ಕೊರೋನಾ ಬಂದ್ರೂ ಹೆಂಡ್ತಿ ಬಿಟ್ಟಿರದ ಪತಿರಾಯ: ನಿನ್ನ ಬಿಟ್ಟು ಇರಲಾರೆ ಎಂದು ಹಠ ಹಿಡಿದ ಗಂಡ..!

Suvarna News   | Asianet News
Published : Jul 03, 2020, 12:40 PM ISTUpdated : Jul 03, 2020, 12:44 PM IST
ಕೊರೋನಾ ಬಂದ್ರೂ ಹೆಂಡ್ತಿ ಬಿಟ್ಟಿರದ ಪತಿರಾಯ: ನಿನ್ನ ಬಿಟ್ಟು ಇರಲಾರೆ ಎಂದು ಹಠ ಹಿಡಿದ ಗಂಡ..!

ಸಾರಾಂಶ

ಕೊರೋನಾ ಸೋಂಕಿತ ಪತ್ನಿಯೊಂದಿಗೆ ಆಸ್ಪತ್ರೆಗೆ ಹೋಗುವುದಾಗಿ ರಂಪಾಟ ತಗೆದ ಪತಿ| ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಕೋವಿಡ್ ವಾರ್ಡ್‌ಗೂ ಪತ್ನಿಯೊಂದಿಗೆ ಹೋಗಲು ಯತ್ನಿಸಿದ ಗಂಡ|     

ಹಾವೇರಿ(ಜು.03): ಮಹಾಮಾರಿ ಕೊರೋನಾ ಸೋಂಕಿತ ಪತ್ನಿಯೊಂದಿಗೆ ಆಸ್ಪತ್ರೆಗೆ ಹೋಗುವುದಾಗಿ ಪತಿ ರಂಪಾಟ ಮಾಡಿದ ಘಟನೆ ನಿನ್ನೆ(ಗುರುವಾರ) ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನಡೆದಿದೆ. 

ಕೆಮ್ಮು, ನೆಗಡಿ, ಜ್ವರದ ಲಕ್ಷಣದ ಹಿನ್ನೆಲೆಯಲ್ಲಿ ಗರ್ಭಿಣಿಯ ಸ್ವ್ಯಾಬ್ ಟೆಸ್ಟ್ ಮಾಡಲಾಗಿತ್ತು. ಗುರುವಾರ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆ ಆ್ಯಂಬುಲೆನ್ಸ್‌ನೊಂದಿಗೆ ಗ್ರಾಮಕ್ಕೆ ತೆರಳಿದ್ದರು. ಆಗ ಪತ್ನಿಯೊಂದಿಗೆ ತಾನೂ ಬರುವುದಾಗಿ ರಂಪಾಟ ಮಾಡಿದ್ದಾನೆ. 

ಹಾವೇರಿ: ತಂದೆಯ ಸಾವಿನ ದುಃಖದ ಮಧ್ಯೆಯೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ನಿನ್ನ ಬಿಟ್ಟು ನಾನಿರುವುದಿಲ್ಲ ಎಂದು ಎಂದು ಆ್ಯಂಬುಲೆನ್ಸ್ ಹತ್ತಲು ಮುಂದಾಗಿದ್ದಾನೆ. ಗ್ರಾಮಸ್ಥರು ಆತನಿಗೆ ತಿಳಿ ಹೇಳಿ ಮನೆಗೆ ಕಳುಹಿಸಿದ್ದಾರೆ. ಬಳಿಕ ಬೈಕ್ ಏರಿ ಆ್ಯಂಬುಲೆನ್ಸ್ ಹಿಂಬಾಲಿಸಿಕೊಂಡು ಆಸ್ಪತ್ರೆವರೆಗೂ ಬಂದಿದ್ದಾನೆ. ಕೋವಿಡ್ ವಾರ್ಡ್‌ಗೂ ಪತ್ನಿಯೊಂದಿಗೆ ಹೋಗಲು ಯತ್ನಿಸಿದ್ದಾನೆ. ಆಗ ಬೆದರಿಸಿದ ಪೊಲೀಸರು ನಗರದ ಹೊರವಲಯದಲ್ಲಿರುವ ವಸತಿ ನಿಲಯದ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!