5 ವರ್ಷ ಸಂಸಾರ ಮಾಡಿ ಈಗ ಅವಳ್ಯಾರೆಂದೇ ಗೊತ್ತಿಲ್ಲ ಎಂದ..!

Suvarna News   | Asianet News
Published : Dec 21, 2019, 11:19 AM IST
5 ವರ್ಷ ಸಂಸಾರ ಮಾಡಿ ಈಗ ಅವಳ್ಯಾರೆಂದೇ ಗೊತ್ತಿಲ್ಲ ಎಂದ..!

ಸಾರಾಂಶ

ನಗರ ಸಭೆ ಮಾಜಿ ಸದಸ್ಯನೋರ್ವ ಮದುವೆಯಾಗಿ 5 ವರ್ಷ ಆದ್ಮೇಲೆ ನೀನು ಯಾರೆಂದಯ ಗೊತ್ತಿಲ್ಲ ಎನ್ನುತ್ತಿದ್ದಾನೆ ಎಂದು ಮಹಿಳೆಯೋರ್ವರು ಆರೋಪ ಮಾಡಿದ್ದಾರೆ. 

ಹಾಸನ [ಡಿ.21]: ಮಾಜಿ ನಗರ ಸಭೆ ಸದಸದ್ಯನ ವಿರುದ್ಧ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿರುವ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ ನಗರಸಭೆ ಮಾಜಿ ಸದಸ್ಯ ವೆಂಕಟೇಶ್ ತಮ್ಮನ್ನು ಐದು ವರ್ಷಗಳ ಹಿಂದೆ ವಿವಾಹವಾಗಿ ಸಂಸಾರ ಮಾಡಿದ್ದು, ಇದೀಗ ಮೋಸ ಮಾಡಿದ್ದಾನೆ. ತನಗೆ ನೀನ್ಯಾರು ಎಂದೇ ಗೊತ್ತಿಲ್ಲ ಎನ್ನುತ್ತಿದ್ದಾನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

ಅಲ್ಲದೇ ವೆಂಕಟೇಶ್ ಜೊತೆಗೆ ಮನೆಯಲ್ಲಿ ಇರುವ ವಿಡಿಯೋವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು,  ಆತನಿಂದ ತಮಗೆ ನ್ಯಾ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. 

ಮಹಿಳಾ ಆಯೋಗವು ಈತನಿಂದ ತಮಗೆ ನ್ಯಾಯ ಕೊಡಿಸಬೇಕು. ಸಂಸಾರ ಮಾಡಿ ಈಗ ನನ್ನ ಪರಿಚಯವೇ ಇಲ್ಲ ಎನ್ನುತ್ತಿರುವ ಈತನ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಹೇಳಿದ್ದಾರೆ. 

 ನಾನು 4 ಲಕ್ಷ ಸಹಾಯ ಮಾಡಿದ್ದೇನೆ. ಈ ಹಣವನ್ನು ಕೇಳಲು ಆಗಾ ಮನೆಗೆ ಹೋಗುತ್ತಿದ್ದೆ. ಅದಕ್ಕೆ ನನ್ನನ್ನು ಗಂಡ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವೆಂಕಟೇಶ್ ಇದೀಗ ತನ್ನ ವಿರುದ್ಧ ದೂರನ್ನು ನೀಡಿದ್ದಾನೆ ಎಂದು ಮಹಿಳೆ  ವೆಂಕಟೇಶ್ ವಿರುದ್ಧ ಆರೋಪಿಸಿದ್ದಾರೆ. 

PREV
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ