರಿಗೂ, ನನಗೂ ಸಂಪರ್ಕವೇ ಇರಲಿಲ್ಲ. ಆದರೂ ಅವರೆಲ್ಲರನ್ನು ಮತ್ತು ಅವರ ಮನೆಯವರನ್ನು ಕ್ವಾರಂಟೈನ್‌ಗೆ ಒಳಪಡಿಸಿರುವುದರಿಂದ ಅವರಿಗೆಲ್ಲ ಆಗುತ್ತಿರುವ ತೊಂದರೆಗೆ ಯಾರು ಹೊಣೆ? ಎಂದು ಕೇಳುತ್ತಾರೆ.

ಆಸ್ಪತ್ರೆಯಲ್ಲಿ ನನಗೆ 84 ಸಾವಿರ ರು.. ಬಿಲ್‌ ಆಗಿದೆ. ನನ್ನ ಜತೆಗೆ ಆಸ್ಪತ್ರೆಗೆ ಬಂದಿದ್ದ ಶರತ್‌ ಅಡ್ಕಾರ್‌ ಅವರಿಗೆ ನೆಗೆಟಿವ್‌ ಬಂದಿದ್ದರೂ 2 ದಿನಕ್ಕೆ 21 ಸಾವಿರದ 300 ರು. ಬಿಲ್‌ ಆಗಿದೆ. ಕೊಟ್ಟದ್ದು ಎರಡು ಜಗ್‌ ಬಿಸಿ ನೀರು ಮಾತ್ರ. ಹಾಗಿದ್ದರೆ ಉದ್ದೇಶ ಪೂರ್ವಕವಾಗಿ ಏನೋ ನಡೆಯುತ್ತಿದೆ ಎಂಬ ಅನುಮಾನ ಬರುವುದಿಲ್ಲವೇ? ಎಂದು ಅಲವತ್ತುಕೊಂಡಿದ್ದಾರೆ.

ಈ ಬಾರಿಯ ರಕ್ಷಾಬಂಧನ ಸಂಭ್ರಮಕ್ಕೆ ತರಕಾರಿ ಬೀಜಗಳ ರಾಖಿ..!

ವರದಿ ನೆಗೆಟಿವ್‌ ಬಂದ ಬಳಿಕ ಶಂಕಿತರಿಗೆ ಕ್ವಾರಂಟೇನ್‌ ಆಗತ್ಯ ಇಲ್ಲ. ಈ ಪ್ರಕರಣದಲ್ಲಿ ಆರಂಭದಲ್ಲಿ ಪಾಸಿಟಿವ್‌ ವರದಿ ಬಂದ ಕಾರಣ ಕ್ವಾರಂಟೇನ್‌ಗೆ ಸೂಚಿಸಿರಬಹುದು. ವರದಿಯಲ್ಲಿ ಪಾಸಿಟಿವ್‌-ನೆಗೆಟಿವ್‌ ಇರುವ ಗೊಂದಲದ ವಿಚಾರ ಈಗಷ್ಟೇ ಗಮನಕ್ಕೆ ಬಂದಿದೆ, ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದ್ದಾರೆ.

click me!