ಪತಿಯೊಂದಿಗೆ ಇದ್ದ ಭಿನ್ನಾಭಿಪ್ರಾಯವನ್ನು ಹೊಗಲಾಡಿಸಿ ಇಬ್ಬರನ್ನೂ ಒಂದು ಮಾಡುತ್ತೇನೆ ಎಂದು ನಂಬಿಸಿ ಗೃಹಿಣಿಯನ್ನು ಲೈಂಗಿಕವಾಗಿ ಬಳಸಿಕೊಂಡು ಈಗ ದೈಹಿಕವಾಗಿ ಹಿಂಸೆ ನೀಡಿದ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ(ಏ.26): ನನ್ನ ಪತಿಯೊಂದಿಗೆ ಇದ್ದ ಭಿನ್ನಾಭಿಪ್ರಾಯವನ್ನು ಹೊಗಲಾಡಿಸಿ ಇಬ್ಬರನ್ನೂ ಒಂದು ಮಾಡುತ್ತೇನೆ ಎಂದು ನಂಬಿಸಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಈಗ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾನೆ ಎಂದು ಅಪಾದಿಸಿ ಮಾಲೂರಿನ ಗೃಹಿಣಿಯೊಬ್ಬಳು ಯುವಕನೊಬ್ಬನ ವಿರುದ್ಧ ದೂರು ನೀಡಿದ್ದಾಳೆ.
ಆರೋಪಿಯನ್ನು ಆದರ್ಶ ನಗರದ ಹರೀಶ್ ಗೌಡ(26) ಎಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯ ಅರಸೀಕೆರೆ ಮೂಲದ ಗೃಹಿಣಿಯು(28) ತನ್ನ ಗಂಡನೊಂದಿಗೆ ಪಟ್ಟಣದ ಆದರ್ಶ ನಗರದಲ್ಲಿ ವಾಸವಾಗಿದ್ದಳು. ನಂತರ ದಿನದಲ್ಲಿ ಗಂಡನೊಂದಿಗೆ ಭಿನ್ನಾಭಿಪ್ರಾಯ ಬಂದು ಬೆಂಗಳೂರಿನ ನ್ಯಾಯಾಲಯದಲ್ಲಿ ಡೈವರ್ಸ್‌ಗೆ ಅರ್ಜಿ ಹಾಕಿಕೊಂಡಿದ್ದರು.
ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹ
ಪಕ್ಕದ ಮನೆಯಲ್ಲಿದ್ದ ಹರೀಶ್ ಗೌಡ ಈ ಸಂದರ್ಭವನ್ನು ಬಳಸಿಕೊಂಡು ಗಂಡ ಹೆಂಡತಿಯನ್ನು ಒಂದು ಮಾಡಿಸುವುದಾಗಿ ನಂಬಿಸಿ ಗೃಹಿಣಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾಗಿ ಆರೋಪಿಸಲಾಗಿದೆ. ಏ. 18 ರಂದು ಬೆಳಿಗ್ಗೆ ಗೃಹಿಣಿಯನ್ನು ಮನೆಗೆ ಕರೆಸಿಕೊಂಡ ಹರೀಶ್ ಗೌಡ, ನನ್ನ ನೈಟಿಯನ್ನು ಹರಿದುಹಾಕಿದನಲ್ಲದೆ ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಬಸವ ತತ್ವ ಪಾಲನೆ ಅಗತ್ಯ: ಸಚಿವ ಸೋಮಶೇಖರ್
ಇದರಿಂದ ಬೇಸತ್ತು ನಾನು ಹಾಗೂ ನನ್ನ ಮಗ ಮಾತ್ರೆಗಳನ್ನು ನುಂಗಿ ಅತ್ಮಹತ್ಯೆಗೆ ಯತ್ನಿಸಿದಾಗ ನನ್ನ ಗಂಡ ಯೋಗಾನಂದ ನಮ್ಮಿಬ್ಬರಿಗೂ ಖಾಸಗಿ ಆಸ್ಪತ್ರೆದೆ ದಾಖಲಿಸಿದ್ದರು. ಆದ್ದರಿಂದ ಆರೋಪಿಯ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾಳೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.
ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಕೊಲೆ: ಮಗ, ಅಳಿಯ ಸೇರಿ ಮೂವರು ಅರೆಸ್ಟ್