
ನಾಗಮಂಗಲ (ಜೂ.07): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸ್ವಂತ ಭಾವನನ್ನೇ ಸ್ನೇಹಿತನ ಜೊತೆಗೂಡಿ ಉಸಿರು ಗಟ್ಟಿಸಿ ಕೊಲೆ ಮಾಡಿದ ಭಾಮೈದಾ ಪ್ರಕರಣದ ದಿಕ್ಕು ತಪ್ಪಿಸಲು ಹೋಗಿ ತಾನೇ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ತಾಲೂಕಿನ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಕರಿಕ್ಯಾತನಹಳ್ಳಿ ಸಮೀಪ ಕಳೆದ ಮೂರು ದಿನಗಳ ಹಿಂದೆ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಂತೆ ಮಾವತ್ತೂರು ಗ್ರಾಮದ ಶಿವನಂಜಪ್ಪ ಎಂಬುವರ ಮಗ ಪುಟ್ಟರಾಜು (40) ಎಂಬುವರೇ ಭಾಮೈದನಿಂದ ಕೊಲೆಯಾದ ವ್ಯಕ್ತಿ. ತಾಲೂಕಿನ ಹೊಣಕೆರೆ ಹೋಬಳಿಯ ಚಿಣ್ಯ ಗ್ರಾಮದ ನಂಜಪ್ಪ ಎಂಬುವರ ಮಗ ಮಂಜುನಾಥ (28) ಮತ್ತು ಆತನ ಸ್ನೇಹಿತ ಗಂಗ ಎಂಬುವವರೇ ಕೊಲೆ ಮಾಡಿರುವ ಆರೋಪಿಗಳು.
'ಪಬ್ಲಿಕ್‌ನಲ್ಲಿ ಮೂತ್ರಮಾಡಬೇಡಿ' ಬುದ್ಧಿ ಹೇಳಿದ್ದಕ್ಕೆ ಜಜ್ಜಿ ಕೊಂದರು
ಜೂ. 3ರ ಗುರುವಾರ ರಾತ್ರಿ ಪುಟ್ಟರಾಜು ಅವರನ್ನು ಕರಿಕ್ಯಾತನಹಳ್ಳಿ ಸಮೀಪಕಕ್ಕೆ ಕರೆ ತಂದಿರುವ ಆರೋಪಿಗಳಾದ ಮಂಜುನಾಥ್ ಮತ್ತು ಆತನ ಸ್ನೇಹಿತ ಪುಟ್ಟರಾಜುನನ್ನು ಉರಿಸುಗಟ್ಟಿಸಿ ಕೊಲೆ ಮಾಡಿ ರಸ್ತೆ ಮಧ್ಯ ಬಿಸಾಡಿದ್ದರು.
ಈ ವೇಳೆ ಗಮನಿಸಿದ ಸ್ಥಳೀಯರು ಸಾರ್ವಜನಿಕ ಆಸ್ಪತ್ರೆ ಸಾಗಿಸಿದ್ದು ಅದಾಗಲೇ ವ್ಯಕ್ತಿ ಮೃತಪಟ್ಟಿದ್ದರು. ನಂತರ ಮಂಜುನಾಥ್ ಪೊಲೀಸ್ ಠಾಣೆಗೆ ಆಗಮಿಸಿ ಪುಟ್ಟರಾಜು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಹೇಳಿದ್ದಾನೆ.
ತಕ್ಷಣ ಸ್ಥಳಕ್ಕೆ ತೆರಳಿ ಪೊಲೀಸರು ರಿಶೀಲಿಸಿದಾಗ ಎಲ್ಲಿಯೂ ಗಾಯಗಳಾಗಿರುವುದು ಕಂಡಿಲ್ಲ. ಈ ವೇಳೆ ಮಂಜುನಾಥನ ಮೇಲೆ ಅನುಮಾನ ವ್ಯಕ್ತವಾಗಿದ್ದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾ ಸತ್ಯತೆ ಗೊತ್ತಾಗಿದೆ.
ಕೌಟುಂಬಿಕ ಕಲಹ ಕಾರಣ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ.