'ಮೋದಿ ಆಡಳಿತದಿಂದ ಜನತೆಗೆ ಬಿಜೆಪಿ ಮೇಲೆ ವಿಶ್ವಾಸ'

By Kannadaprabha News  |  First Published Mar 26, 2021, 2:01 PM IST

ಮೋದಿ ಸರ್ಕಾರವು ಕಪ್ಪು ಚುಕ್ಕೆ ಇಲ್ಲದೆ ಸರ್ಕಾರ ಎನ್ನವ ಹೆಗ್ಗಳಿಕೆ| ಸುರೇಶ ಅಂಗಡಿ ನಿಧನದಿಂದ ಬೆಳಗಾವಿ ಲೋಕಸಭೆ ಚುನಾವಣೆ ಎದುರಿಸಬೇಕಾಗಿದೆ| ಸುರೇಶ ಅಂಗಡಿ  ರೈಲ್ವೆ ಖಾತೆಯಿಂದ ಉತ್ತರ ಕರ್ನಾಟಕ್ಕೆ ಮಾಡಿರುವ ಕೊಡುಗೆಯು ಅಪೂರ್ವವಾಗಿದೆ. ಚುನಾವಣೆಯ ಗೆಲುವು ಅವರಿಗೆ ನೀಡುವ ಗೌರವ: ತೆಂಗಿನಕಾಯಿ| 


ಮೂಡಲಗಿ(ಮಾ.26): ಅರಭಾವಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಮತ್ತು ಬೂತ್‌ ಅಧ್ಯಕ್ಷರ ಸಮಾವೇಶ ಮೂಡಲಗಿ ಪಟ್ಟಣದ ಬಿಡಿಸಿಸಿ ಬ್ಯಾಂಕಿನ ಸಭಾ ಭವನದಲ್ಲಿ ಜರುಗಿತು.

ಸಮಾವೇಶ ಉದ್ಘಾಟಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿ, ಪ್ರಧಾನಿ ಮೋದಿ ಅವರ ಪಾರದರ್ಶಕ ಆಡಳಿತದಿಂದ ದೇಶದ ಜನರಲ್ಲಿ ಬಿಜೆಪಿ ಮೇಲೆ ವಿಶ್ವಾಸ ಇಮ್ಮಡಿಸಿದೆ. ಮೋದಿ ಸರ್ಕಾರವು ಕಪ್ಪು ಚುಕ್ಕೆ ಇಲ್ಲದೆ ಸರ್ಕಾರ ಎನ್ನವ ಹೆಗ್ಗಳಿಕೆ ಹೊಂದಿದೆ. ಸುರೇಶ ಅಂಗಡಿ ಅವರ ನಿಧನದಿಂದ ಬೆಳಗಾವಿ ಲೋಕಸಭೆ ಚುನಾವಣೆಯನ್ನು ಎದುರಿಸಬೇಕಾಗಿದೆ. ಸುರೇಶ ಅಂಗಡಿ ಅವರು ರೈಲ್ವೆ ಖಾತೆಯಿಂದ ಉತ್ತರ ಕರ್ನಾಟಕ್ಕೆ ಮಾಡಿರುವ ಕೊಡುಗೆಯು ಅಪೂರ್ವವಾಗಿದೆ. ಚುನಾವಣೆಯ ಗೆಲುವು ಅವರಿಗೆ ನೀಡುವ ಗೌರವವಾಗಲಿದೆ ಎಂದರು.

Tap to resize

Latest Videos

ಬೆಳಗಾವಿ ಉಪಕದನ: ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಘೋಷಿಸಿದ ಎಐಸಿಸಿ

ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಚುನಾವಣೆಯ ಅಭ್ಯರ್ಥಿ ನಾನು ಆಕಾಂಕ್ಷಿ ಆಗಿದ್ದರೂ ನನಗೆ ಅವಕಾಶ ದೊರೆಯದಿದ್ದರೂ ಯಾರೇ ನಿಂತರೂ ಪಕ್ಷದ ಅಭ್ಯರ್ಥಿಯ ಗೆಲ್ಲುವಿಗೆ ಶ್ರಮಿಸುತ್ತೆನೆ ಎಂದರು.
ಅರಭಾವಿ ಬೆಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಳಗಾವಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಬಾರಿ ಶಶಿಕಾಂತ ನಾಯಿಕ, ಬಸವರಾಜ ಯಕ್ಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮಹೇಶ ಮೋಹಿತೆ, ಎಸ್‌.ಎಸ್‌.ಸಿದ್ಧನಗೌಡ, ಬಸವಂತ ಕಮತಿ, ಪ್ರಕಾಶ ಮಾದರ ಮತ್ತಿತರು ಇದ್ದರು.

ಅರಭಾವಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಕ್ತಿಕೇಂದ್ರ ಪ್ರಮುಖರ ಮತ್ತು ಬೂತ್‌ ಅಧ್ಯಕ್ಷರ ಸಮಾವೇಶವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಉದ್ಘಾಟಿಸಿದರು.
 

click me!