ಟ್ರಾವೆಲ್ಸ್ ಏಜೆನ್ಸಿಗಳಿಗೆ ಕಾರು ಬಾಡಿಗೆ ಕೊಡಿಸುವ ನೆಪದಲ್ಲಿ ವಾಹನಗಳ ಮಾಲಿಕರಿಗೆ ವಂಚಿಸಿ ಹಣ ಲಪಟಾಯಿಸುತ್ತಿದ್ದ ಇಬ್ಬರನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು(ಫೆ.20): ಟ್ರಾವೆಲ್ಸ್ ಏಜೆನ್ಸಿಗಳಿಗೆ ಕಾರು ಬಾಡಿಗೆ ಕೊಡಿಸುವ ನೆಪದಲ್ಲಿ ವಾಹನಗಳ ಮಾಲಿಕರಿಗೆ ವಂಚಿಸಿ ಹಣ ಲಪಟಾಯಿಸುತ್ತಿದ್ದ ಇಬ್ಬರನ್ನು ಯಲಹಂಕ ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಖಲೀಲ್‌ವುಲ್ಲಾ ಮತ್ತು ಅಕ್ಷಯ್ ಬಂಧಿತರಾಗಿದ್ದು, ಆರೋಪಿಗಳಿಂದ .40 ಲಕ್ಷ ಮೌಲ್ಯದ ಎಂಟು ಕಾರುಗಳನ್ನು ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿಗಳಾದ ನಿರಂಜನ, ಸೋಮಶೇಖರ ಹಾಗೂ ಮಾದೇಶನಿಗೆ ಹುಡುಕಾಟ ನಡೆದಿದೆ. ಇತ್ತೀಚಿಗೆ ಕಾರು ನಾಪತ್ತೆ ಬಗ್ಗೆ ದೂರುಗಳು ಬಂದಿದ್ದವು. ಅದರನ್ವಯ ತನಿಖೆ ನಡೆಸಿದಾಗ ವಂಚಕರ ಜಾಲ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾದಿನಿ ಮೇಲಿನ ಮೋಹಕ್ಕೆ ಆಕೆ ಪತಿಯ ಕೊಲೆ ಮಾಡಿಸಿದ!
ಕಾರುಗಳನ್ನು ಬಾಡಿಗೆಗೆ ಕೊಡುವ ಕಾರು ಹಾಗೂ ಟಿಟಿ ವಾಹನಗಳ ಮಾಲಿಕರ ಬಗ್ಗೆ ಆರೋಪಿಗಳು ಮಾಹಿತಿ ಸಂಗ್ರಹಿಸುತ್ತಿದ್ದರು. ಬಳಿಕ ಅವರನ್ನು ಪರಿಚಯಿಸಿಕೊಂಡು ಆರೋಪಿಗಳು, ತಿಂಗಳಿಗೆ ಹೆಚ್ಚಿನ ಬಾಡಿಗೆ ಕೊಡಿಸುವುದಾಗಿ ನಂಬಿಸಿ ಕಾರುಗಳನ್ನು ಪಡೆಯುತ್ತಿದ್ದರು. ಬಳಿಕ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿದ್ದಲ್ಲದೆ, ಕೆಲವು ವಾಹನಗಳನ್ನು ಅಡಮಾನವಿಟ್ಟು ವಂಚಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.