
ಮಡಿಕೇರಿ(ಜೂ.18): ಮದ್ಯ ವ್ಯಸನಿಯೋರ್ವ ಕುಡಿಯಲು ಮದ್ಯ ಸಿಗದ್ದಕ್ಕೆ ಸ್ವತಃ ತನ್ನ ಕಾಲನ್ನು ತಾನೇ ಮಾರಕಾಸ್ತ್ರದಿಂದ ಕಡಿದು ತುಂಡರಿಸಿಕೊಂಡ ಆಘಾತಕಾರಿ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಆಮ್ಮತ್ತಿ ಕಾಲೋನಿ ನಿವಾಸಿ ಬೋಜಮ್ಮ ಎಂಬುವವರ ಮಗ ಮಂಜುನಾಥ್ ಪಾಪಣ್ಣ (42) ಎಂಬಾತನೇ ಕಾಲನ್ನು ಕತ್ತರಿಸಿಕೊಂಡಿರುವ ಆಸಾಮಿ.
ಎಣ್ಣೆ ಅಂಗಡಿ ಓಪನ್; ಆರತಿ ಎತ್ತಿ ಬಾಟಲ್ ಹಿಡಿದು ಸಂಭ್ರಮ, ವೈರಲ್ ವಿಡಿಯೋ
ತನ್ನ ತಾಯಿಯೊಂದಿಗೆ ವಾಸವಾಗಿರುವ ಆತ, ಬುಧವಾರ ತಡ ರಾತ್ರಿ ಕುಡಿಯಲು ಮದ್ಯ ಸಿಗದಿದ್ದ ಕಾರಣಕ್ಕೆ ಮಾರಕಾಸ್ತ್ರದಿಂದ ತನ್ನ ಬಲಗಾಲಿನ ಪಾದವನ್ನೇ ಕತ್ತರಿಸಿಕೊಂಡಿದ್ದು, ಕಾಲು ತುಂಡಾಗಿ ಹೋಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.