ಅಕ್ಕನ ಜೊತೆ ಭಾವನ ಜಗಳ : ಮಧ್ಯೆ ಹೋದ ನಾದಿನಿಗೆ ಎಂಥ ಸ್ಥಿತಿ ತಂದಿಟ್ಟ

Kannadaprabha News   | Asianet News
Published : Mar 16, 2020, 12:03 PM ISTUpdated : Mar 16, 2020, 03:10 PM IST
ಅಕ್ಕನ ಜೊತೆ ಭಾವನ ಜಗಳ :  ಮಧ್ಯೆ ಹೋದ ನಾದಿನಿಗೆ ಎಂಥ ಸ್ಥಿತಿ ತಂದಿಟ್ಟ

ಸಾರಾಂಶ

ಅಕ್ಕ ಭಾವ ಜಗಳವಾಡುತ್ತಾರೆ ಎಂದು ಅವರ ಜಗಳ ಬಿಡಿಸಲು ಹೋದ ನಾದಿನಿಗೆ ಈಗ ಇಂಥಹ ಸ್ಥಿತಿ ಬಂದೊದಗಿದೆ. 

ಮಧುಗಿರಿ [ಮಾ.16]: ಗಂಡ-ಹೆಂಡತಿ ಜಗಳವನ್ನು ಬಿಡಿಸಲು ಹೋದ ನಾದಿನಿಯ ಕೈ ಕತ್ತರಿಸಿದ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಹನುಮಂತ ಮತ್ತವರ ಪತ್ನಿ ಅನಿತಾ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಬೆಂಗಳೂರಿನಲ್ಲಿ ನೆಲಸಿದ್ದ ಹನುಮಂತ ಗ್ರಾಮಕ್ಕೆ ಬಂದಿದ್ದ. ಭಾನುವಾರ ಇವರಿಬ್ಬರ ನಡುವೆ ಜೋರು ಗಲಾಟೆಯಾಗಿದೆ.

ಆಗ ಸಿಟ್ಟಿಗೆದ್ದ ಹನುಮಂತ ಮಚ್ಚಿನಿಂದ ತನ್ನ ಹೆಂಡತಿಯನ್ನು ಹೊಡೆಯಲು ಮುಂದಾಗ. ಆಗ ಜಗಳ ಬಿಡಿಸಲು ನಾದಿನಿ ಮೇಘನಾ ಮಧ್ಯೆ ಪ್ರವೇಶಿಸಿದ್ದಾಳೆ.

ಫಸ್ಟ್‌ನೈಟಿಗೂ ಮುನ್ನ ಪತ್ನಿಯ ರಾಸಲೀಲೆ ಲೀಕ್‌! ಪತಿಯ ಮೊಬೈಲ್ ಗೆ ಬಂದ ವಿಡಿಯೋ...

ಈ ವೇಳೆ ಆಕೆಯ ಮುಂಗೈಗೆ ಮಚ್ಚಿನ ಏಟು ಬಿದ್ದು ಜೋತಾಡುತ್ತಿದೆ. ಕೂಡಲೇ ಆಕೆಯನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿ ಪರಾರಿಯಾಗಿದ್ದ ಹನುಮಂತನನ್ನು ಪೊಲೀಸರು ಬಂಧಿಸಿದ್ದಾರೆ.

PREV
click me!

Recommended Stories

ಸರ್ಕಾರಕ್ಕೆ ಲಕ್ಕುಂಡಿ ನಿಧಿ ಬೇಕು, ಇತಿಹಾಸ ಉತ್ಖನನ ಮಾಡೋದಕ್ಕೆ ಟೂಲ್ ಕಿಟ್ ಕೊಡಿಸುವ ಯೋಗ್ಯತೆ ಇಲ್ವಾ?
ಬೆಂಗಳೂರು ಇಸ್ಕಾನ್ ಟೆಂಪಲ್ 'ಸ್ಕೈವಾಕ್' ಬಳಿ ಅಗ್ನಿ ಅವಘಡ; ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ!