ಚಿನ್ನಕ್ಕೆ ಕಡಿಮೆ ಹಣ ಕೊಡುತ್ತೇನೆ ಎಂದಿದ್ದಕ್ಕೆ ಅಂಗಡಿಗೆ ಬೆಂಕಿ ಇಟ್ಟ ಭೂಪ ಕೊನೆಗೂ ಅರೆಸ್ಟ್

Published : Feb 14, 2023, 03:13 PM IST
ಚಿನ್ನಕ್ಕೆ ಕಡಿಮೆ ಹಣ ಕೊಡುತ್ತೇನೆ ಎಂದಿದ್ದಕ್ಕೆ ಅಂಗಡಿಗೆ ಬೆಂಕಿ ಇಟ್ಟ ಭೂಪ ಕೊನೆಗೂ ಅರೆಸ್ಟ್

ಸಾರಾಂಶ

ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಬೆಂಕಿ ಹಾಕಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ನೆಲಮಂಗಲದಲ್ಲಿ ಪೊಲೀಸರು ಬಂಧಿಸಿದ್ದು, ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಬೆಂಗಳೂರು (ಫೆ.14): ಅಡ ಇಡುವ ಚಿನ್ನಾಭರಣಕ್ಕೆ ಕಡಿಮೆ ಹಣ ನೀಡುವುದಾಗಿ ಹೇಳಿದ್ದಕ್ಕೆ ರೊಚ್ಚಿಗೆದ್ದ ಗ್ರಾಹಕನೊಬ್ಬ ಆಭರಣ ಅಂಗಡಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ಗಿರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು. ಇದೀಗ ಬೆಂಕಿ ಹಚ್ಚಿ ಪರಾರಿಯಾಗಿದ್ದ ಆರೋಪಿ ಬಸವರಾಜ್ ಎಂಬಾತನನ್ನು ಬಂಧಿಸಲಾಗಿದೆ.

ಮುನೇಶ್ವರ ಬ್ಲಾಕ್‌ನ ತುಳಸಿ ಆಭರಣ ಅಂಗಡಿಯಲ್ಲಿ ಭಾನುವಾರ ಬೆಳಗ್ಗೆ 10ರ ಸುಮಾರಿಗೆ ಈ  ಘಟನೆ ನಡೆದಿತ್ತು. ಆರೋಪಿ ಬಸವರಾಜ್ ಬೆಂಕಿ ಹಾಕಿ ಪರಾರಿಯಾಗಿದ್ದ, ಪರಿಣಾಮ ಅಂಗಡಿ ಮಾಲಿಕ ಭವರ್‌ ಲಾಲ್‌(54) ಬೆನ್ನಿಗೆ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿತ್ತು.ಇದೀಗ ತಲೆಮರೆಸಿಕೊಂಡಿದ್ದ ಬಸವರಾಜ್ ನನ್ನು  ನೆಲಮಂಗಲದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಡೆಮಾಲಿಷನ್‌ ಡ್ರೈವ್‌ ವೇಳೆ ಬೆಂಕಿಗೆ ಆಹುತಿಯಾದ ತಾಯಿ-ಮಗಳು: ಹಲವರ ವಿರುದ್ಧ ಕೊಲೆ ಕೇಸ್‌

ದೂರುದಾರ ಭವರ್‌ಲಾಲ್‌ ಹಾಗೂ ಆರೋಪಿ ಬಸವ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪರಿಚಿತರು. ಬೆಳಗ್ಗೆ 10ಕ್ಕೆ ಆರೋಪಿ ಬಸವ ಚಿನ್ನ ಅಡವಿರಿಸಲು ಜುವೆಲ್ಲರಿ ಅಂಗಡಿಗೆ ಬಂದಿದ್ದಾನೆ. ವೇಳೆ ಭವರ್‌ಲಾಲ್‌ .50 ಸಾವಿರ ನೀಡುವುದಾಗಿ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.

ಬೆಂಗಳೂರಿನಲ್ಲಿ ಒಂಟಿ ಮಹಿಳೆ ಬರ್ಬರ ಹತ್ಯೆ, ಗಂಡನೇ ಕೊಲೆ ಮಾಡಿರೋ ಶಂಕೆ!

ಈ ವೇಳೆ ಗಾಡಿಯಲ್ಲಿ ಇರಿಸಿಕೊಂಡಿದ್ದ ಪೆಟ್ರೋಲ್‌ ತಂದಿರುವ ಬಸವರಾಜ್, ಜುವೆಲ್ಲರಿ ಅಂಗಡಿಗೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರು ನೀರು ಸುರಿದು ಬೆಂಕಿ ನಂದಿಸಿದ್ದಾರೆ. ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ