ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವ ಸಿಕ್ಕಿಬಿದ್ದ

Published : Sep 15, 2019, 06:10 PM IST
ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದವ ಸಿಕ್ಕಿಬಿದ್ದ

ಸಾರಾಂಶ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಬಂಧನ/ ಕೈಗಾರಿಕಾ ಭದ್ರತಾ ಪಡೆ [ CISF]ಯಿಂದ ಕೇರಳದ ಕಾಸರಗೋಡು ಮೂಲದ ಆರೀಫ್  ಎಂಬಾತನ ಬಂಧನ/ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ

ಮಂಗಳೂರು[ಸೆ. 15] ನಕಲಿ ಟಿಕೆಟ್ ಬಳಸಿ ಮಂಗಳೂರು ವಿಮಾನ ನಿಲ್ದಾಣಕ್ಕೆ ವ್ಯಕ್ತಿ ಎಂಟ್ರಿ ಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. CISF ಸಿಬ್ಬಂದಿಯಿಂದ ಕೇರಳದ ಕಾಸರಗೋಡು ಮೂಲದ ಆರೀಫ್  ಎಂಬಾತನನ್ನು ಬಂಧಿಸಲಾಗಿದೆ.

ದುಬೈಗೆ ಹೋಗುವ ಸ್ಪೈಸ್ ಜೆಟ್ SG 59 ನ ನಕಲಿ ಇ- ಟಕೆಟ್ ಮಾಡಿಕೊಂಡಿದ್ದ. ರಾತ್ರಿ 12 ಗಂಟೆ ಸುಮಾರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಏರ್ಪೋರ್ಟ್ ಒಳಗೆ ಹೋಗಿ ವಾಪಾಸ್ ಬರುವಾಗ ಅನುಮಾನಗೊಂಡ ಸಿಬ್ಬಂದಿ ಆತನನ್ನು ಬಂಧಿಸಿದ್ದಾರೆ.

4 ಜನ ಮನೆಯವರನ್ನು ಫ್ಲೈಟ್ ಹತ್ತಿಸಲು ಹೋಗಿದ್ದಾಗಿ ಆರೀಫ್ ಹೇಳಿದ್ದು  ಹೆಚ್ಚಿನ ತನಿಖೆಗಾಗಿ ಬಜಪೆ ಪೊಲೀಸರಿಗೆ ಆರೀಫ್ ಹಸ್ತಾಂತರ ಮಾಡಲಾಗಿದೆ. ಈತನ ಎಂಟ್ರಿಯ ಬಳಿಕ ವಿಮಾನ ನಿಲ್ಧಾಣದಲ್ಲಿ ತೀವ್ರ ತಪಾಸಣೆ ಕೈಗೊಳ್ಳಲಾಗಿದೆ.

 

PREV
click me!

Recommended Stories

ಮುಡಾ ಹಗರಣದಲ್ಲಿ ಕೋರ್ಟ್ ಹೊಸ ಆದೇಶ, ಜೈಲಲ್ಲಿದ್ದ ಮಾಜಿ ಆಯುಕ್ತ ದಿನೇಶ್ ಕುಮಾರ್ ಮತ್ತೆ ಪೊಲೀಸ್‌ ಕಸ್ಟಡಿಗೆ!
ಲೋಕಾಯುಕ್ತ ದಾಳಿ: ₹50 ಸಾವಿರ ಹಣ ಟಾಯ್ಲಟ್ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ ಕೃಷಿ ಅಧಿಕಾರಿ!