ಕೊನೆಗೂ ಈ ಗ್ರಾಮಕ್ಕೆ ಬಂತು ಸಾರಿಗೆ ಬಸ್‌!

By Web Desk  |  First Published Oct 5, 2019, 2:56 PM IST

ತಾಲೂಕಿನ ದೇವರಗುಡ್ಡ ಗ್ರಾಮಕ್ಕೆ ದೇವದುರ್ಗದಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ಸಂಚಾರವನ್ನು ಪ್ರಾರಂಭಿಸಿದೆ| ಬಸ್‌ ಸೌಕರ್ಯ ಕಲ್ಪಿಸಲು ಶಾಲಾ-ಕಾಲೇಜಿ ವಿದ್ಯಾರ್ಥಿಗಳು, ಗ್ರಾಮಸ್ಥರು ಅನೇಕ ವರ್ಷಗಳಿಂದ ಹೋರಾಟ ಮಾಡಿದ್ದರು| ಸಾರಿಗೆ ಸೌಲಭ್ಯವಿಲ್ಲದೇ ಇರುವುದರಿಂದ ಅನೇಕ ತೊಂದರೆ ಪಡುವಂತಾಗಿತ್ತು| 


ದೇವದುರ್ಗ(ಅ.5): ತಾಲೂಕಿನ ದೇವರಗುಡ್ಡ ಗ್ರಾಮಕ್ಕೆ ದೇವದುರ್ಗದಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ ಸಂಚಾರವನ್ನು ಬುಧವಾರ ಪ್ರಾರಂಭಿಸಿದೆ.

ಬಸ್‌ ಸೌಕರ್ಯ ಕಲ್ಪಿಸಲು ಶಾಲಾ-ಕಾಲೇಜಿ ವಿದ್ಯಾರ್ಥಿಗಳು, ಗ್ರಾಮಸ್ಥರು ಅನೇಕ ವರ್ಷಗಳಿಂದ ಹೋರಾಟ ಮಾಡಿದ್ದರು. ಸಾರಿಗೆ ಸೌಲಭ್ಯವಿಲ್ಲದೇ ಇರುವುದರಿಂದ ಅನೇಕ ತೊಂದರೆ ಪಡುವಂತಾಗಿತ್ತು. ಹೋರಾಟದ ಫಲವೇ ಗ್ರಾಮಕ್ಕೆ ಅಧಿಕಾರಿಗಳು ಬಸ್‌ ಸೌಲಭ್ಯ ಕಲ್ಪಿಸಿದ್ದಾರೆ ಎಂದು ವನವಾಸಿ ಕಲ್ಯಾಣ ಸಂಘಟನೆ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ ತಿಳಿಸಿದರು.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದೇವರಗುಡ್ಡ ಗ್ರಾಮಕ್ಕೆ ನೂತನ ಸಾರಿಗೆ ಬಸ್‌ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದರಿಂದ ಸೇವೆಗೆ ನಿಯೋಜನೆಗೊಂಡ ಚಾಲಕ ಮತ್ತು ಕಂಡಕ್ಟರ್‌, ಹೋರಾಟ ಕೈಗೊಂಡ ವನವಾಸಿ ಕಲ್ಯಾಣ ಸಂಘಟನೆ ಮುಖಂಡರಿಗೆ, ಹಿಂದೂ ಜಾಗರಣ ವೇದಿಕೆ ಮುಖಂಡ ನಿರಂಜನ್‌ರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶರಣ ಅಮಾತೇಶ್ವರ ಶಾಲಾ ಮುಖ್ಯಶಿಕ್ಷಕ ಶಂಕರಲಿಂಗಸ್ವಾಮಿ, ಜೇರಂಬಡಿ ಗ್ರಾ.ಪಂ.ಉಪಾಧ್ಯಕ್ಷ ಮಲ್ಲಿಕಾರ್ಜನ ದೊರೆ, ನಂದಣ್ಣ ದೊರೆ, ಭೀಮಣ್ಣ ಗೌಡ, ಮಲ್ಲಣ್ಣಗೌಡ, ಯಂಕಣ್ಣ ದೊರೆ, ರೆಡ್ಡೆಪ್ಪಗೌಡ, ಹನುಮೇಶ ನಾಯಕ, ಮಲ್ಲನಗೌಡ ಪಾಟೀಲ್‌, ಹನುಮಂತ್ರಾಯ ದೊರೆ, ಶಿವಣ್ಣ ಸೇರಿ ಇತರರು ಇದ್ದರು.

ದೇವದುರ್ಗ ತಾಲೂಕಿನ ದೇವರಗುಡ್ಡ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿದ್ದರಿಂದ ಈಶಾನ್ಯ ಸಾರಿಗೆ ಸಿಬ್ಬಂದಿಗೆ, ಮುಖಂಡರಿಗೆ ಗ್ರಾಮಸ್ತರು ಸನ್ಮಾನಿಸಿದರು.
 

click me!