ಕೆರೆಯೊಂದು ಭರ್ತಿಯಾದ್ರೆ ಹತ್ತಾರು ಹಳ್ಳಿಗಳ ಜನರು ಸಮೃದ್ಧಿಯಾಗಿರ್ತಾರೆಂಬ ಮಾತಿದೆ. ಆದ್ರೆ ಚಿತ್ರದುರ್ಗದ ಈ ಕೆರೆ ಬರಗಾಲ ಬಂದ್ರೂ ಖಾಲಿ ಯಾಗಲ್ಲ. ಆದ್ರೆ ಈ ಕೆರೆಯ ನೀರು ಜನರ ಪಾಲಿಗೆ ವಿಷವಾಗಿ ಮಾರ್ಪಟ್ಟಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (26): ಕೆರೆಯೊಂದು ಭರ್ತಿಯಾದ್ರೆ ಹತ್ತಾರು ಹಳ್ಳಿಗಳ ಜನರು ಸಮೃದ್ಧಿಯಾಗಿರ್ತಾರೆಂಬ ಮಾತಿದೆ. ಆದ್ರೆ ಇಲ್ಲೊಂದು ಕೆರೆ ವರ್ಷವಿಡಿ ಭರ್ತಿಯಾಗಿದ್ದು, ಎಂತಹ ಬರಗಾಲ ಬಂದ್ರೂ ಖಾಲಿ ಯಾಗಲ್ಲ. ಆದ್ರೆ ಈ ಕೆರೆಯ ನೀರು ಜನರ ಪಾಲಿಗೆ ವಿಷವಾಗಿ ಮಾರ್ಪಟ್ಟಿದೆ.
undefined
ಕೆರೆಯ ತುಂಬಾ ಭರ್ತಿಯಾಗಿರೊ ಪ್ಲಾಸ್ಟಿಕ್ ಘನ ತ್ಯಾಜ್ಯ. ಕಸ ಕಡ್ಡಿಯಿಂದ ದುರ್ನಾಥ ಬೀರ್ತಿರೋ ಕೆರೆ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಮಲ್ಲಾಪುರ ಕೆರೆ. ಈ ಕೆರೆ ಸುಮಾರು 95 ಹೆಕ್ಟೇರ್ ವಿಸ್ತೀರ್ಣ ವನ್ನೊಳಗೊಂಡಿದೆ. ಈ ಕೆರೆಗೆ ಚಿತ್ರದುರ್ಗ ನಗರದ ಯೂಜಿಡಿ ಹಾಗು ಚರಂಡಿ ನೀರೆಲ್ಲಾ ಹರಿದು ಬರ್ತಿದೆ.
ಬೆಳೆಹಾನಿ ನೋಡುವಂತೆ ಮನವಿ, ಮಹಿಳೆಯ ಕಡೆಗೆ ತಿರುಗಿಯೂ ನೋಡದೆ ಹೋದ ಸಚಿವ
ಹೀಗಾಗಿ, ಸತತ 15 ವರ್ಷಗಳಿಂದ ಒಮ್ಮೆಯೂ ಕೆರೆಯ ನೀರು ಖಾಲಿಯಾಗಿಲ್ಲ. ಅಲ್ದೇ ವರ್ಷದ 365 ದಿನಗಳಲ್ಲೂ ಭರ್ತಿಯಾಗಿರುವ ಈ ಕೆರೆ ಸಣ್ಣ ಮಳೆ ಬಂದ್ರೂ ಕೋಡಿ ಬೀಳ್ತದೆ. ಆದ್ರೆ ಮಲ್ಲಾಪುರ ಕೆರೆಯ ನೀರು ಮಾತ್ರ ಯಾವುದಕ್ಕೂ ಪ್ರಯೋಜನವಿಲ್ಲ. ನಿರಂತರವಾಗಿ ಕಸಕಡ್ಡಿ, ಪ್ಲಾಸ್ಟಿಕ್ ರಾಶಿ ಜಲ ಮೂಲವನ್ನು ಸೇರ್ತಿದ್ದೂ, ಅಂತರ್ಜಲವನ್ನು ಸಹ ಮಲಿನ ಗೊಂಡಿದೆ. ಹೀಗಾಗಿ ಇಲ್ಲಿನ ಶಾಲೆಯ ವಿದ್ಯಾರ್ಥಿಗಳು ಹಾಗು ಸುತ್ತಮುತ್ತಲಿನ ಗ್ತಾಮಸ್ಥರಲ್ಲಿ ಸಾಂಕ್ರಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಈ ಬಗ್ಗೆ ನಗರಸಭೆ ಹಾಗು ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಅಂತ ಇಲ್ಲಿನ ರೈತರು ಹಿಡಿಶಾಪ ಹಾಕ್ತಿದ್ದಾರೆ.
ಇನ್ನು ಈ ಕೆರೆಗೆ ಹರಿದು ಬರುವ ಕೊಳಚೆ ನೀರನ್ನು ಸಂಸ್ಕರಿಸದೆ ಕೆರೆಗೆ ಸರಬರಾಜು ಮಾಡಿರುವ ಹಿನ್ನಲೆಯಲ್ಲಿ ಕೆರೆ ನೀರು ಸಂಪೂರ್ಣ ಮಲೀನವಾಗಿದೆ.ಅಲ್ದೇ ಈ ಕೆರೆಯಿಂದ ಹೊರ ಹರಿಯುವ ನೀರು ಹತ್ತಾರು ಕೆರೆಗಳನ್ನು ಮಲಿನಗೊಳಿಸಲಿದ್ದೂ, ಹಸಿರಾದ ವಿಷಯುಕ್ತ ನೀರಿನಿಂದ ಈ ಭಾಗದ ಜೀವಸಂಕುಲಕ್ಕೆ ಕಂಟಕ ಎನಿಸಿದೆ. ಹೀಗಾಗಿ ಮಲ್ಲಾಪುರ ಕೆರೆಯ ನೀರನ್ನು ಶುದ್ಧೀಕರಿಸಿ ಬೃಹತ್ ಕೆರೆಯನ್ನು ಸಂರಕ್ಷಿಸುವಂತೆ ನಿವೃತ್ತ ವಿಜ್ಞಾನಿ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಅಧಿಕಾರಿಗಳೇ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಕೇಳಿ, ಸರಕಾರದ ನೆರವು ತಲುಪಿಸಿ: ಸಚಿವ
ಒಟ್ಟಾರೆ ಕೋಟೆನಾಡಿನ ಮಲ್ಲಾಪುರ ಕೆರೆನೀರು ಜನರ ಪಾಲಿಗೆ ವಿಷವಾಗಿ ಪರಿಣಮಿಸಿದೆ. ನೀರು ಭರ್ತಿಯಾಗಿದ್ರು ಪ್ರಯೋಜನಕ್ಕೆ ಬಾರದಂತಾಗಿದೆ. ನೀರು ಮಲಿನಗೊಂಡು ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ಹೀಗಾಗಿ ಬರದನಾಡಿನ ಜಲಮೂಲವನ್ನು ಸ್ವಚ್ಛಗೊಳಿಸಿ,ಸೂಕ್ತ ಕಾಯಕಲ್ಪ ನೀಡುವ ಮೂಲಕ ಅಂತರ್ಜಲ ಮಲಿನಕ್ಕೆ ಸರ್ಕಾರ ಬ್ರೇಕ್ ಹಾಕಬೇಕಿದೆ.