ತಮಿಳುನಾಡಿನಿಂದ ಗೋವಾಕ್ಕೆ ಹೋಗುತ್ತಿದ್ದ ಕಾರು| ಹಾವೇರಿ ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ನಡೆದ ಘಟನೆ| ಸಂಪೂರ್ಣವಾಗಿ ಸುಟ್ಟು ಭಸ್ಮವಾದ ಕಾರು| ಈ ಸಂಬಂಧ ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು|
ಹಾವೇರಿ(ಮಾ.26): ತಾಲೂಕಿನ ಕುಣಿಮೆಳ್ಳಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಸ್ಪಾರ್ಕ್ ಆದ ಪರಿಣಾಮ ಇನ್ನೋವಾ ಕಾರೊಂದು ರಸ್ತೆ ಮಧ್ಯೆಯೇ ಬೆಂಕಿ ಹೊತ್ತಿ ಉರಿದು ಭಸ್ಮವಾಗಿರುವ ಘಟನೆ ಗುರುವಾರ ಬೆಳಗಿನ ಜಾವದಲ್ಲಿ ಸಂಭವಿಸಿದೆ.
ತಮಿಳುನಾಡಿನಿಂದ ಗೋವಾಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ತಮಿಳುನಾಡು ಮೂಲಕ ಹಾರ್ದಿಕ್ ಎನ್.ಜಿ., ಶರದ್ ಬಾಲಸುಬ್ರಮ್ಯಣ್ಯಂ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಹಾವೇರಿ: ಚಿರತೆ ಕೊಂದು ಪ್ರಾಣ ರಕ್ಷಿಸಿಕೊಂಡ ರೈತರು..!
ವರದಾ ನದಿ ಸೇತುವೆ ಬಳಿ ಡಿವೈಡರ್‌ಗೆ ಕಾರು ತಾಗಿದ ಪರಿಣಾಮ ಕಿಡಿ ಹಾರಿದೆ. ಕೆಲ ಹೊತ್ತಿನಲ್ಲಿ ಬೆಂಕಿ ಕಾರಿಗೆ ಆವರಿಸಿಕೊಂಡು ಸಂಪೂರ್ಣ ಕಾರು ಸುಟ್ಟು ಭಸ್ಮವಾಗಿದೆ. ಈ ಕುರಿತು ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.