ಹೊಸನಗರ (ಆ.08): ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಹೊಸನಗರದಲ್ಲಿ ನಡೆದಿದೆ.
ಹೊಸನಗರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶನಿವಾರ ಮಧ್ಯರಾತ್ರಿ ಘಟನೆ ನಡೆದಿದೆ. ಅನಾರೋಗ್ಯ ನಿಮಿತ್ತ ಚಿಕಿತ್ಸೆಗೆಂದು ಹೊಸನಗರ ಆಸ್ಪತ್ರೆಗೆ ದಾಖಲಾಗಿದ್ದ ತಾಲೂಕಿನ ಸೊನಲೆಯ ಕೃಷಿಕ ಜಗದೀಶ್ ( 50 ) ಆತ್ಮಹತ್ಯೆ ಮಾಡಿಕೊಂಡವರು.
ಶನಿವಾರ ಮಧ್ಯರಾತ್ರಿ ತಾನು ಮಲಗಿದ್ದ ಕೊಠಡಿಯಿಂದ ಹೊರಬಂದ ಜಗದೀಶ್ ಸಾರ್ವಜನಿಕ ಆಸ್ಪತ್ರೆ ಎರಡನೆ ಅಂತಸ್ತಿಗೆ ತೆರಳುವ ಮೆಟ್ಟಿಲುಗಳಿಗೆ ಅಳವಡಿಸಿದ ಸರಳುಗಳಿಗೆ ತಾನು ಧರಿಸಿದ ಲುಂಗಿಯಿಂದಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಜಗದೀಶ್ ರನ್ನು ನೋಡಿಕೊಳ್ಳಲು ಬಂದಿದ್ದ ಅವರ ಪತ್ನಿ ವಾರ್ಡನಲ್ಲಿ ಮಲಗಿದ್ದರು. ಮಧ್ಯರಾತ್ರಿ ನಂತರ ಪತ್ನಿಗೆ ನಿದ್ದೆ ಬಂದಿದ್ದನ್ನು ಗಮನಿಸಿದ ಜಗದೀಶ್ ಆಸ್ಪತ್ರೆ ಕಾರಿಡಾರ್ ಮೂಲಕ ಎರಡನೇ ಅಂತಸ್ತಿಗೆ ಹೋಗುವ ಮೆಟ್ಟಿಲಿಗೆ ತೆರಳಿ ಅಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ನಿಶ್ಚಿತಾರ್ಥದ ಬಳಿಕ ಪ್ರೀತಿಸಿದವನೊಂದಿಗೆ ವಿವಾಹ : ನವವಿವಾಹಿತೆ ಆತ್ಮಹತ್ಯೆಗೆ ಹಲವು ಶಂಕೆ?
ವಾರ್ಡಲ್ಲಿದ್ದ ಉಳಿದ ರೋಗಿಗಳು ಕೆಲಕಾಲ ಕಳೆದರೂ ಜಗದೀಶ್ ಮರಳಿ ಬಾರದನ್ನು ಕಂಡು ಅಲ್ಲೇ ಮಲಗಿದ್ದ ಅವರ ಪತ್ನಿಗೆ ವಿಷಯ ತಿಳಿಸಿದ್ದಾರೆ. ನಂತರ ಜಗದೀಶ್ ರನ್ನು ಹುಡುಕಿದಾಗ ನೇಣಿಗೆ ಶರಣಾಗಿದ್ದು ಬೆಳಕಿಗೆ ಬಂದಿದೆ.
ಜಗದೀಶ್ ಪತ್ನಿ , ಓರ್ವ ಪುತ್ರಿ ಹಾಗೂ ಓರ್ವನಿದ್ದು, ತಾಲೂಕಿನ ಸೊನೆಲೆಯಲ್ಲಿ ವಾಸವಾಗಿದ್ದಾರೆ.
ಜಗದೀಶ್ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ
ಸದ್ಯ ಈ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.