14 ಲಕ್ಷ ವಂಚಿಸಿದ ಫೇಸ್‌ಬುಕ್‌ ಸ್ನೇಹಿತ! ಎಚ್ಚರ!

By Web DeskFirst Published Jun 6, 2019, 11:56 AM IST
Highlights

ಮಂಗಳೂರಿನಲ್ಲಿ ವ್ಯಕ್ತಿಯೋರ್ವರು ಫೇಸ್ ಬುಕ್ ಸ್ನೇಹಿತನಿಂದ ವಂಚನೆಗೆ ಒಳಗಾಗಿದ್ದಾರೆ. ಬರೋಬ್ಬರು 14 ಲಕ್ಷದಷ್ಟು ಹಣ ಕಳೆದುಕೊಂಡಿದ್ದಾರೆ. 

ಮಂಗಳೂರು: ಡಾಲರ್‌ ಕೊಡಿಸುವ ನೆಪದಲ್ಲಿ ಸುರತ್ಕಲ್‌ ನಿವಾಸಿಯೊಬ್ಬರಿಗೆ ವ್ಯಕ್ತಿಯೋರ್ವ 13,62,800 ವಂಚಿಸಿದ ಕುರಿತು ಸೈಬರ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

ಸುರತ್ಕಲ್‌ ನಿವಾಸಿಯೊಬ್ಬರಿಗೆ ಜನವರಿಯಲ್ಲಿ ಫೇಸ್‌ಬುಕ್‌ನಲ್ಲಿ ಜೈನ್‌ ಪೂಜಾರಿ ಎಂಬ ವ್ಯಕ್ತಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದ. ಇವರು ರಿಕ್ವೆಸ್ಟ್‌ನ್ನು ಸ್ವೀಕಾರ ಮಾಡಿ ಫ್ರೆಂಡ್‌ ಆಗಿದ್ದಾರೆ. ನಂತರ ದಿನಗಳಲ್ಲಿ ಜೈನ್‌ ಪೂಜಾರಿ ಹಾಗೂ ಇತರರು ಸುರತ್ಕಲ್‌ ನಿವಾಸಿಯ ಮೊಬೈಲ್‌ಗೆ ಕರೆ ಮಾಡಿ, ನಿಮ್ಮ ಹೆಸರಿಗೆ ವಿದೇಶದಿಂದ ಡಾಲರ್‌ ಇರುವ ಪೆಟ್ಟಿಗೆ ಬಂದಿದೆ. 

ಅದನ್ನು ಬಿಡಿಸುವ ಸಲುವಾಗಿ ಹಣ ಪಾವತಿ ಮಾಡಬೇಕು ಎಂದು ಕಸ್ಟಮ್‌ ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ್ದಾರೆ. ಇದನ್ನು ನಿಜವೆಂದು ನಂಬಿದ ವ್ಯಕ್ತಿ ಅವರು ಕೇಳಿದಷ್ಟುಹಣ ಪಾವತಿಸಿದ್ದಾರೆ. ಆದರೆ, ಇನ್ನಷ್ಟುಹಣಕ್ಕೆ ಬೇಡಿಕೆ ಇಟ್ಟಾಗ ಸಂಶಯಗೊಂಡ ಅವರು ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

click me!