ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಚಿತ್ರದುರ್ಗ: ಸಾಹಿತಿ ಕುಂ.ವೀರಭದ್ರಪ್ಪ ಪುತ್ರ ಪ್ರವರ ಕುಂ.ವೀ. ಬುಧವಾರ ನಗರದ ಮುರುಘಾ ಮಠದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅಂಬಿಕಾ ಅವರೊಂದಿಗೆ ಅಂತರ್ಜಾತಿ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕುಂಬಾರ ಸಮುದಾಯದ ಪ್ರವರ ಅವರು ಬೆಸ್ತರ ಸಮುದಾಯಕ್ಕೆ ಸೇರಿದ ಅಂಬಿಕಾ ಅವರನ್ನು ವರಿಸುವ ಮೂಲಕ ಮಾದರಿಯಾಗಿದ್ದಾರೆ. ಇದೇ ವೇಳೆ ಒಟ್ಟು 45 ಜೋಡಿಗಳು ವಿವಾಹವಾಗಿದ್ದು, 6 ಅಂತರ್ಜಾತಿ ವಿವಾಹಗಳು ನೆರವೇರಿದವು. ಸಾಹಿತಿ ಕುಂ.ವೀರಭದ್ರಪ್ಪ, ಬಸವಧಾಮ ಅತ್ತಿವೇರಿಯ ಮಾತೆ ಬಸವೇಶ್ವರಿ ಮಾತಾಜಿ ಇದ್ದರು.
undefined
ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕು.ವೀರಭದ್ರಪ್ಪ ಅವರು, ಪ್ರಸ್ತುತ ದಿನಗಳಲ್ಲಿ ಸರಳ ವಿವಾಹಗಳ ಅಗತ್ಯ ಹೆಚ್ಚಿದೆ. ಇದರಿಂದ ಜಾತಿ ವ್ಯವಸ್ಥೆ ಸಡಿಲಗೊಳ್ಳುವ ಜೊತೆಗೆ ಆರ್ಥಿಕ ಸುಭದ್ರತೆ ಸಿಗಲಿದೆ.
ದೇಶದ ಸಂವಿಧಾನದ ಸ್ವಾಭಿಮಾನವನ್ನು ಕಾಪಾಡುವ ಪ್ರಕ್ರಿಯೆ ಸಾಮೂಹಿಕ ಮದುವೆಗಳಲ್ಲಿದೆ. ನಮ್ಮ ಕುಟುಂಬದಲ್ಲಿ ವೈಚಾರಿಕ ವಾತಾವರಣವಿದೆ. ಅದರಂತೆಯೇ ನನ್ನ ಮಗನ ಅಂತರ್ಜಾತಿ ವಿವಾಹಕ್ಕೆ ಪ್ರೋತಾಹ ನೀಡಿದ್ದೇನೆ ಎಂದು ತಿಳಿಸಿದ್ದಾರೆ.