ಯುವತಿಯ ಗುಪ್ತಾಂಗ ಮುಟ್ಟಿಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲ್ಲೂರುಪುರಂ ನಿವಾಸಿ ಮಹೇಶ್(31) ಬಂಧಿತ.
ಬೆಂಗಳೂರು(ಮಾ.03): ಯುವತಿಯ ಗುಪ್ತಾಂಗ ಮುಟ್ಟಿಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೆಲ್ಲೂರುಪುರಂ ನಿವಾಸಿ ಮಹೇಶ್(31) ಬಂಧಿತ.
ಸಂತ್ರಸ್ತೆ ಹಾಗೂ ಮಹೇಶ್ ಪರಿಚಿತರಾಗಿದ್ದು, ಆರೋಪಿ ಪದೇ ಪದೇ ಸಂತ್ರಸ್ತೆಯನ್ನು ಚುಡಾಯಿಸುತ್ತಿದ್ದ. ಹಲವು ಬಾರಿ ಬುದ್ದಿ ಹೇಳಿದ್ದರೂ ಸರಿ ಹೋಗಿರಲಿಲ್ಲ. ಫೆ.26ರಂದು ರಾತ್ರಿ 7.30ರ ಸುಮಾರಿಗೆ ನೆಲ್ಲೂರುಪುರಂ ಮುಖ್ಯರಸ್ತೆಯಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಯುವತಿ ನೀರು ತೆಗೆದುಕೊಂಡು ಮನೆಗೆ ಹೋಗುತ್ತಿದ್ದಳು.
ಕ್ಯಾಬ್‌ಗೆ ಗುದ್ದಿ ಮಗುಚಿ ಬಿದ್ದ ಪೊಲೀಸ್ ಜೀಪ್!
ಈ ವೇಳೆ ಯುವತಿಗೆ ಏಕಾಏಕಿ ಎದುರು ಬಂದ ಆರೋಪಿ ಸಂತ್ರಸ್ತೆಯ ಗುಪ್ತಾಂಗಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಬಳಿಕ ಆತನಿಂದ ತಪ್ಪಿಸಿಕೊಂಡು ಬಂದು ಸಂತ್ರಸ್ತೆ ದೂರು ನೀಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಸಣ್ಣ-ಪುಟ್ಟಕೆಲಸ ಮಾಡಿಕೊಂಡು ಜೀವನ ಸಾಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.