ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ; ಕಿಡಗೇಡಿಗಳ ಕೃತ್ಯಕ್ಕೆ ಆಕ್ರೋಶ

Published : Dec 28, 2025, 01:54 PM IST
Belagavi Gandhi Santa Claus Hat

ಸಾರಾಂಶ

ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ ಮಾಡಿದದ ಘಟನೆ ನಡೆದಿದೆ. ಈ ಕುರಿತ ಫೋಟೋ  ವೈರಲ್ ಆದ ಕೂಡಲೇ ಎಚ್ಚೆತ್ತ ಪೊಲೀಸರಿಂದ ಟೋಪಿ ತೆರವು. ಪೂರ್ಣ ವರದಿಗಾಗಿ ಕ್ಲಿಕ್ ಮಾಡಿ.

ಬೆಳಗಾವಿ (ಡಿ.28): ಕುಂದಾನಗರಿ ಬೆಳಗಾವಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಕಿಡಗೇಡಿಗಳು ಸಾಂತಾ ಕ್ಲಾಸ್ ಟೋಪಿ ಧರಿಸುವ ಮೂಲಕ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ವಿವರ

ಬೆಳಗಾವಿಯ ಹಿಂಡಲಗಾ ರಸ್ತೆಯ ಕ್ಯಾಂಪ್ ಪ್ರದೇಶದ ಬಳಿ ಇರುವ ಮಹಾತ್ಮ ಗಾಂಧಿ ಪ್ರತಿಮೆಗೆ ಈ ರೀತಿ ಅಪಮಾನ ಎಸಗಲಾಗಿದೆ. ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಕೆಲವು ಕಿಡಗೇಡಿಗಳು ಗಾಂಧೀಜಿಯವರ ಪ್ರತಿಮೆಯ ತಲೆ ಹಾಗೂ ಕೈ ಮೇಲೆ ಸಾಂತಾ ಕ್ಲಾಸ್‌ನ ಕೆಂಪು ಟೋಪಿಯನ್ನು ಹಾಕಿದ್ದಾರೆ. ರಾಷ್ಟ್ರಪಿತನಿಗೆ ಈ ರೀತಿ ಅವಮಾನ ಮಾಡಿರುವುದು ಸ್ಥಳೀಯರಲ್ಲಿ ಮತ್ತು ಗಾಂಧಿವಾದಿಗಳಲ್ಲಿ ಅಸಮಾಧಾನ ಮೂಡಿಸಿದೆ. ಈ ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕ್ಯಾಂಪ್ ಠಾಣೆಯ ಪೊಲೀಸರು ಪ್ರತಿಮೆಯ ಮೇಲಿದ್ದ ಟೋಪಿಯನ್ನು ತೆರವುಗೊಳಿಸಿದ್ದಾರೆ. ಈ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು, ಪ್ರತಿಮೆಗೆ ಅಪಮಾನ ಮಾಡಿದ ಕಿಡಗೇಡಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

ವೈರಲ್ ಆದ ಫೋಟೋ

ಪ್ರತಿಮೆಗೆ ಟೋಪಿ ಧರಿಸಿರುವ ಫೋಟೋಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಇಂತಹ ಕೃತ್ಯಗಳನ್ನು ಎಸಗಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ಪಂಜದಿಂದ ಒಂದು ಹೊಡೆದ ಹುಲಿ, ಸಿಬ್ಬಂದಿ ಸಣ್ಣಹೈದ ಬಲಿ; ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಭರವಸೆ ಕೊಟ್ಟ ಇಲಾಖೆ!
ಬಿಟ್ಟೋದ್ರೆ ಕೈ ಕೊಯ್ಕೊಂಡು ಸಾಯ್ತೀನಿ ಅಂತಿದ್ದ ಪ್ರೇಮಿಯ ಕರಾಳ ಮುಖ ಬಯಲು; ಸೈಕೋ ಅರೆಸ್ಟ್