ನರಗುಂದ: ಮಹದಾಯಿಗಾಗಿ ಗೋವಾ ವಿರೋಧ ಖಂಡನಾರ್ಹ

Suvarna News   | Asianet News
Published : Dec 29, 2019, 07:58 AM ISTUpdated : Dec 29, 2019, 08:00 AM IST
ನರಗುಂದ: ಮಹದಾಯಿಗಾಗಿ ಗೋವಾ ವಿರೋಧ ಖಂಡನಾರ್ಹ

ಸಾರಾಂಶ

ನ್ಯಾಯಾಧಿಕರಣವು ಈಗಾಗಲೇ ನಮಗೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ| ಕೇಂದ್ರ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ಬೇಗ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲು ಮುಂದಾಗಬೇಕು| ಒಂದು ವೇಳೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲು ವಿಳಂಬ ಮಾಡಿದರೆ ಈ ಭಾಗದಲ್ಲಿ ಮತ್ತೊಂದು ರೈತ ಬಂಡಾಯ ಮಾಡುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ ಹೋರಾಟಗಾರರು|

ನರಗುಂದ(ಡಿ.29): ಕರ್ನಾಟಕ ರಾಜ್ಯದಲ್ಲಿ ಹರಿಯುವ ನದಿ ಹಾಗೂ ಹಳ್ಳದ ನೀರು ನಾವು ಬಳಕೆ ಮಾಡಿಕೊಳ್ಳಬೇಕೆಂದರೆ ಗೋವಾ ರಾಜ್ಯದವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನಾರ್ಹ ಎಂದು ರೈತ ಸೇನಾ ಸಂಘಟನೆ ಸದಸ್ಯ ಹನಮಂತ ಸರನಾಯ್ಕರ ಹೇಳಿದ್ದಾರೆ.

1626ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದ ಉತ್ತರ ಕರ್ನಾಟಕ ಭಾಗದ ಬೆಳಗಾವಿ ಜಿಲ್ಲೆ ಖಾನಾಪೂರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳು ಜನ್ಮ ತಾಳಿ ಪ್ರತಿ ವರ್ಷ 55 ಟಿಎಂಸಿ ನೀರು ವ್ಯರ್ಥವಾಗಿ ಹರಿದು ಗೋವಾ ಸಮುದ್ರ ಸೇರುತ್ತಿರುವು ನೀರನಲ್ಲಿ ಮಹದಾಯಿ ಹೋರಾಟಗಾರರು ಕೇವಲ 36.5ಟಿಎಂಸಿ ನೀರು ಮಲಪ್ರಭಾ ಜಲಾಶಯಕ್ಕೆ ಜೋಡಣೆ ಮಾಡಿದರೆ 4 ಜಿಲ್ಲೆ 11 ತಾಲೂಕಿನ ರೈತರ ಕೃಷಿಗೆ ಮತ್ತು ಜನತೆಗೆ ಕುಡಿಯಲು ನೀರು ಸಹಕಾರಿಯಾಗಲಿದೆ ಎಂದು ಸತತವಾಗಿ ಬಂಡಾಯ ನೆಲದಲ್ಲಿ ಮಹದಾಯಿ ಹೋರಾಟಗಾರರು ಹೋರಾಟ ಮಾಡಿದ್ದರಿಂದ ನ್ಯಾಯಾಧಿಕರಣದ ನ್ಯಾಯಾಧೀಶರು ಕೂಡ ಈಗಾಗಲೇ 13.42ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದರೂ ಸಹ ಗೋವಾ ರಾಜ್ಯದ ಮುಖ್ಯಮಂತ್ರಿಗಳು ಉದ್ದೇಶ ಪೂರ್ವಕವಾಗಿ ಕರ್ನಾಟಕ ರಾಜ್ಯಕ್ಕೆ ನೀರು ಕೊಡಬಾರದೆನ್ನುವ ಕೆಟ್ಟ ಉದ್ದೇಶದಿಂದ ಪದೇ ಪದೇ ಕ್ಯಾತೆ ತಗಿಯುತ್ತಿರವದನ್ನು ಮಹದಾಯಿ ಹೋರಾಟಗಾರರು ಸಹಿಸುವುದಿಲ್ಲ. 

ಮಹದಾಯಿ ಹೋರಾಟಗಾರರು ಕಾನೂನು ವ್ಯವಸ್ಥೆಗೆ ಗೌರವ ಕೊಟ್ಟು ಇಲ್ಲಿಯ ವರೆಗೆ ಸುಮ್ಮನಿದ್ದೇನೆ. ಮುಂದಿನ ದಿನಗಳಲ್ಲಿ ಗೋವಾ ರಾಜ್ಯದವರು ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೆ ವಿರೋಧ ಮಾಡಿದರೆ ಕರ್ನಾಟಕ ರಾಜ್ಯದಿಂದ ಸಾವಿರಾರು ಮಹದಾಯಿ ಹೋರಾಟಗಾರರು ಗೋವಾ ರಾಜ್ಯಕ್ಕೆ ಹೋಗಿ ಅಲ್ಲಿಯ ವಿಧಾನ ಸೌಧದ ಮುಂದೆ ನಾವು ಹೋರಾಟ ಮಾಡಲು ಸಿದ್ದರಿದ್ದವೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯಾಧಿಕರಣವು ಈಗಾಗಲೇ ನಮಗೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಆದ್ದರಿಂದ ಕೇಂದ್ರ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ಬೇಗ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲು ಮುಂದಾಗಬೇಕು. ಒಂದು ವೇಳೆ ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಲು ವಿಳಂಬ ಮಾಡಿದರೆ ಈ ಭಾಗದಲ್ಲಿ ಮತ್ತೊಂದು ರೈತ ಬಂಡಾಯ ಮಾಡುವ ಮೂಲಕ ಸರ್ಕಾರಕ್ಕೆ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದರು.

ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಮಲ್ಲೇಶಪ್ಪ ಅಣ್ಣಿಗೇರಿ, ಎ.ಪಿ. ಪಾಟೀಲ, ಅಡಿಯಪ್ಪ ಕೋರಿ, ಜಗನ್ನಾಥ ಮುಧೋಳೆ, ಸುಭಾಸ ಗಿರಿಯಣ್ಣವರ, ಸೋಮಲಿಂಗಪ್ಪ ಆಯಿಟ್ಟಿ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ವಾಸು ಚವ್ಹಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಹನಮಂತ ಸರನಾಯ್ಕರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ನಾಗರತ್ನ ಸವಳಬಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಸೇರಿದಂತೆ ಮುಂತಾದವರು ಇದ್ದರು.
 

PREV
click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ