ಸಾವಿನ ಹೆದ್ದಾರಿಯಾಗಿ ಬದಲಾಯ್ತು ಮಲೆ ಮಹದೇಶ್ವರ ರಸ್ತೆ: 6 ತಿಂಗಳಲ್ಲಿ 8 ಜೀವಬಲಿ

Published : Jun 07, 2025, 07:39 PM IST
Chamrajnagar

ಸಾರಾಂಶ

ಅತಿ ವೇಗ ತಿಥಿ ಬೇಗ ಅನ್ನೋ ಮಾತಿದೆ ಆ ಮಾತಿಗೆ ಪೂರಕ ಎಂಬಂತೆ ರಸ್ತೆ ನಿರ್ಮಾಣ ಆಗಿದ್ದೆ ತಡ, ಕೊಳ್ಳೇಗಾಲ ಟು ಮಲೆ ಮಹದೇಶ್ವರ ರಸ್ತೆಯಲ್ಲಿ ಕಳೆದ 6 ತಿಂಗಳಿನಿಂದ ಅಪಘಾತದ ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಸಾವಿನ ಹೆದ್ದಾರಿ ಎಂಬ ಕಳಂಕ ಪಡೆದುಕೊಂಡಿದೆ.

ವರದಿ: ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಜೂ.07): ಅತಿ ವೇಗ ತಿಥಿ ಬೇಗ ಅನ್ನೋ ಮಾತಿದೆ ಆ ಮಾತಿಗೆ ಪೂರಕ ಎಂಬಂತೆ ರಸ್ತೆ ನಿರ್ಮಾಣ ಆಗಿದ್ದೆ ತಡ, ಕೊಳ್ಳೇಗಾಲ ಟು ಮಲೆ ಮಹದೇಶ್ವರ ರಸ್ತೆಯಲ್ಲಿ ಕಳೆದ 6 ತಿಂಗಳಿನಿಂದ ಅಪಘಾತದ ಪ್ರಕರಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ಸಾವಿನ ಹೆದ್ದಾರಿ ಎಂಬ ಕಳಂಕ ಪಡೆದುಕೊಂಡಿದೆ. ಸ್ಪೀಡ್ ತ್ರಿಲ್ಸ್ ಬಟ್ ಇಟ್ ಕಿಲ್ಸ್ ಎಂಬ ಮಾತಿಗೆ ಈ ಹೆದ್ದಾರಿ ಸಾಕ್ಷಿಯಾಗಿದೆ.ಅಂದ ಹಾಗೇ ನಾವು ಹೇಳ್ತಾಯಿರೋದು ಮತ್ಯಾವ ರಸ್ತೆಯ ಬಗ್ಗೆ ಅಲ್ಲ ಕಳೆದ 8 ತಿಂಗಳ ಹಿಂದೆಯಷ್ಟೆ ಸಿದ್ದವಾದ ಕೊಳ್ಳೇಗಾಲ ಟು ಮಲೆ ಮಹದೇಶ್ವರ ರಸ್ತೆ. ಈ ಹಿಂದೆ ರಸ್ತೆ ಹದಗೆಟ್ಟಿತ್ತು ಡಾಂಬಾರಿಗಿಂತ ಬರಿ ಹಳ್ಳಕೊಳ್ಳಗಳೆ ಇತ್ತು.

ಆಪಘಾತ ನಡೆಯುತ್ತಿತ್ತು ಆದ್ರೆ ಅದ್ಯಾವಾಗ ರಸ್ತೆ ಸಂಪೂರ್ಣವಾಗಿ ರೆಡಿಯಾಯ್ತೊ ನೋಡಿ ದಿಢಿರನೇ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ.2023 ರಲ್ಲಿ 7 ಮಂದಿ ಮೃತ ಪಟ್ಟು 36 ಮಂದಿಗೆ ಗಂಭೀರಗಾಯವಾಗಿತ್ತು 15 ಮಂದಿ ಬದುಕುಳಿದಿದ್ರು.. ಅದೇ ರೀತಿ 2024 ರಲ್ಲಿ 7 ಮಂದಿ ಮೃತ ಪಟ್ಟು 19 ಪ್ರಕರಣ ದಾಖಲಾಗಿದ್ದು 27 ಮಂದಿ ಗಾಯಗೊಂಡಿದ್ರು.ಆದ್ರೆ 2025ರಲ್ಲಿ ವರ್ಷ ಆರಂಭವಾಗಿ ಇನ್ನು 6 ತಿಂಗಳು ಕಳೆಯುವಷ್ಟರಲ್ಲಿ ಬರೋಬ್ಬರಿ 8 ಮಂದಿ ಮೃತ ಪಟ್ಟು 12 ಪ್ರಕರಣ ದಾಖಲಾಗಿದ್ದು 29 ಮಂದಿಗೆ ಗಂಭೀರ ಗಾಯವಾಗಿದೆ.

ಯಾವಾಗ ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟ ತಲಪುವ ಮಾರ್ಗದಲ್ಲಿ ಅಪಘಾತ ಸಂಖ್ಯೆ ವಿಪರೀತ ಪ್ರಮಾಣದಲ್ಲಿ ಹೆಚ್ಚಾಯ್ತ ಹೋಯ್ತೊ ಇದಕ್ಕೆ ಕಾರಣವನ್ನ ಹುಡುಕಿದ ಖಾಕಿಗೆ ಸತ್ಯಾಂಶ ಬೆಳಕಿಗೆ ಬಂದಿದೆ ಹೊಸ ರಸ್ತೆ ನಿರ್ಮಾಣ ಆಗಿದ್ದೆ ತಡ ವಾಹನ ಸವಾರರು ಓವರ್ ಸ್ಪೀಡ್ ನಲ್ಲಿ ವಾಹನ ಚಲಾಯಿಸಿ ಆ ವಾಹನ ನಿಯಂತ್ರಣ ತಪ್ಪಿಯೇ ಅಪಘಾತವಾಗಿದೆ. ಇದರ ಜೊತೆಗೆ ಬೇಜವಬ್ದಾರಿ ಚಾಲನೆಯು ಸಹ ಈ ಸಾವಿಗೆ ಕಾರಣವೆಂದು ತಿಳಿದು ಬಂದಿದೆ. ಈಗಾಗ್ಲೆ ಕೆಲ ಬ್ಲಾಕ್ ಸ್ಪಾಟ್ ಗಳನ್ನ ಪತ್ತೆ ಹಚ್ಚಿರುವ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುವ ನಾಮಫಲಕಗಳನ್ನ ಹಾಕಿದೆ ಇದರ ಜೊತೆ ಜೊತೆಗೆ ಸ್ಪೀಡ್ ಬ್ರೇಕರ್ಸ್ ಹಾಗೂ ಹಂಪ್ಸ್ ನ ಹಾಕುವ ಮೂಲಕ ವೇಗ ನಿಯಂತ್ರಣಕ್ಕೆ ಮುಂದಾಗಿದೆ.

ಇನ್ಮುಂದೆ ಸ್ಪೀಡ್ ಡಿಟೆಕ್ಟರ್ ವಾಹನಗಳನ್ನ ಹೆದ್ದಾರಿಯಲ್ಲಿ ನಿಲ್ಲಿಸಿ ಓವರ್ ಸ್ಪೀಡ್ ಆಗಿ ಚಲಾಯಿಸುವ ವಾಹನ ಸವಾರರಿಗೆ ದಂಡಾಸ್ತ್ರ ಪ್ರಯೋಗಿಸಲು ಮುಂದಾಗಿದೆ.ವಾರಕ್ಕೊಮ್ಮೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಟ್ರಾಫಿಕ್ ಅವೈರ್ನೆಸ್ ಕಾರ್ಯಕ್ರಮವನ್ನ ಮಾಡಲು ಮುಂದಾಗಿದೆ.ಅದೇನೆ ಹೇಳಿ ಮಲೆ ಮಹದೇಶ್ವರ ರಸ್ತೆ ಸಾವಿನ ಹೆದ್ದಾರಿಯಾಗಿ ಬದಲಾಗಿದ್ದು ನಿಜಕ್ಕು ದುರಂತವೇ ಸರಿ.. ಇನ್ಮುಂದೆಯಾದ್ರು ವಾಹನ ಚಾಲಕರು ಜವಬ್ದಾರಿಯುತವಾಗಿ ವಾಹನ ಚಾಲನೆ ಮಾಡ್ಬೇಕಿದೆ.

PREV
Read more Articles on
click me!

Recommended Stories

ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್
ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ! ಏನಿದು ಪ್ರಕರಣ?