ಆನೇಕಲ್(ಜೂ. 06) ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಿಡ್ನಾಪ್ ಆಗಿದ್ದ ಬಾಲಕ ಕೊಲೆಯಾಗಿದ್ದಾನೆ. ಮೊಹಮದ್ ಆಸೀಫ್ (10) ಎಂಬ ಬಾಲಕನ ಹತ್ಯೆಯಾಗಿದೆ.

ಬಾಡಿಗೆ ಮನೆ ನಿವಾಸಿಯ ಸಂಬಂಧಿಯಿಂಯೇ ಕೊಲೆ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಬೆಂಗಳೂರು ಹೊರವಲಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಶಿಕಾರಿ ಪಾಳ್ಯದಲ್ಲಿ ಘಟನೆ ನಡೆದಿದೆ.

ಕಳೆದ ಮೂರು ದಿನಗಳ ಹಿಂದೆ ಬಾಲಕನ ಅಪಹರಣವಾಗಿತ್ತು. ಬಾಲಕನನ್ನು ವಾಪಸ್ ಕಳಿಸಲು 25 ಲಕ್ಷ ರೂ. ನೀಡಬೇಕು ಎಂದು ಕಿಡ್ನಾಪರ್ಸ್ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದರು.

ಬಾಲಕ ಕಿಡ್ನಾಪ್ ಬಗ್ಗೆ ಪೋಷಕರಿಂದ ಹೆಬ್ಬಗೋಡಿ ಪೊಲೀಸರಿಗೆ ದೂರು ಸಲ್ಲಿಕೆಯಾಗಿತ್ತು. ಬಾಲಕನ ಪತ್ತೆಗೆ ಹೆಬ್ಬಗೋಡಿ ಪೊಲೀಸರು ಹುಡುಕಾಟ ನಡೆಸಿದ್ದು ಶನಿವಾರರಾತ್ರಿ ಜಿಗಣಿ ಸಮೀಪದ ನಂಜಾಪುರ ಬಳಿ ಬಾಲಕನ ಶವ ಪತ್ತೆಯಾಗಿದೆ.

ಬಡಾವಣೆಯೊಂದರ ಸೆಕ್ಯೂರಿಟಿ ಶೆಡ್ ನಲ್ಲಿ ಬಾಲಕನ ಶವ ಪತ್ತೆಯಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಆರೋಪಿ ಬಗ್ಗೆ ಮೃತ ಬಾಲಕನ ಸ್ನೇಹಿತ ಇರ್ಫಾನ್ ಸುಳೀವು ನೀಡಿದ್ದಾನೆ.

ಡಕಾಯಿತಿ ಆರೋಪಿಯನ್ನೇ ಕಿಡ್ನಾಪ್ ಮಾಡಿದ ಸ್ಟೋರಿ

ಮೃತ ಬಾಲಕನ ಬಾಡಿಗೆ ಮನೆ ವಾಸಿ ಸಂಬಂಧಿ ಮಹಮದ್ ಜಾವೀದ್ ಶೇಕ್ ಎಂಬಾತನೆ ಕೊಲೆ ಮಾಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ವಾರದ ಹಿಂದೆ ಬಾಲಕ ಇರ್ಫಾನ್ ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೆ ಜಾವೀದ್ ಯತ್ನಿಸಿದ್ದ ಎಂಬ ಮಾಹಿತಿಯೂ ಲಭ್ಯವಾಆಗಿದೆ.

ಸುತ್ತಮುತ್ತ ಕುರಿಗಾಹಿಗಳು ಇದ್ದುದ್ದರಿಂದ ಇರ್ಫಾನ್ ನನ್ನು ಮರಳಿ ಮನೆಗೆ ತಂದುಬಿಟ್ಟಿಉದ್ದ. ಶಂಕಿತ ಆರೋಪಿ ಜಾವೀದ್ ಹದಿನೈದು ದಿನಗಳ ಹಿಂದೆ ಛತ್ತೀಸ್ಗಢ ನಿಂದ ಶಿಕಾರಿಪಾಳ್ಯದ ಮಾವನ ಮನೆಗೆ ಬಂದಿದ್ದ. ನಿಶ್ಚಯವಾಗಿರುವ ತನ್ನ ಮದುವೆಗಾಗಿ ಹಣ ಹೊಂದಿಸಲು ಮಾವನ ಮನೆಗೆ ಬಂದಿದ್ದ ಆರೋಪಿ ಜಾವೀದ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ.