ತನ್ನ ಹಣ ತಾನೇ ಕದ್ದು ದರೋಡೆ ಆಯ್ತೆಂದು ಡ್ರಾಮಾ ಮಾಡಿದ..!

By Kannadaprabha News  |  First Published Mar 21, 2020, 11:35 AM IST

ಅಪರಿಚಿತ ವ್ಯಕ್ತಿಗಳು ತನ್ನಿಂದ ಹಣ ದೋಚಿದರು ಎಂಬ ಬಗ್ಗೆ ದೂರು ನೀಡಿದ್ದ ವ್ಯಕ್ತಿಯೇ ಪ್ರಮುಖ ಆರೋಪಿಯಾಗಿದ್ದು, ಈತನನ್ನು ಸೇರಿದಂತೆ ನಾಲ್ವರು ಆರೋಪಿಗಳನ್ನು ನುಗ್ಗೇಹಳ್ಳಿ ಬಸ್‌ ನಿಲ್ದಾಣದಲ್ಲಿ ಗುರುವಾರ ಬಂಧಿಸಿ, 54.30 ಲಕ್ಷ ರು ವಶಪಡಿಸಿಕೊಳ್ಳಲಾಗಿದೆ.


ಹಾಸನ(ಮಾ.12): ಅಪರಿಚಿತ ವ್ಯಕ್ತಿಗಳು ತನ್ನಿಂದ ಹಣ ದೋಚಿದರು ಎಂಬ ಬಗ್ಗೆ ದೂರು ನೀಡಿದ್ದ ವ್ಯಕ್ತಿಯೇ ಪ್ರಮುಖ ಆರೋಪಿಯಾಗಿದ್ದು, ಈತನನ್ನು ಸೇರಿದಂತೆ ನಾಲ್ವರು ಆರೋಪಿಗಳನ್ನು ನುಗ್ಗೇಹಳ್ಳಿ ಬಸ್‌ ನಿಲ್ದಾಣದಲ್ಲಿ ಗುರುವಾರ ಬಂಧಿಸಿ, 54.30 ಲಕ್ಷ ರು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿ​ಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸಗೌಡ ಮಾತನಾಡಿ, ಈ ಪ್ರಕರಣ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಚನ್ನರಾಯಪಟ್ಟಣ ಪಟ್ಟಣ ಠಾÜಣೆ ಪೊಲೀಸರು ಭೇದಿ​ಸು​ವಲ್ಲಿ ಯಶಸ್ವಿಯಾಗಿರುವುದಾಗಿ ತಿಳಿಸಿದರು.

Tap to resize

Latest Videos

ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ತಂದೆ: ಕಾರಣ?

ಚನ್ನರಾಯಪಟ್ಟಣದ ಅರಳೀಕಟ್ಟೆಸರ್ಕಲ್‌ ಹತ್ತಿರದ ವಾಸಿ ಹಾಗೂ ಶ್ರೀ ರಾಮ ಫೈನಾನ್ಸ್‌ ನೌಕ​ರ ಆದರ್ಶ(27), ಗಾಯತ್ರಿ ಬಡಾವಣೆಯ ಲಾರಿ ಚಾಲಕ ದಿವಾಕರ(24), ಅರಳೀಕಟ್ಟೆಬೀದಿಯ ಅಗ್ರಹಾರದ ಪ್ಲಂಬಿಂಗ್‌ ಕಾರ್ಮಿಕ ಮಂಜುನಾಥ(25) ಮತ್ತು ಶಿವಮೊಗ್ಗದ ಕೊರಮರ ಬೀದಿಯ 3ನೇ ಕ್ರಾಸ್‌ ವಾಸಿ ವಸಂತ(26) ಎಂಬವರೇ ಬಂಧಿತ ಆರೋಪಿಗಳು. ಆರೋಪಿಗಳಿಂದ 54.30 ಲಕ್ಷ ರು. ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ ಏನು?:

ಮಾ.18ರಂದು ಸಂಜೆ 5 ಗಂಟೆ​ಯಲ್ಲಿ ಚನ್ನರಾಯಪಟ್ಟಣ ನಗರ ಠಾಣಾ ವ್ಯಾಪ್ತಿಯ ಬೆಲಸಿಂದ ಪಾರ್ಕ್ ಹತ್ತಿರ ಆದರ್ಶ ಕಾರಿನಲ್ಲಿದ್ದ 54.30 ಲಕ್ಷ ರು. ಣವನ್ನು ಬೈಕಿನಲ್ಲಿ ಬಂದ ಯಾರೋ ಇಬ್ಬರು ಅಪರಿಚಿತರು ಆದರ್ಶಗೆ ಬೆದರಿಸಿ ಚಾಕು ತೋರಿಸಿ ಹೆದರಿಸಿ ಅವರಿಂದ 54,30,000 ಹಣವನ್ನು ಕಿತ್ತುಕೊಂಡು ಹೋದರು ಎಂದು ಆದರ್ಶ ಚನ್ನರಾಯಪಟ್ಟಣದ ಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದನು.

ಪತ್ತೆಗಾಗಿ ವಿಶೇಷ ತಂಡ ರಚನೆ

ಈ ಪ್ರಕರಣದ ಅರೋಪಿಗಳನ್ನು ಪತ್ತೆ ಮಾಡುವ ಬಗ್ಗೆ ಹೊಳೆನರಸೀಪುರ ಡಿವೈಎಸ್ಪಿ ಬಿ.ಬಿ ಲಕ್ಷ್ಮೇಗೌಡ ಉಸ್ತುವಾರಿಯಲ್ಲಿ ಚನ್ನರಾಯಪಟ್ಟಣ ಸಿಪಿಐ ಕುಮಾರ್‌ ನೇತೃತ್ವದಲ್ಲಿ ಚನ್ನರಾಯಪಟ್ಟಣ ನಗರ ಠಾಣೆಯ ಪಿಎಸ್‌ಐ ಕಿರಣ್‌ ಮತ್ತು ಸಿಬ್ಬಂದಿ ಒಳಗೊಂಡಂತೆ ಒಂದು ವಿಶೇಷ ತಂಡ ರಚಿಸಲಾಗಿತ್ತು.

ಕೂಡಲೇ ಕಾರ‍್ಯ​ಪ್ರ​ವೃ​ತ್ತ​ರಾದ ಪೊಲೀ​ಸರು ಆರೋ​ಪಿ​ಗ​ಳಾದ ದಿವಾ​ಕರ ಮತ್ತು ಮಂಜು​ನಾಥ್‌ ನುಗ್ಗೇ​ಹಳ್ಳಿ ಬಸ್‌ ನಿಲ್ದಾಣ ಬಳಿ ಇರುವ ಬಗ್ಗೆ ಖಚಿತ ಪಡಿ​ಸಿ​ಕೊಂಡು ದಾಳಿ ನಡೆ​ಸಿ ಆರೋ​ಪಿ​ಗ​ಳನ್ನು ಬಂಧಿ​ಸಿ ವಿಚಾ​ರ​ಣೆ​ಗೊ​ಳಿ​ಸಿ​ದ್ದಾ​ರೆ.

ಸ್ಯಾಂಡಲ್‌ವುಡ್ ನಟನ ಹತ್ಯೆ ಮಾಡಿದ ನಿರ್ಮಾಪಕ ಗೋವರ್ಧನ ಮೂರ್ತಿಗೆ ಜೀವಾವಧಿ ಶಿಕ್ಷೆ..!

ಅರೋಪಿಗಳ ವಿಚಾರಣೆಯಿಂದ ಈ ಪ್ರಕರಣದ ದೂರುದಾರನಾದ ಆದರ್ಶನೇ ಮೂಲ ಅರೋಪಿಯೆಂದು ತನಿಖೆಯಿಂದ ತಿಳಿದು ಬಂದಿತ್ತು ಎಂದು ಶ್ರೀನಿವಾಸಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎನ್‌. ನಂದಿನಿ ಇತರರು ಇದ್ದರು.

ದರೋಡೆ ಆಗಿದೆ ಎಂದು ನಾಟ​ಕ​ವಾ​ಡಿದ ಆರೋ​ಪಿ

ಮಾ.5ರಿಂದ ಮಾ.17ರವರೆಗೆ ಶ್ರೀ ರಾಮ ಫೈನಾನ್ಸ್‌ನಲ್ಲಿರುವ ಮಿಷನ್‌ನಲ್ಲಿ ಸಾಲಗಾರರು ಪಾವತಿ ಮಾಡಿದ ಹಣವನ್ನು ಬ್ಯಾಂಕಿಗೆ ಪಾವತಿಸಲು ತಗೆದಿದ್ದು, ಇದರಲ್ಲಿ ಒಟ್ಟು 54,30,00 ಹಣವಿತ್ತು. ಅದೇ ದಿನ ಈ ಹಣವನ್ನು ಚನ್ನರಾಯಪಟ್ಟಣದ ಅಕ್ಸಿಸ್‌ ಬ್ಯಾಂಕಿಗೆ ಪಾವತಿ ಮಾಡಲು ಬ್ರೀಕ್ಸ್‌ ಕಂಪನಿಯ ಅದರ್ಶನು ತಗೆದುಕೊಂಡು ಬಂದಿದ್ದನು.

ಈ ಹಣವನ್ನು ಏನಾದರೂ ಮಾಡಿ ಲಪಟಾಯಿಸುವ ಉದ್ದೇಶದಿಂದ ಆತನ ಸ್ನೇಹಿತರಾದ ದಿವಾಕರ, ವಸಂತ ಮತ್ತು ಮಂಜುನಾಥ್‌ನಿಗೆ ತನ್ನ ಬಳಿ ಶ್ರೀರಾಮ ಫೈನಾನ್ಸ್‌ ಕಂಪನಿಯ ಹಣವಿದೆ. ಈ ಹಣವನ್ನು ದಿವಾಕರ ಮತ್ತು ಮಂಜುನಾಥನಿಗೆ ತಾನು ಮತ್ತು ವಸಂತ ಕಾರಿನಲ್ಲಿರುವಾಗ ಪೋನು ಮಾಡಿದಾಗ ನಾವುಗಳು ಇರುವ ಸ್ಥಳಕ್ಕೆ ಬೈಕಿನಲ್ಲಿ ಬಂದು ನಮ್ಮ ಬಳಿ ಇರುವ ಹಣವನ್ನು ತಗೆದುಕೊಂಡು ಹೋಗಿ, ತಾನು ಮತ್ತು ವಸಂತ್‌ ನಾವಿಬ್ಬರು ಹಣವನ್ನು ಯಾರೋ ಅಪರಿಚತರು ದೋಚಿಕೊಂಡು ಹೋದರು ಎಂದು ನಾಟಕ ಮಾಡುತ್ತೇವೆಂದು ಯೋಜನೆಯನ್ನು ರೂಪಿಸಿಕೊಂಡಿದ್ದರು.

ಅದರಂತೆæ ದಿವಾಕರ ಮತ್ತು ಮಂಜುನಾಥ್‌ ಬೈಕಿನಲ್ಲಿ ಬಂದು ಚನ್ನರಾಯಪಟ್ಟಣ ನಗರದ ಬೆಲಸಿಂದ ಪಾರ್ಕ್ ಬಳಿ ಕಾರಿನಲ್ಲಿದ್ದ ಹಣವನ್ನು ತಗೆದುಕೊಂಡು ಹೋಗಿದ್ದಾರೆ. ರುತ್ತಾರೆ. ಈ ಬಗ್ಗೆ ಅದರ್ಶನು ಯಾರೋ ಅಪರಿಚಿತರು ಬೈಕಿನಲ್ಲಿ ಬಂದು ಹೆದರಿಕೆ ಹಾಕಿ ಹಣವನ್ನು ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಿರುವುದಾಗಿ ತನಿಖೆಯಿಂದ ಕಂಡು ಬಂದಿದೆ ಎಂದು ತಿಳಿಸಿದರು.

ಸದ್ಯ ಇದೀಗ 4 ಜನ ಅರೋಪಿಗಳನ್ನು ಬಂಧಿಸಿ ಶ್ರೀ ರಾಮ ಪೈನಾನ್ಸ್‌ ಕಂಪನಿಗೆ ವಂಚಿಸಿದ್ದ 54.30 ಲಕ್ಷ ರು. ಹಣವನ್ನು ವಶಪಡಿಸಿಕೊಂಡಿ​ರುವ ಚನ್ನರಾಯಪಟ್ಟಣ ನಗರ ಪೊಲೀಸರು ಮುಂದಿನ ಕ್ರಮ ಕೈಗೊಂಡಿ​ದ್ದಾ​ರೆ.

click me!