ಮೂರು ಮಕ್ಕಳ ತಾಯಿ ಮದುವೆಯಾದವ ಆತ್ಮಹತ್ಯೆಗೆ ಶರಣಾದ

Suvarna News   | Asianet News
Published : Dec 18, 2020, 04:07 PM IST
ಮೂರು ಮಕ್ಕಳ ತಾಯಿ ಮದುವೆಯಾದವ ಆತ್ಮಹತ್ಯೆಗೆ ಶರಣಾದ

ಸಾರಾಂಶ

ಮೂರು ಮಕ್ಕಳ ತಾಯಿಯನ್ನು ಮದುವೆಯಾದವ ಇದೀಗ ಆತ್ಮಹತ್ಯೆ ಮಾಡಿಕೊಂಡ. ತನ್ನ ಪ್ರಾಣವನ್ನೇ ಕಳೆದುಕೊಂಡ

ಮೈಸೂರು (ಡಿ.18): ಆರ್ಥಿಕ ಮುಗ್ಗಟ್ಟಿಗೆ ಹೆದರಿ ಆಟೋ ಡ್ರೈವರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಮೈಸೂರಿನ ಸಾತಗಳ್ಳಿ ಬಡಾವಣೆಯ ಅಂಬೇಡ್ಕರ್ ಕಾಲೋನಿಯ ಸಿರಾಜುದ್ದೀನ್(30) ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಪತ್ನಿಯನ್ನ ತವರು ಮನೆಗೆ ಕಳಿಸಿ ಸಿರಾಜುದ್ದೀನ್ ನೇಣಿಗೆ ಶರಣಾಗಿದ್ದಾನೆ. ಗಂಡನಿಂದ ಬೇರಾದ ಮೂರು ಮಕ್ಕಳ ತಾಯಿ ಬೇಬಿ ಆಯಿಷಾಳನ್ನು ಸಿರಾಜುದ್ದಿನ್ ಮದುವೆ ಆಗಿದ್ದ. 

ಜಮೀನಿನ ಕೆಲಸಕ್ಕೆ ಹೋದಾಗ ನಿರಂತರ ಅತ್ಯಾಚಾರ : ಅಪ್ರಾಪ್ತೆಗೆ ಗಂಡು ಮಗು ಹುಟ್ಟಿದಾಗಲೇ ಎಲ್ಲಾ ಗೊತ್ತಾಯ್ತು

ಮೊದಲ ಗಂಡನ  ಮೂರು ಮಕ್ಕಳ ಜವಾಬ್ದಾರಿಯನ್ನೂ ಸಿರಾಜುದ್ದೀನ್ ಹೊತ್ತಿದ್ದು, ಕೊರೋನಾ ಹಿನ್ನೆಲೆ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ.

ಮಗುವಿನ ಬರ್ತಡೇ ಆಚರಿಸಲು ಪತ್ನಿ ಬೇಬಿ ಆಯಿಷಾಳನ್ನು ನಿನ್ನೆ ತವರು ಮನೆಗೆ ಕಳಿಸಿದ್ದ. ಇಂದು ಬೆಳಗ್ಗೆ ಬರ್ತ್‌ಡೇ ಮುಗಿಸಿ ಮನೆಗೆ ವಾಪಸ್  ಬಂದ ವೇಳೆ ಪತಿ ಸಿರಾಜುದ್ದಿನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಬಂದಿದೆ.

ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC