ಈ ಬಾರಿಯ ರಕ್ಷಾಬಂಧನ ಸಂಭ್ರಮಕ್ಕೆ ತರಕಾರಿ ಬೀಜಗಳ ರಾಖಿ..!

By Kannadaprabha News  |  First Published Jul 28, 2020, 10:12 AM IST

ಪಕ್ಷಿಕೆರೆಯ ಸಾಮಾಜಿಕ ಕಾರ್ಯಕರ್ತ, ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ರಕ್ಷಾ ಬಂಧನದ ಪ್ರಯುಕ್ತ ಪರಿಸರ ಸ್ನೇಹಿ ಮರು ಉಪಯೊಗವಾಗುವಂತಹ, ವಿವಿಧ ಬಗೆಯ ತರಕಾರಿ ಬೀಜಗಳನ್ನು ಅಳವಡಿಸಿದ ರಾಖಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದಾರೆ.


ಮೂಲ್ಕಿ(ಜು.28): ಪಕ್ಷಿಕೆರೆಯ ಸಾಮಾಜಿಕ ಕಾರ್ಯಕರ್ತ, ಪೇಪರ್‌ ಸೀಡ್‌ ಸಂಸ್ಥೆಯ ನಿತಿನ್‌ ವಾಸ್‌ ಅವರು ರಕ್ಷಾ ಬಂಧನದ ಪ್ರಯುಕ್ತ ಪರಿಸರ ಸ್ನೇಹಿ ಮರು ಉಪಯೊಗವಾಗುವಂತಹ, ವಿವಿಧ ಬಗೆಯ ತರಕಾರಿ ಬೀಜಗಳನ್ನು ಅಳವಡಿಸಿದ ರಾಖಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದ್ದಾರೆ.

ಉದ್ಯಮಿ ನಿತಿನ್‌ ವಾಸ್‌ ಅವರು ರಕ್ಷಾ ಬಂಧನ ಪ್ರಯುಕ್ತ ಟೊಮೆಟೋ, ಸೌತೆಕಾಯಿ, ಕ್ಯಾಪ್ಸಿಕಂ ಮತ್ತು ತುಳಸಿ ಬೀಜಗಳಿಂದ ರಾಖಿಗಳನ್ನು ತಯಾರಿಸಿದ್ದಾರೆ. ರಕ್ಷಾ ಬಂಧನಕ್ಕೆ ಸ್ವಲ್ಪ ದಿನಗಳ ಕಾಲ ಕೈಗೆ ಕಟ್ಟಿಬಳಿಕ ರಾಖಿಗಳನ್ನು ಎಸೆಯುವ ಬದಲಿಗೆ ಈ ರಾಖಿಗಳನ್ನು ಬಳಸುವುದರಿಂದ ಅದನ್ನು ಎಸೆದಲ್ಲಿ ಗಿಡಗಳು ಬೆಳೆದು ಅದರಿಂದ ಫಲ ದೊರೆತು ಹಲವಾರು ಮಂದಿಗೆ ಪ್ರಯೋಜನವಾಗಲಿದೆ.

Tap to resize

Latest Videos

ರಾಮಮಂದಿರಕ್ಕೆ ಶಂಕುಸ್ಥಾಪನೆ: ಮುಸ್ಲಿಮರಿಂದಲೂ ಸಂಭ್ರಮಾಚರಣೆ!

ಈಗಾಗಲೆ ರಾಖಿಗಳನ್ನು ತಯಾರಿಸಿದ್ದು, ಕೋವಿಡ್‌-19 ನ ನಿರ್ಬಂಧದಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹಾಗೂ ಜನರಿಗೆ ತಲುಪಿಸಲು ಸಮಸ್ಯೆಯಾಗಿದೆ. ಆನ್‌ಲೈನ್‌, ವಾಟ್ಸ್ಯಾಪ್‌ ಮೂಲಕ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದಾರೆ.

ನಮ್ಮ ಎಲ್ಲಾ ಉತ್ಪನ್ನಗಳು ಪ್ಲಾಸ್ಟಿಕ್‌ ರಹಿತವಾಗಿದೆ. ಬೀಜ ಕಾಗದ ಮತ್ತು ಟೆರಾಕೋಟಾದಿಂದ ರಾಖಿಗಳನ್ನು ತಯಾರಿಸಿದ್ದು, ಕಳೆದ ವರ್ಷ ಸ್ವಾತಂತ್ರೋತ್ಸವ ದಿನಾಚರಣೆಗೆ 11 ಸಾವಿರ ಪೇಪರ್‌ ಸೀಡ್‌ ಧ್ವಜಗಳನ್ನು ತಯಾರಿಸಲಾಗಿತ್ತು. ಹೈದರಾಬಾದ್‌ ಮೂಲಕ ಸರ್ಕಾರೇತರ ಸಂಸ್ಥೆ ‘ಸಹಾಯ’ ಮತ್ತಿತರ ಅನೇಕ ಸ್ವಯಂ ಸೇವಕರು ಉತ್ಪನ್ನಗಳನ್ನು ಕೈಯಿಂದ ತಯಾರಿಸಲು ಸಹಾಯ ಮಾಡಿದ್ದಾರೆ.

ಕೋವಿಡ್‌-19ನಿಂದಾಗಿ ಕುಶಲಕರ್ಮಿಗಳಿಗೆ ತೊಂದರೆಯಾಗಿದ್ದು, ಮಾರ್ಕೆಟಿಂಗ್‌ಗಾಗಿ ಸಾಮಾಜಿಕ ಜಾಲತಾಣವನ್ನು ಬಳಸಿ ಕುಶಲ ಕರ್ಮಿಗಳ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ಸಮುದಾಯ ಸಂಪರ್ಕ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ನಿತಿನ್‌ ವಾಸ್‌ (9108754870) ತಿಳಿಸಿದ್ದಾರೆ.

click me!