ಇರೋ ಹಣ ಡಬಲ್ ಮಾಡ್ತೀವಿ ಅಂತಾರೆ, ಇವರ ಟಾರ್ಗೆಟ್‌ ವೃದ್ಧರೇ

By Suvarna NewsFirst Published Jan 30, 2020, 2:07 PM IST
Highlights

ನಿಮ್ಮ ಹಣ ಡಬಲ್ ಮಾಡಿ ಕೊಡ್ತೀನಿ ಎಂದು ವೃದ್ಧರೂ ಸೇರಿ ಜನರಿಂದ ಹಣ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ವಂಚನೆಯ ಜಾಲವೊಂದು ಲಕ್ಷಾಂತರ ರೂಪಾಯಿ ಪಡೆದು ಜನರಿಗೆ ಮೋಸ ಮಾಡಿದೆ.

ಮಡಿಕೇರಿ(ಜ.30): ನಿಮ್ಮ ಹಣ ಡಬಲ್ ಮಾಡಿ ಕೊಡ್ತೀನಿ ಎಂದು ವೃದ್ಧರೂ ಸೇರಿ ಜನರಿಂದ ಹಣ ಪಡೆದು ವಂಚಿಸಿ ಪರಾರಿಯಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ವಂಚನೆಯ ಜಾಲವೊಂದು ಲಕ್ಷಾಂತರ ರೂಪಾಯಿ ಪಡೆದು ಜನರಿಗೆ ಮೋಸ ಮಾಡಿದೆ.

ವಯಸ್ಸಾದವರನ್ನು ಟಾರ್ಗೆಟ್ ಮಾಡಿ ಹಣ ದ್ವಿಗುಣ ಮಾಡೋದಾಗಿ ಹೇಳಿ ವಂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ವಂಚನೆ ಜಾಲ ಬೆಳಕಿಗೆ ಬಂದಿದ್ದು, ಮಡಿಕೇರಿ ತಾಲೂಕಿನ ವಿವಿಧೆಡೆ ಲಕ್ಷಾಂತರ ರೂ. ವಂಚನೆ ಮಾಡಲಾಗಿದೆ.

ಕಾಡು ಪ್ರಾಣಿಗಳನ್ನು ಕಟ್ಟಿ ನಾಯಿಗಳಿಂದ ಕಚ್ಚಿಸ್ತಾರೆ..!

ಬ್ರಾಡ್ ವೇ ಕಂಪನಿ ಹೆಸರಿನಲ್ಲಿ ಮೋಸ ಮಾಡಿದ್ದು, ಮೂರ್ನಾಡು ಮೂಲದ ಬಾಲಕೃಷ್ಣ ನಾಯಕ್ ಎಂಬಾತನಿಂದ ದೋಖಾ ನಡೆದಿದೆ. ಐದು ವರ್ಷಕ್ಕೆ ಹಣ ಡಬ್ಬಲ್ ಆಗುತ್ತೆ ಎಂದು ನಂಬಿ ಹಣ ಹೂಡಿಕೆ ಮಾಡಿದ್ದ ಜನ ಮೋಸಕ್ಕೊಳಗಾಗಿದ್ದಾರೆ. ಐದು ವರ್ಷ ಆಗ್ತಿದ್ದಂತೆ ಕಂಪನಿ ಬಾಗಿಲು ಬಂದ್ ಮಾಡಿಕೊಂಡು ಹಣದೊಂದಿಗೆ ಪರಾರಿಯಾಗಿದೆ.

ಲಕ್ಷಾಂತರ ರೂ. ಹಣ ಪಡೆದು ಬಾಲಕೃಷ್ಣ ಎಸ್ಕೇಪ್ ಆಗಿದ್ದು, ಪೊಲೀಸ್ ಠಾಣೆಗೆ ಹೋದರೂ ನ್ಯಾಯ ಸಿಕ್ಕಿಲ್ಲ. 50 ಲಕ್ಷ ರೂಪಾಯಿಗೂ ಅಧಿಕ ವಂಚನೆ ಮಾಡಿದ್ದು, ಚೆಕ್ ನೀಡಿ ಆಸಾಮಿ ಎಸ್ಕೇಪ್ ಆಗಿದ್ದಾನೆ. ಹಣ ಡ್ರಾ ಮಾಡಲು ಹೋದಾಗ ಚೆಕ್ ಬೌನ್ಸ್ ಆಗಿರುವುದು ಬಯಲಾಗಿದೆ.

ಸ್ಪೆಷಲ್ ಕ್ಲಾಸ್ ನೆಪದಲ್ಲಿ ಮೈ, ಕೈ ಮುಟ್ಟೋ ಮುಖ್ಯ ಶಿಕ್ಷಕ, ಸೆಲ್ಫೀ ತೆಗೆದು ಅಪ್ಲೋಡ್

click me!