ಉತ್ತರಕ‌ನ್ನಡದಲ್ಲಿ ಭೀಕರ ಮಳೆಗೆ ಮತ್ತೊಂದು ಬಲಿ: ಗೋವುಗಳ ರಕ್ಷಣೆಗಿಳಿದಿದ್ದ ವ್ಯಕ್ತಿ ಸಾವು

By Girish Goudar  |  First Published Jul 17, 2024, 7:04 PM IST

ಊರಿನಲ್ಲಿ ನೀರು ತುಂಬಿದ್ದರಿಂದ ಗೋವುಗಳ ರಕ್ಷಣೆಗೆ ಅನಿಲ್ ರಾಘೋಬ ಪೆಡ್ನೇಕರ್ ತೆರೆಳಿದ್ದರು. ಕಾಳಜಿ ಕೇಂದ್ರದಲ್ಲಿ ಮಧ್ಯಾಹ್ನ ಊಟ ಮುಗಿಸಿ ಮನೆಯಲ್ಲಿದ್ದ ದನಕರುಗಳನ್ನು ಬಿಡಲು ತೆರಳಿದ್ದರು. ಹಸುಗಳನ್ನು ರಕ್ಷಣೆ ಮಾಡಿ ಹಿಂತಿರುಗುವಾಗ ನೀರಿನ ಸೆಳೆತಕ್ಕೆ ಅನಿಲ್ ಕೊಚ್ಚಿ ಹೋಗಿದ್ದರು. 


ಉತ್ತರಕನ್ನಡ(ಜು.17):  ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಮತ್ತೊಂದು ಬಲಿಯಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಾಳಜಿ ಕೇಂದ್ರದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾರೆ. ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಡೂರಿನಲ್ಲಿ ಘಟನೆ ನಡೆದಿದೆ. ಅನಿಲ್ ರಾಘೋಬ ಪೆಡ್ನೇಕರ್(65) ಮೃತ ವ್ಯಕ್ತಿ. 

ಮೃತ ಅನಿಲ್ ಅವರು ಜುಲೈ 17ರಂದು ಇಡೂರು ಪ್ರಾಥಮಿಕ ಶಾಲೆಯಲ್ಲಿರುವ ಕಾಳಜಿ ಕೇಂದ್ರಕ್ಕೆ ತೆರಳಿದ್ದರು. ಊರಿನಲ್ಲಿ ನೀರು ತುಂಬಿದ್ದರಿಂದ ಗೋವುಗಳ ರಕ್ಷಣೆಗೆ ಅನಿಲ್ ರಾಘೋಬ ಪೆಡ್ನೇಕರ್ ತೆರೆಳಿದ್ದರು. ಕಾಳಜಿ ಕೇಂದ್ರದಲ್ಲಿ ಮಧ್ಯಾಹ್ನ ಊಟ ಮುಗಿಸಿ ಮನೆಯಲ್ಲಿದ್ದ ದನಕರುಗಳನ್ನು ಬಿಡಲು ತೆರಳಿದ್ದರು. ಹಸುಗಳನ್ನು ರಕ್ಷಣೆ ಮಾಡಿ ಹಿಂತಿರುಗುವಾಗ ನೀರಿನ ಸೆಳೆತಕ್ಕೆ ಅನಿಲ್ ಕೊಚ್ಚಿ ಹೋಗಿದ್ದರು. 

Latest Videos

undefined

ಉತ್ತರಕನ್ನಡ: ಶಿರೂರು ಗುಡ್ಡಕುಸಿತ, ತನ್ನ ಮನೆ, ಮಾಲೀಕನನ್ನ ಹುಡುಕುತ್ತಿರುವ ಸಾಕು ನಾಯಿ, ಮನಕಲಕುವ ದೃಶ್ಯ..!

ಈ ಬಗ್ಗೆ ನಿನ್ನೆ(ಮಂಗಳವಾರ) ಸಂಜೆ ಅನಿಲ್‌ ಕುಟುಂಬಸ್ಥರು ಕಾರವಾರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಅನಿಲ್‌ ಮೃತದೇಹ ಪತ್ತೆಯಾಗಿದೆ. 

ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ, ಗ್ರಾಮದ ಜನರು ಅಧಿಕಾರಿಗಳಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಕದಂಬ ನೌಕಾ ನೆಲೆಯ ತಡೆಗೋಡೆಯಿಂದಾಗಿ ಮಳೆ ನೀರು ಸಮುದ್ರ ಸೇರದೇ ಇಡೂರು ಗ್ರಾಮ ಜಲಾವೃತವಾಗಿತ್ತು. 

click me!