ಕೋಳಿಗೆ ಕಲ್ಲಿನಿಂದ ಹೊಡೆದ ಎಂಬ ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡು ಯುವಕನೋರ್ವನ ಹೊಟ್ಟೆಗೆ ಕತ್ತಿಯಿಂದ ಕಡಿದಿರುವ ಘಟನೆಯೊಂದು ಸುಂಟಿಕೊಪ್ಪ ವರದಿಯಾಗಿದೆ.
ಮಡಿಕೇರಿ(ಮಾ.03): ಕೋಳಿಗೆ ಕಲ್ಲಿನಿಂದ ಹೊಡೆದ ಎಂಬ ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡು ಯುವಕನೋರ್ವನ ಹೊಟ್ಟೆಗೆ ಕತ್ತಿಯಿಂದ ಕಡಿದಿರುವ ಘಟನೆಯೊಂದು ಸುಂಟಿಕೊಪ್ಪ ವರದಿಯಾಗಿದೆ.
ರಗಂದೂರಿನ ಮಲಿಕಾರ್ಜುನ ಕಾಲೋನಿ ನಿವಾಸಿ ಅಣ್ಣು ಎಂಬವರ ಮಗ ದಿನೇಶ್ ಎಂಬಾತ ಭಾನುವಾರ ಮಧ್ಯಾಹ್ನ ಪಕ್ಕದ ಮನೆಯವರಾದ ಓಬ್ಬಯ್ಯ ಎಂಬವರ ಕೋಳಿಗೆ ಕಲ್ಲೆಸೆದಿದ್ದ ಎನ್ನಲಾಗಿದೆ. ಇದನ್ನು ಓಬ್ಬಯ್ಯ ಅವರು ದಿನೇಶ್ ಬಳಿ ಪ್ರಶ್ನಿಸಿದ್ದಾರೆ.
ನೀರು ಒಯ್ಯಲು ಬಂದ ಯುವತಿ ಗುಪ್ತಾಂಗಕ್ಕೆ ಕೈ ಹಾಕಿ ಕಿರುಕುಳ
ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸಿಕೊಂಡಿದ್ದರು. ಸಿಟ್ಟಿಗೆದ್ದ ಓಬ್ಬಯ್ಯ ಕತ್ತಿಯಿಂದ ದಿನೇಶನ ಮೇಲೆ ಹಲ್ಲೆ ಮಾಡಿ ಆತನ ಹೊಟ್ಟೆಭಾಗಕ್ಕೆ ತಿವಿದಿದ್ದಾನೆ.
ದಿನೇಶ ತೀವ್ರ ಗಾಯದಿಂದ ಚಿಂತಾಜನಕ ಸ್ಥಿತಿಯಲ್ಲಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೈಸೂರು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಂಟಿಕೊಪ್ಪ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಆರೋಪಿ ಓಬಯ್ಯನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.