
ಮಂಗಳೂರು (ಫೆ,6): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಾಲಾಡಿಯ ಮನೆಯೊಂದರಲ್ಲಿ ಪ್ರೇತಾತ್ಮದ ಕಾಟಕ್ಕೆ ಇಡೀ ಕುಟುಂಬ ಬೆಚ್ಚಿಬಿದ್ದಿದೆ. ಪೇತಾತ್ಮದ ಕಾಟದ ಬಗ್ಗೆ ಅವರು ನೀಡಿದ ಫೋಟೋ ಕೂಡ ಅಚ್ಚರಿ ಸೃಷ್ಟಿಸಿದೆ. ಬೆಡ್ ರೂಂನಲ್ಲಿ ಕಂಡ ವಿಚಿತ್ರ ರೂಪವೊಂದರ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಮನೆಯ ಬಾಲಕಿ ಕ್ಲಿಕ್ ಮಾಡಿದ್ದ ಫೋಟೋದಲ್ಲಿ ಪ್ರೇತಾತ್ಮ ಎನ್ನುವ ರೂಪ ಸೆರೆಯಾಗಿದೆ. ಫೋಟೋದ ಜಾಡು ಹಿಡಿದಾಗ ಬೆಳ್ತಂಗಡಿ ಮನೆಯ ಅಗೋಚರ ಅನುಭವವಾಗಿದೆ. ಈ ವಿಚಾರವೀಗ ದ.ಕ ಜಿಲ್ಲೆಯಾದ್ಯಂರ ಭಾರೀ ಅಚ್ಚರಿಗೆ ಕಾರಣವಾಗಿದೆ
ಇನ್ನು, ರಾತ್ರಿಯ ವೇಳೆ ಮನೆಯಲ್ಲಿ ಅಮಾನುಷ ಶಕ್ತಿಯ ಸಂಚಾರಕ್ಕೆ ಇಡೀ ಕುಟುಂಬವೇ ಆಘಾತದಲ್ಲಿದೆ. ಇದು ಮನೆಯವರಿಗೆ ಮಾತ್ರವಲ್ಲ ಇಡೀ ಮಾಲಾಡಿ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ. ಮಾಲಾಡಿಯ ಉಮೇಶ್ ಶೆಟ್ಟಿ ಕುಟುಂಬವನ್ನು ದುಷ್ಟಶಕ್ತಿ ಕಾಡ್ತಿದ್ಯಾ ಎನ್ನುವ ಚರ್ಚೆ ಶುರುವಾಗಿದೆ. ಮನೆಯಲ್ಲಿ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಜೊತೆ ಉಮೇಶ್ ಶೆಟ್ಟಿ ವಾಸವಾಗಿದ್ದು, ಕಳೆದ ಮೂರು ತಿಂಗಳಿನಿಂದ ದುಷ್ಟಶಕ್ತಿಯ ಕಾಟಕ್ಕೆ ತತ್ತರಿಸಿದ್ದಾರೆ. ಪ್ರತಿ ದಿನ ಸಂಜೆ ಏಳು ಗಂಟೆ ಬಳಿಕ ನಿತ್ಯ ಮನೆಯಲ್ಲಿ ದುಷ್ಟ ಶಕ್ತಿ ತೊಂದರೆ ಎದುರಾಗುತ್ತಿದೆ. ಮನೆಯಲ್ಲಿ ಪಾತ್ರೆಗಳನ್ನು ಎಸೆಯುವ ಅತಿಮಾನುಷ ಶಕ್ತಿಯಿಂದ ಮನೆಯಲ್ಲಿದ್ದ ಬಟ್ಟೆಗಳಿಗೂ ರಾತ್ರಿ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಮಲಗಿದ್ದಾf ಉಮೇಶ್ ಅವರ ಪತ್ನಿ, ಮಕ್ಕಳ ಕತ್ತು ಹಿಸುಕಿದ ಅನುಭವ ಕೂಡ ಆಗುತ್ತಿದೆ.
ಪ್ರೇತಾತ್ಮದ ಫೋಟೋ ಸೆರೆ ಹಿಡಿದ ಬಾಲಕಿ ರಕ್ಷಿತಾ ಮಾತನಾಡಿದ್ದು, ‘ಮೊಬೈಲ್ ಇಟ್ಟುಕೊಂಡು ಓದುತ್ತಿದ್ದ ವೇಳೆ ಸದ್ದು ಕೇಳಿ ಫೋಟೋ ಕ್ಲಿಕ್ಕಿಸಿದೆ. ವಿಚಿತ್ರ ಸದ್ದು ಕೇಳಿದಾಗ ಕಂಡ ಬಿಳಿ ಮುಖದ ರೂಪ ನೋಡಿ ಬೆಚ್ಚಿಬಿದ್ದೆ ಎಂದಿದ್ದಾರೆ. ಉದ್ದ ಕೂದಲಿನ ಬಿಳಿ ಮುಖದ ರೂಪ ಕಾಣಿಸಿತು. ಆಗ ನನ್ನ ಬಳಿ ಇದ್ದ ಮೊಬೈಲ್ ತೆಗೆದು ತಕ್ಷಣ ಫೋಟೋ ಕ್ಲಿಕ್ ಮಾಡಿದೆ. ಈ ಹಿಂದೆಯೂ ಓಡಾಟ ನಮ್ಮ ಗಮನಕ್ಕೆ ಬಂದಿದೆ ಎಂದಿದ್ದಾರೆ. ಪಾತ್ರೆ ಎಸೆಯೋದು, ನಮ್ಮ ಸುತ್ತಲು ಯಾರೋ ಓಡಾಡಿದಂತೆ ಗೆಜ್ಜೆ ಸದ್ದು ಕೇಳಿಸುತ್ತೆ. ರಾತ್ರಿ ಮಲಗಿದ್ದರೆ ಯಾರೋ ಕತ್ತು ಹಿಡಿದು ಅಮುಕಿದ ಅನುಭವ ಆಗುತ್ತದೆ ಎಂದಿದ್ದಾರೆ.
'ಯಾರೋ ವಾಹನದಲ್ಲಿ ಇಟ್ಟ ಪ್ರಸಾದ ಮನೆಗೆ ಒಯ್ದ ಮೇಲೆ ಹೀಗಾಗುತ್ತಿದೆ. ಮಂತ್ರವಾದಿಗಳು, ಜ್ಯೋತಿಷಿಗಳು ದುಷ್ಟ ಶಕ್ತಿ ಇದೆ ಎಂದಿದ್ದಾರೆ. 18 ವರ್ಷಗಳಿಂದ ವಾಸವಿದ್ದರೂ 3 ತಿಂಗಳಿನಿಂದ ಈ ಸಮಸ್ಯೆ ಆಗುತ್ತಿದೆ ಎಂದು ಮನೆ ಮಾಲೀಕ ಉಮೇಶ್ ಶೆಟ್ಟಿ ಹೇಳಿದ್ದಾರೆ.
ಇನ್ನು ಈ ಮನೆಯಲ್ಲಿರೋದು ದೈವ ಶಕ್ತಿಯೋ? ಪ್ರೇತಾತ್ಮವೋ, ಕಾಲ್ಪನಿಕವೋ? ಎನ್ನುವ ಹತ್ತು ಹಲವು ಪ್ರಶ್ನೆಗಳಿಗೆ ಮಾಲಾಡಿಯ ಮನೆ ರಹಸ್ಯ ಕಾರಣವಾಗಿದೆ. ಉಮೇಶ್ ಪತ್ನಿಯ ತಾಯಿ ಮನೆಯಲ್ಲಿ ಏಳು ವರ್ಷಗಳಿಂದ ದೈವಾರಾಧನೆ ನಿಂತಿದೆ. ಅಜ್ಜಿ ಮನೆಯ ಮಂತ್ರ ದೇವತೆಯ ಆರಾಧನೆಗೆ ನಾವೆಲ್ಲಾ ಹೋಗುತ್ತಿದ್ದೆವು. ಆದರೆ ಕಳೆದ ಏಳು ವರ್ಷಗಳಿಂದ ಅ ಆರಾಧನೆ ನಿಂತು ಹೋಗಿದೆ ಎಂದು ಮನೆ ಮಗಳು ನಿಖಿತಾ ಹೇಳಿದ್ದಾರೆ.
ಬೆಳ್ತಂಗಡಿ: ಮೃತ್ಯುಂಜಯ ನದಿಯಲ್ಲಿ ಗೋಮಾಂಸ, ಹಿಂದೂ ಸಂಘಟನೆಗಳ ಅಕ್ರೋಶ
ಮಂತ್ರದೇವತೆ ದೈವವೇ ಇದು ಅಂತ ಕೆಲ ಜ್ಯೋತಿಷಿಗಳು ಹೇಳಿದ್ದಾರೆ. ದೈವ ಮನೆಯ ಹೊರಗೆ ಇದೆ, ಮನೆಯೊಳಗೆ ದುಷ್ಟ ಶಕ್ತಿ ಇದೆ ಅಂದಿದ್ದಾರೆ. ದುಷ್ಟ ಶಕ್ತಿ ಹೊರಗೆ ಹಾಕದೇ ಇದ್ದರೆ ಸಮಸ್ಯೆ ಇದೆ ಅಂದಿದ್ದಾರೆ ಎಂದು ನಿಖಿತಾ ತಿಳಿಸಿದ್ದಾರೆ.
ಇನ್ನು ಮಾಲಾಡಿ ಮನೆ ಬೆಳ್ತಂಗಡಿ ತಾಲೂಕಿನಲ್ಲಿ ಕುತೂಹಲದ ಕೇಂದ್ರವಾಗಿದೆ. ರಾತ್ರಿಯಾದ್ರೆ ಮಾಲಾಡಿಯ ಮನೆಯ ಸುತ್ತ ನೂರಾರು ಜನರ ಜಮಾವಣೆ ಆಗುತ್ತಿದೆ. ಮನೆಯಲ್ಲಿ ಪ್ರೇತ, ದೆವ್ವ ಇದ್ಯಾ ಎಂದು ಪರೀಕ್ಷಿಸಲು ಆಗಮಿಸುತ್ತಿದ್ದಾರೆ. ಮಾಲಾಡಿ ಗ್ರಾಮದ ಹಲವರಿಗೆ ಅಮಾನುಷ ಶಕ್ತಿಯ ಅನುಭವವಾಗಿದೆ. ನಿತ್ಯ ಮನೆಯಲ್ಲಿ ಪಾತ್ರೆ ಎಸೆಯೋ ಸದ್ದು ನಮಗೆ ಕೇಳಿಸುತ್ತೆ. ನಾವು ಕಾದು ಕೂತಗಲೂ ಪಾತ್ರೆ ಎಸೆಯೋ ಸದ್ದು ಗಮನಕ್ಕೆ ಬಂದಿದೆ. ಬಟ್ಟೆ ಸುಟ್ಟು ಹಾಕಿರೋದು ಹಾಗೂ ಮಕ್ಕಳ ಕತ್ತು ಹಿಸುಕೋದು ಮಾಡುತ್ತಿದೆ. ಸುಮಾರು ವರ್ಷಗಳ ಹಿಂದೆ ಈ ಭಾಗದಲ್ಲಿ ಇಂಥ ದುಷ್ಟ ಶಕ್ತಿಗಳ ಕಾಟ ಇತ್ತು ಎಂದು ಸ್ಥಳೀಯರು ಕೂಡ ತಿಳಿಸಿದ್ದಾರೆ.
Mangaluru: ಲವ್, ಸೆಕ್ಸ್, ದೋಖಾ ಕೇಸ್; ಅಪ್ರಾಪ್ತ ಯುವತಿ ಸಾವು