ಬೆಳಗಾವಿ: ಟ್ರಾಫಿಕ್ ಪೊಲೀಸ್‌ ಮೇಲೆ ವಾಹನ ಚಾಲಕನಿಂದ ಹಲ್ಲೆ

By Web Desk  |  First Published Nov 17, 2019, 1:07 PM IST

ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಮೇಲೆ ಸಾರ್ವಜನಿಕ ಸ್ಥಳದಲ್ಲಿಯೇ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ವಾಹನ ತಡೆದು ತಪಾಸಣೆ ನಡೆಸುತ್ತಿದ್ದ ಸಂದರ್ಭ ಪೊಲೀಸ್ ಹಾಗೂ ವ್ಯಕ್ತಿ ನಡುವೆ ವಾಗ್ವಾದ ಬೆಳೆದು ಯುವಕ ಹಲ್ಲೆ ಮಾಡಿದ್ದಾನೆ.


ಬೆಳಗಾವಿ (ನ.17): ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಮೇಲೆ ಸಾರ್ವಜನಿಕ ಸ್ಥಳದಲ್ಲಿಯೇ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ವಾಹನ ತಡೆದು ತಪಾಸಣೆ ನಡೆಸುತ್ತಿದ್ದ ಸಂದರ್ಭ ಪೊಲೀಸ್ ಹಾಗೂ ವ್ಯಕ್ತಿ ನಡುವೆ ವಾಗ್ವಾದ ಬೆಳೆದು ಯುವಕ ಹಲ್ಲೆ ಮಾಡಿದ್ದಾನೆ.

ದಾಖಲೆ ಪರಿಶೀಲನೆ ವೇಳೆ ಸಂಚಾರಿ ಪೊಲೀಸ್ ಎಸಿಪಿ ಮೇಲೆ ವಾಹನ ಸವಾರ ಹಲ್ಲೆ ಮಾಡಿದ್ದಾನೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ದಾಖಲೆ ಪರಿಶೀಲನೆ ವೇಳೆ ಘಟನೆ ನಡೆದಿದೆ. ಮಹಾರಾಷ್ಟ್ರ ನೊಂದಣಿಯ ವಾಹನ ಚಾಲಕನಿಂದ‌ ಎಸಿಪಿ ಮೇಲೆ ಹಲ್ಲೆ ನಡೆದಿದೆ.

Tap to resize

Latest Videos

'ಬ್ರಿಟಿಷರನ್ನು ಓಡಿಸಿದಂತೆ ದೇಶದಿಂದ ಮೋದಿಯನ್ನು ಓಡಿಸ್ಬೇಕು'..!

ಸಂಚಾರಿ ವಿಭಾಗದ ಎಸಿಪಿ ಆರ್.ಆರ್.ಕಲ್ಯಾಣಶೆಟ್ಟಿ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆ ಮಾಡಿದ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಚಾರಿ ನಿಯಮಗಳು ಬದಲಾದ ಮೇಲೆ ಇಂತಹ ಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ಕೆಲವೊಮ್ಮೆ ಪೊಲೀಸರ ಭಾಗದಿಂದ ಹಾಗೂ ಇನ್ನು ಕೆಲವೊಮ್ಮೆ ವಾಹನ ಸಂಚಾರಿಗಳಿಂದಲೂ ತಪ್ಪುಗಳಾಗುತ್ತಿದೆ.

ವಾಹನ ದಾಖಲೆ ಪರಿಶೀಲನೆ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸೆರೆಹಿಡಿಯಲಾಗಿದೆ.

ಸಂಚಾರಿ ಪೊಲೀಸರ ಜತೆ ಕಿರಿಕ್‌ : ಇಬ್ಬರು ಯುವಕರ ಅರೆಸ್ಟ್

click me!