3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಡಿಕೆಶಿ ವಾಚ್!

By Suvarna News  |  First Published Dec 29, 2019, 7:38 AM IST

ವಿದ್ಯಾರ್ಥಿಗಳಿಗೆ ಡಿಕೆಶಿ ವಾಚ್‌| 3000 ಮಂದಿಗೆ ಕೈಗಡಿಯಾರ ಗಿಫ್ಟ್‌| ಮಾಜಿ ಸಚಿವರ ನಡೆ ಬಗ್ಗೆ ಟೀಕೆ| 


ರಾಮ​ನ​ಗರ[ಡಿ.29]: ಸರ್ಕಾರದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಜಿಲ್ಲೆಯ 3 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ತಮ್ಮ ಭಾವಚಿತ್ರವುಳ್ಳ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದು, ಮಾಜಿ ಸಚಿವರ ಈ ನಡೆಗೆ ಟೀಕೆಗಳು ವ್ಯಕ್ತವಾಗಿವೆ.

ಜಿಲ್ಲಾ ಪಂಚಾಯತ್‌, ಗ್ರಾಮ ಪಂಚಾಯತ್‌, ತಾಲೂಕು ಪಂಚಾಯತ್‌, ಪುರ​ಸಭೆ, ನಗ​ರ​ಸಭೆ ಹಾಗೂ ಸಾರ್ವ​ಜ​ನಿಕ ಶಿಕ್ಷಣ ಇಲಾಖೆ ಸಹ​ಯೋ​ಗ​ದಲ್ಲಿ ಕನ​ಕ​ಪುರ ತಾಲೂ​ಕಿನ ಜಕ್ಕ​ಸಂದ್ರದ ಜೈನ್‌ ಇಂಟರ್‌ ನ್ಯಾಷ​ನಲ್‌ ಸ್ಕೂಲ್‌ನಲ್ಲಿ ‘ಶೈಕ್ಷ​ಣಿಕ ಸಾಧನ’ ಪ್ರಶಸ್ತಿ ಪ್ರದಾನ ಸಮಾ​ರಂಭ ಆಯೋ​ಜನೆ ಮಾಡ​ಲಾ​ಗಿತ್ತು.

Tap to resize

Latest Videos

ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ 2,191 ಹಾಗೂ ಪಿಯುಸಿಯ 493 ವಿದ್ಯಾರ್ಥಿಗಳು, 630 ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಮತ್ತು 80 ಪಿಯುಸಿ ಉಪನ್ಯಾಸಕರು ಸೇರಿದಂತೆ ಒಟ್ಟು 3,394 ಮಂದಿಗೆ ಡಿಕೆಶಿ ಭಾವಿಚಿತ್ರವಿರುವ ಕೈಗಡಿಯಾರಗಳನ್ನು ವಿತರಿಸಲಾಗಿದೆ. ಆದರೆ, ಸರ್ಕಾರಿ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ತಮ್ಮ ಭಾವಚಿತ್ರವುಳ್ಳ ಕೈಗಡಿಯಾರ ನೀಡಿದ್ದು ಎಷ್ಟುಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಈ ಬಗ್ಗೆ ಚರ್ಚೆಗಳು ಆರಂಭವಾಗಿದೆ.

ಅಲ್ಲದೇ ಶೇ.100ರಷ್ಟುಫಲಿತಾಂಶ ಪಡೆದ 70ಕ್ಕೂ ಅಧಿಕ ಪ್ರೌಢಶಾಲೆಗಳಿಗೆ ಗೋಡೆ ಗಡಿಯಾರವನ್ನು ಸಹ ವಿತರಿಸಲಾಗಿದೆ ಎಂದು ತಿಳಿದುಬಂದಿದೆ.

click me!