ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ

Kannadaprabha News   | Asianet News
Published : Jul 10, 2020, 07:33 AM IST
ಆಶಾ ಕಾರ್ಯಕರ್ತೆಗೆ ದೊಣ್ಣೆಯಿಂದ ತಲೆಗೆ ಹೊಡೆದು ಹಲ್ಲೆ

ಸಾರಾಂಶ

ಕರ್ತವ್ಯ ನಿರತ ಆಶಾ ಕಾರ್ಯಕರ್ತೆಯೋರ್ವರಿಗೆ ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟುವಿನಲ್ಲಿ ಗುರುವಾರ ನಡೆದಿದೆ.

ಬಂಟ್ವಾಳ(ಜು.10): ಕರ್ತವ್ಯ ನಿರತ ಆಶಾ ಕಾರ್ಯಕರ್ತೆಯೋರ್ವರಿಗೆ ವ್ಯಕ್ತಿಯೋರ್ವ ದೊಣ್ಣೆಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ. ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ಹಲೆಪ್ಪಾಡಿ ಮುಂಡೊಟ್ಟುವಿನಲ್ಲಿ ಗುರುವಾರ ನಡೆದಿದೆ.

ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಿಂದ ಕಾರ್ಯನಿರ್ವಹಿಸುತ್ತಿರುವ ಮಮತಾ ಗಟ್ಟಿಅವರಿಗೆ ಇಲ್ಲಿಯ ಮಜಲು ನಿವಾಸಿ ಕಾಂತಪ್ಪ ಪೂಜಾರಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಆತಂಕ ಬೇಡ, ಗಾಳಿಯಲ್ಲಿ ಕೊರೋನಾ ಹರಡುವಿಕೆಗೆ ತಜ್ಞರ ಸಲಹೆ!

ಗುರುವಾರ ಮಧ್ಯಾಹ್ನ ಮಮತಾ ಅವರು ಮನೆಗೆ ತೆರಳುತ್ತಿದ್ದ ಸಂದರ್ಭ ಆರೋಪಿ ದೊಣ್ಣೆಯಿಂದ ಏಕಾಏಕಿ ಹಲ್ಲೆ ನಡೆಸಿದ್ದು, ತಲೆಗೆ, ಕೈಗೆ ಗಾಯವಾಗಿದೆ. ತಕ್ಷಣ ಅವರನ್ನು ವಾಮದಪದವು ಆಸ್ಪತ್ರೆಗೆ ಸಾಗಿಸಲಾಗಿದೆ.

ಹಲ್ಲೆಗೆ ಸ್ಪಷ್ಟಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಉಮೇಶ್‌ ಅಡ್ಯಂತಾಯ ಅವರು ಪುಂಜಾಲಕಟ್ಟೆಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನರ್ಸ್, ಆಶಾ ಕಾರ್ಯಕರ್ತೆಯರ‌ ಸೇವೆ ಶ್ಲಾಘಿಸಿದ ಸಚಿವ ಶ್ರೀರಾಮುಲು

ಆರಮಭದಿಂದಲೂ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಯುತ್ತಿರುವ ಘಟನೆಗಳು ವರದಿಯಾಗುತ್ತಲೇ ಇವೆ. ಹೀಗಿದ್ದರೂ ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ಫೀಲ್ಡ್‌ಗೆ ಇಳಿದು ಕಾರ್ಯ ನಿರ್ವಹಿಸುತ್ತಿದ್ದಾರೆ.

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ