ಕೊರೋನಾ ವಾರಿಯರ್ ಪೌರ್ ಕಾರ್ಮಿಕನ ಮೇಲೆ ಹಲ್ಲೆ

By Kannadaprabha News  |  First Published Apr 22, 2020, 11:14 AM IST

ಕೊರೋನಾ ವೈರಸ್‌ ನಿಯಂತ್ರಣದ ವಾರಿಯರ್ಸ್‌ ಮೇಲೆ ರಾಜ್ಯದಲ್ಲಿ ಹಲ್ಲೆ ಮುಂದುವರಿದಿದ್ದು, ನಗರದಲ್ಲಿ ಮಂಗಳವಾರ ಬೆಳಗ್ಗೆ ಮಹಿಳೆ ಸೇರಿದಂತೆ ಇಬ್ಬರು ಪೌರ ನೌಕರರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.


ಚಿಕ್ಕಮಗಳೂರು(ಏ.22): ಕೊರೋನಾ ವೈರಸ್‌ ನಿಯಂತ್ರಣದ ವಾರಿಯರ್ಸ್‌ ಮೇಲೆ ರಾಜ್ಯದಲ್ಲಿ ಹಲ್ಲೆ ಮುಂದುವರಿದಿದ್ದು, ನಗರದಲ್ಲಿ ಮಂಗಳವಾರ ಬೆಳಗ್ಗೆ ಮಹಿಳೆ ಸೇರಿದಂತೆ ಇಬ್ಬರು ಪೌರ ನೌಕರರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಉಪ್ಪಳ್ಳಿ ಬಡಾವಣೆಯಲ್ಲಿ ಮನೆ ಮನೆ ಕಸ ಸಂಗ್ರಹ ಮಾಡಲು ಪೌರ ಸೇವಾ ನೌಕರ ಮಂಜುನಾಥ್‌ ಟಿಪ್ಪರ್‌ ಆಟೋ ಚಾಲನೆ ಮಾಡುತ್ತಿದ್ದರು. ಗೀತಮ್ಮ ಹಾಗೂ ಇನ್ನೋರ್ವ ಯುವಕ ಕಸ ತೆಗೆದುಕೊಂಡು ಬಂದು ಆಟೋಗೆ ಸುರಿಯುತ್ತಿದ್ದರು. ಈ ವೇಳೆಯಲ್ಲಿ ಕಾರಿನಲ್ಲಿ ಬಂದ ತಮ್ಮೀಮ್‌ ಆಟೋ ಸೈಡಿಗೆ ನಿಲ್ಲಿಸಲು ಆಗುವುದಿಲ್ಲವೇ ಎಂದು ಏಕವಚನದಲ್ಲಿ ಮಂಜುನಾಥ್‌ ಅವರನ್ನು ಬೈದಿದ್ದಾರೆ.

Tap to resize

Latest Videos

ಚೀನಾ ಹಾದಿಯಲ್ಲಿ ಪಾಕ್: ಕರಾಚಿಯಲ್ಲೇ 3 ಸಾವಿರಕ್ಕೂ ಅಧಿಕ ಶವ!

ಆಗ ಮಾತಿಗೆ ಮಾತು ಬೆಳೆಯುತ್ತಿದ್ದಂತೆ ತಮ್ಮೀಮ್‌ ಅವರು ಮಂಜುನಾಥ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಆಗ ಬಿಡಿಸಲು ಬಂದ ಪೌರ ಸೇವಾ ನೌಕರರಾದ ಗೀತಮ್ಮ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಕೂಡಲೇ ಈ ವಿಷಯ ಪೊಲೀಸರಿಗೆ ಹಾಗೂ ಪೌರ ಸೇವಾ ನೌಕರರಿಗೆ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದು ಗಾಯಾಳು ಮಂಜುನಾಥ್‌ ಅವರನ್ನು ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದಾರೆ.

ಬೆಳಗಾವಿ: ರೈಲಿಗೆ ಸಿಕ್ಕು ಎರಡು ಕಾಡುಕೋಣಗಳ ಸಾವು

ಮಂಜುನಾಥ್‌ ಕೊಟ್ಟದೂರಿನನ್ವಯ ಬಸವನಹಳ್ಳಿ ಪೊಲೀಸರು ತಮ್ಮಿಮ್‌ನನ್ನು ಬಂಧಿಸಿ, ಅವನ ವಿರುದ್ಧ ಹಲ್ಲೆ ಹಾಗೂ ಪರಿಶಿಷ್ಟಜಾತಿ ದೌರ್ಜನ್ಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

click me!