ಮಕ್ಕಳನ್ನು ದತ್ತು ನೀಡಲು ನಿರಾಕರಿಸಿದ : ಅಣ್ಣನ ಕೊಂದು ಸುಟ್ಟ ತಮ್ಮ

Kannadaprabha News   | Asianet News
Published : Jan 29, 2021, 12:21 PM IST
ಮಕ್ಕಳನ್ನು ದತ್ತು ನೀಡಲು ನಿರಾಕರಿಸಿದ :  ಅಣ್ಣನ ಕೊಂದು ಸುಟ್ಟ ತಮ್ಮ

ಸಾರಾಂಶ

ಮಕ್ಕಳ ವಿಚಾರವಾಗಿ ಸ್ವಂತ ಅಣ್ಣನನ್ನೇ ತಮ್ಮ ಕೊಲೆಗೈದು ಸುಟ್ಟು ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ ಇದೀಗ ತಮ್ಮನನ್ನು ಅರೆಸ್ಟ್‌ ಮಾಡಲಾಗಿದೆ

ಬಂಗಾರಪೇಟೆ (ಜ.29):  ಮಕ್ಕಳನ್ನು ತನಗೆ ದತ್ತು ನೀಡಲು ನಿರಾಕರಿಸಿದ ಕಾರಣಕ್ಕಾಗಿ ಜಹಿತನ ಜತೆ ಸೇರಿ ಅಣ್ಣನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೇಶಿಹಳ್ಳಿ ನಿವಾಸಿ ರಾಜೇಶ್‌ ಮತ್ತು ಇತನ ಸ್ನೇಹಿತ ಅಜಯ್‌ ಎಂಬಾತ ಬಂಧಿತ ಆರೋಪಿ. ಪಟ್ಟಣದ ಗಂಗಮ್ಮನಪಾಳ್ಯದಲ್ಲಿ ವಾಸವಾಗಿರುವ ಕೊಲೆ ಆರೋಪಿಯ ಅಣ್ಣ ರಮೇಶ್‌ಗೆ ಇಬ್ಬರು ಮಕ್ಕಳಿದ್ದು ಪತ್ನಿಯಿಂದ ದೂರವಾಗಿದ್ದಾರೆ. ತಮ್ಮ ರಾಜೇಶ್‌ನಿಗೆ ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲ. ಈತ ಅಣ್ಣನ ಇಬ್ಬರೂ ಮಕ್ಕಳ ಪೋಷಣೆ ಮಾಡುತ್ತಿತ್ತ. ಇವರಿಬ್ಬರನ್ನೂ ತನಗೇ ದತ್ತು ನೀಡುವಂತೆ ಅಣ್ಣ ರಮೇಶ್‌ನ ಬಳಿ ಹಲವು ಬಾರಿ ಮಾತುಕತೆ ಮಾಡಿದ್ದ.

ರಾಯಚೂರು; ಆತ್ಮಹತ್ಯೆಗೆ ಪ್ರೇಮಿಗಳು ಶರಣು, ಇಬ್ಬರಿಗೂ ಮದುವೆಯಾಗಿತ್ತು!

ಅಣ್ಣನ ಕೊಲೆ ಮಾಡಿ ಸುಟ್ಟುಹಾಕಿದ :  ಆದರೆ ರಮೇಶ್‌ ತನ್ನ ಮಕ್ಕಳನ್ನು ತಮ್ಮನಿಗೆ ದತ್ತು ನೀಡಲು ನಿರಾಕರಿಸಿದ್ದ ಎನ್ನಲಾಗಿದೆ. ಜ.ಕಳೆದ 22ರಂದು ರಾತ್ರಿ ಇದೇ ವಿಷಯವನ್ನು ಚರ್ಚಿಸಲು ರಾಜೇಶ್‌ ಅಣ್ಣ ರಮೇಶ್‌ನನ್ನು ತನ್ನ ಮನೆಗೆ ಕರೆಸಿಕೊಂಡು ಚರ್ಚಿಸುವ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಆಗ ರಾಜೇಶ್‌ ಕೋಪಗೊಂಡು ಮಚ್ಚಿನಿಂದ ಅಣ್ಣನ ತಲೆಗೆ ಹೊಡೆದಿದ್ದು, ರಮೇಶ್‌ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಬಳಿಕ ಅಣ್ಣನ ಆಟೋದಲ್ಲಿ ಮೃತ ದೇಹವನ್ನು ರೈಲ್ವೆ ಅಂಡರ್‌ಪಾಸ್‌ ಕೆಳಗೆ ಆಟೋ ಸಮೇತ ಪೆಟ್ರೋಲ್‌ ಹಾಕಿ ಸುಟ್ಟು ಹಾಕಿದ್ದಾನೆ.

ಆರೋಪಿಗಳ ಪತ್ತೆಗೆ ಇನ್ಸ್‌ಪೆಕ್ಟರ್‌ ಸುನೀಲ್‌ಕುಮಾರ್‌ ನೇತೃತ್ವದಲ್ಲಿ ವಿಶೇಷ ತಂಡವನ್ನು ನೇಮಿಸಿದ್ದರು. ಪ್ರಕರಣ ನಡೆದ ವಾರದೊಳಗೆ ತಂಡ ಆರೋಪಿಗಳನ್ನು ಬಂಧಿಸಿದ್ದಾರೆಂದು ಎಸ್ಪಿ ಇಲಕ್ಕಿಯಾ ಕರುಣಾಕರನ್‌ ಪೊಲೀಸ್‌ ತಂಡವನ್ನು ಅಭಿನಂದಿಸಿದ್ದಾರೆ. 

PREV
click me!

Recommended Stories

ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿಗೆ ಯತ್ನಾಳ್ ತಿರುಗೇಟು
ಕರಾವಳಿಗೆ ಡಿಕೆಶಿ ಮೆಗಾ ಪ್ಲಾನ್: 300 ಕಿ.ಮೀ ವ್ಯಾಪ್ತಿಯಲ್ಲಿ 'ನ್ಯೂ ಟೂರಿಸಂ ಪಾಲಿಸಿ' ಘೋಷಣೆ!