ಕಡು ಬಡವರು ಮದುವೆ ಮಾಡಲು ಸಾಮೂಹಿಕ ಕಲ್ಯಾಣ, ಕೈಗಾರಿಕಾ ಅಭಿವೃದ್ಧಿ ಯೋಜನೆ ವಧುವಿಗೆ 3 ಲಕ್ಷ ರು. ಬಾಂಡ್ ನೀಡಲಾಗುತ್ತದೆ.
ಹಾಸನ [ಮಾ.03]: ಬ್ರಾಹ್ಮಣ ಸಮಾಜದ ಸಂಸ್ಕೃತಿ, ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಉಳಿಸುವಲ್ಲಿ ಮುಂದಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣರ ಅಭಿವೃದ್ಧಿ ಮಂಡಳಿ ಸಂಘದ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ಹೇಳಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಮತ್ತು ಬೇಲೂರು ತಾಲೂಕು ವಿಪ್ರ ಮಹಿಳಾ ಒಕ್ಕೂಟದ ಆಶ್ರಯದಲ್ಲಿ ಪಟ್ಟಣದ ರಾಘವೇಂದ್ರ ಮಠದ ಪ್ರವಚನಾ ಮಂದಿರದಲ್ಲಿ ಸೋಮವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
3 ಲಕ್ಷ ರು. ಬಾಂಡ್
ಸಮಾಜದ ಕಡು ಬಡವರು ಮದುವೆ ಮಾಡಲು ಸಾಮೂಹಿಕ ಕಲ್ಯಾಣ, ಕೈಗಾರಿಕಾ ಅಭಿವೃದ್ಧಿ ಯೋಜನೆ ಹಾಗೂ ಪುರೋಹಿತ ಮತ್ತು ಅಡುಗೆ ಭಟ್ಟರನ್ನು ಮದುವೆ ಮಾಡಿಕೊಂಡರೆ ಅಂತಹ ವಧುವಿಗೆ 3 ಲಕ್ಷ ರು. ಬಾಂಡ್ ನೀಡಲಾಗುತ್ತದೆ. ಹಾಗೆಯೇ ರಾಜ್ಯದ ಎಲ್ಲ 175 ತಾಲೂಕುಗಳಲ್ಲೂ ಒಂದು ಬ್ರಾಹ್ಮಣ ಸಮುದಾಯದ ಸಮುದಾಯ ಭವನ ನಿರ್ಮಾಣವಾಗಬೇಕು.
ಏಪ್ರಿಲ್ 26ಕ್ಕೆ 100 ದೇಗುಲಗಳಲ್ಲಿ ನಡೆಯಲಿದೆ ‘ಸಪ್ತಪದಿ’...
ನಮ್ಮ ರಾಜ್ಯದಲ್ಲಿ ಒಟ್ಟು 17 ಲಕ್ಷ ಬ್ರಾಹ್ಮಣರಿದ್ದು, 36 ಉಪಜಾತಿಗಳಿವೆ, ಆರ್ಥಿಕವಾಗಿ ಹಿಂದುಳಿ ವರಿಗೆ ಸಹಾಯ ಹಸ್ತ ಚಾಚಬೇಕಿದೆ. ಮೊದಲು ನಾವು ಒಗ್ಗಟ್ಟನ್ನು ಪ್ರದರ್ಶಿಸಬೇಕು. ಸಮಾಜವು ನಮ್ಮ ಸಮುದಾಯದವರನ್ನು ಗಮನಿಸುತ್ತಾ ಇರುತ್ತಾರೆ. ಹಾಗಾಗಿ ಬಹು ಎಚ್ಚರಿಕೆಯಿಂದ ನಾವು ಹೆಜ್ಜೆ ಇಡಬೇಕಾಗುತ್ತದೆ. ಹಾಗೆಯೇ ಹಿಂದುತ್ವ ಬೆಳೆಸುವಲ್ಲಿ ಉಳಿಸುವಲ್ಲಿ ಬ್ರಾಹ್ಮಣ ಸಮುದಾಯದ ಪಾತ್ರವೂ ಪ್ರಮುಖವಾಗಿದೆ ಎಂದರು.