ರೈಲು ಹತ್ತುವ ವೇಳೆ ದುರಂತ: ಗಾಲಿಗೆ ಸಿಲುಕಿ ಪ್ರಯಾಣಿಕ ಸಾವು

By Ravi Janekal  |  First Published Dec 2, 2022, 10:40 AM IST

ರೈಲು ಹತ್ತುವ ಧಾವಂತದಲ್ಲಿ ಪ್ರಯಾಣಿಕನೊಬ್ಬ ಆಯಾತಪ್ಪಿ ಬಿದ್ದು ರೈಲಿನ ಚಕ್ರದಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ದಕ್ಷಿಣ ವಲಯದಲ್ಲಿ ನಡೆದಿದೆ.


ಹುಬ್ಬಳ್ಳಿ (ಡಿ.2): ರೈಲು ಹತ್ತುವ ಧಾವಂತದಲ್ಲಿ ಪ್ರಯಾಣಿಕನೊಬ್ಬ ಆಯಾತಪ್ಪಿ ಬಿದ್ದು ರೈಲಿನ ಚಕ್ರದಡಿಗೆ ಸಿಲುಕಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ದಕ್ಷಿಣ ವಲಯದಲ್ಲಿ ನಡೆದಿದೆ. ಇಂದು ಬೆಳಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ 17391 ರೈಲಿನಲ್ಲಿ ಈ ಅಪಘಾತ ಸಂಭವಿಸಿದೆ. ಸಿಗ್ನಲ್ ಸಿಗದ ಕಾರಣ ಟ್ರೈನ್ ದಕ್ಷಿಣ ವಲಯದ ನಿಲ್ದಾಣದಲ್ಲಿ ಕ್ಷಣಕಾಲ ತಂಗಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಧಾವಂತದಲ್ಲಿ ರೈಲು ಹತ್ತಲು ಹೋಗಿರುವ ಪ್ರಯಾಣಿಕ ಆಯತಪ್ಪಿ ಕೆಳಗೆ ಬಿದ್ದು ರೈಲಿನ ಗಾಲಿಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ರೈಲಿನ ಗಾಲಿಗೆ ದೇಹ ಸಿಲುಕಿದ ಪರಿಣಾಮ ಸಂಪೂರ್ಣ ದೇಹ ರಕ್ತಸಿಕ್ತವಾಗಿದ್ದು, ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos

undefined

ನೆಲಮಂಗಲ: ರೈಲ್ವೆ ಹಳಿಗಳ ಮೇಲೆ ಪ್ರೇಮಿಗಳ ಮೃತದೇಹ ಪತ್ತೆ

ತರಗತಿಯಲ್ಲಿಯೇ ವಿದ್ಯಾರ್ಥಿಗೆ ಹೃದಯಾಘಾತ, ಸಾವು

 ಕಲಘಟಗಿ: ತರಗತಿಯಲ್ಲಿಯೇ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಮೃತಪಟ್ಟಘಟನೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯಲ್ಲಿ ಜರುಗಿದೆ. 6ನೇ ತರಗತಿಯ ಮುಕ್ತುಂ ಮಹ್ಮದ್‌ರಫಿ ಮನಿಯಾರ ಮೃತ ಬಾಲಕ. ಎಂದಿನಂತೆ ಬೆಳಗ್ಗೆ ಶಾಲೆಗೆ ಬಂದಿದ್ದ ಮುಕ್ತುಂ ತರಗತಿಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾನೆ. ಶಿಕ್ಷಕರು ತಕ್ಷಣ ಅವನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕನಿಗೆ ಮೊದಲೇ ಹೃದಯದಲ್ಲಿ ತೊಂದರೆ ಇತ್ತು ಎಂದು ತಿಳಿದುಬಂದಿದೆ.

ಬೈಕ್‌ಗೆ ಬಸ್‌ ಡಿಕ್ಕಿ : ಮೂವರ ಸಾವು

ಚಳ್ಳಕೆರೆ: ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿಯ ತೆಪೊ್ಪೕತ್ಸವ ವೀಕ್ಷಿಸಲು ಚಳ್ಳಕೆರೆಯಿಂದ ನಾಯಕನಹಟ್ಟಿಗೆ ಮೋಟಾರ್‌ ಬೈಕ್‌ನಲ್ಲಿ ತೆರಳುತ್ತಿದ್ದ ಬೈಕ್‌ಗೆ ಬಸ್‌ ಡಿಕ್ಕಿಯಾದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.

ಮೈಸೂರು: ಚಿರತೆ ದಾಳಿಗೆ ಯುವತಿ ಸಾವು, ಒಂದೇ ತಿಂಗಳಲ್ಲಿ ಇಬ್ಬರು ಬಲಿ, ಹೆಚ್ಚಿದ ಜನಾಕ್ರೋಶ

ಮೃತ​ರನ್ನು ಬುಡ್ನಹಟ್ಟಿಗ್ರಾಪಂ ವ್ಯಾಪ್ತಿಯ ಬೋರಪ್ಪನಹಟ್ಟಿಗ್ರಾಮದ ಪ್ರಕಾಶ್‌(20), ಅಶೋಕ್‌(18) ಮತ್ತು ಪ್ರದೀಪ್‌(19) ಎಂದು ಗುರು​ತಿ​ಸ​ಲಾ​ಗಿದೆ. ಕುದಾಪುರ ಬಳಿ ಗುರುವಾರ ಮಧ್ಯಾಹ್ನ ಈ ಅವಘಡ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ನಾಯಕನಹಟ್ಟಿಪೊಲೀಸರು ಸ್ಥಳಕ್ಕೆ ಆಗಮಿಸಿ ತೀವ್ರವಾಗಿ ಗಾಯಗೊಂಡು ಪ್ರದೀಪ್‌ನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಆತನೂ ಮೃತಪಟ್ಟಿದ್ದಾನೆ. ನಾಯಕನಹಟ್ಟಿಪೊಲೀಸರು ಪ್ರಕರಣ ದಾಖಲಿಸಿಕೊಂಡಿ​ದ್ದಾ​ರೆ.

click me!