ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ : ಹುಡುಕಾಟ

Kannadaprabha News   | Asianet News
Published : Nov 09, 2020, 03:21 PM IST
ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ವ್ಯಕ್ತಿ :  ಹುಡುಕಾಟ

ಸಾರಾಂಶ

ನೇತ್ರಾವತಿ ನದಿಗೆ ವ್ಯಕ್ತಿಯೋರ್ವ ಹಾರಿದ್ದು ಆತನಿಗಾಗಿ ಪೊಲೀಸರಿಂದ ಹುಡುಕಾಟ ನಡೆದಿದೆ. 

ಬಂಟ್ವಾಳ (ನ.09):  ಬೆಳಗ್ಗೆ ಸುಮಾರು 7ರಿಂದ 8 ಗಂಟೆಯೊಳಗೆ ವ್ಯಕ್ತಿಯೊಬ್ಬ ಬಿ.ಸಿ. ರೋಡಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಘಟನೆ ನಡೆದಿದ್ದು, ಇದೀಗ ಆತನ ಶೋಧ ಕಾರ್ಯ ನಡೆಯುತ್ತಿದೆ.

ಗೂಡಿನಬಳಿಯ ಮುಳುಗುತಜ್ಞರಾದ ಮಹಮ್ಮದ್‌ ಮತ್ತು ತಂಡ, ಬಂಟ್ವಾಳ ಅಗ್ನಿಶಾಮಕದಳ ಇಲಾಖೆಯ ಸಿಬ್ಬಂದಿ ಸುದ್ದಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಬಂಟ್ವಾಳ ನಗರ ಪೊಲೀಸರು ಉಪಸ್ಥಿತರಿದ್ದರು. 

ಭಾರೀ ಮಳೆಗೆ ಉಕ್ಕೇರುತ್ತಿದ್ದಾಳೆ ನೇತ್ರಾವತಿ ...

ಸೇತುವೆಯಲ್ಲಿ ಪುತ್ತೂರು ಸಮೀಪದ ಬಲ್ನಾಡು ಎಂಬಲ್ಲಿನ ವ್ಯಕ್ತಿಯೊಬ್ಬರ ಹೆಸರಿನ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಮತ್ತಿತರ ವಸ್ತುಗಳಿರುವ ಬ್ಯಾಗೊಂದು ದೊರಕಿದ್ದು, ಕೂಡಲೇ ಪೊಲೀಸರು ಆ ವಿಳಾಸವನ್ನು ಸಂಪರ್ಕಿಸಿ ಮನೆಯವರನ್ನು ಬರ ಹೇಳಿದ್ದಾರೆ.

ಇದೀಗ ನೀರಿಗೆ ಹಾರಿದ ವ್ಯಕ್ತಿಯನ್ನು ಪತ್ತೆಹಚ್ಚಿದ ಮೇಲಷ್ಟೇ ಸ್ಪಷ್ಟಚಿತ್ರಣ ದೊರಕಲಿದೆ.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ