ಸಿಯಾಳ ಕದ್ದ ಕರ್ಣ: ಪೊಲೀಸರಿಂದ ಎಚ್ಚರಿಕೆ

By Kannadaprabha News  |  First Published Oct 5, 2019, 3:07 PM IST

ಮಂಗಳೂರಿನಲ್ಲಿ ಕರ್ಣ ಎಂಬಾಂತ ಎಳನೀರು ಕದ್ದು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಐಕಳ ಪಲ್ಲದಡಿ ಎಂಬಲ್ಲಿ ತೋಟದಲ್ಲಿ ಸೀಯಾಳ ಕದ್ದ ಕರ್ಣನನ್ನು ಪೊಲೀಸರು ಬಂಧಿಸಿದ್ದಾರೆ.


ಮಂಗಳೂರು(ಅ.05): ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಐಕಳ ಪಲ್ಲದಡಿ ಎಂಬಲ್ಲಿ ತೋಟದಲ್ಲಿ ಸೀಯಾಳ ಕಳ್ಳÜತನ ಮಾಡಿದ ಆರೋಪದಲ್ಲಿ ಐಕಳ ನಿವಾಸಿ ಕರುಣಾಕರ್‌ ಯಾನೆ ಕರ್ಣ ಎಂಬಾತನನ್ನು ಬಂಧಿಸಲಾಗಿದ್ದು, ಉಳಿದಿಬ್ಬರು ಆರೋಪಿಗಳಾದ ಪ್ರವೀಣ, ವಿನಯ ಪರಾರಿಯಾದ ಘಟನೆ ನಡೆದಿದೆ.

ಐಕಳ ಪಲ್ಲದಡಿಯ ವಿಲಿಯಂ ಎಂಬವರ ತೋಟದಿಂದ ಮೂವರು ಆರೋಪಿಗಳು ಸುಮಾರು 100 ಸೀಯಾಳ ಕಳ್ಳತನ ಮಾಡುತ್ತಿದ್ದರು. ಇದನ್ನು ಗಮನಿಸುತ್ತಿದ್ದ ನೆರೆಮನೆಯವರು ತೋಟದ ಯಜಮಾನ ವಿಲಿಯಂ ಅವರಿಗೆ ತಿಳಿಸಿದ್ದು ಕೂಡಲೇ ಅವರು ಸ್ಥಳಕ್ಕೆ ಆಗಮಿಸಿದಾಗ ಸೀಯಾಳ ಕೊಯ್ಯುತಿದ್ದ ಆರೋಪಿ ಕರುಣಾಕರ ಯಾನೆ ಕರ್ಣ ಮರದಲ್ಲಿ ಸಿಕ್ಕಿ ಬಿದ್ದಿದ್ದಾನೆ.

Latest Videos

undefined

ಕಂಡಕ್ಟರ್ ಟಿಕೆಟ್ ಕೊಡಲ್ವಾ..? ಹಾಗಾದ್ರೆ ಉಚಿತವಾಗಿ ಪ್ರಯಾಣಿಸಿ

ಉಳಿದಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಆರೋಪಿಯನ್ನು ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮೂಲ್ಕಿ ಪೊಲೀಸರು ಆರೋಪಿಗೆ ಎಚ್ಚರಿಕೆ ನೀಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.

ವಿದ್ಯುತ್‌ ದೀಪಾಲಂಕಾರದಲ್ಲಿ ಜಗಮಗಿಸುತ್ತಿದೆ KRS

click me!