Tumakur : ರಾಗಿ ಖರೀದಿ ಕೇಂದ್ರದ ಮೇಲೆ ಲೋಕಾ ದಾಳಿ

By Kannadaprabha News  |  First Published Feb 16, 2023, 5:28 AM IST

 ರಾಗಿ ಖರೀದಿ ಕೇಂದ್ರದ ಮೇಲೆ ಲೋಕಾಯುಕ್ತರು ದಿಢೀರ್‌ ದಾಳಿ ಮಾಡಿದ ಘಟನೆ ಬುಧವಾರ ಸಾಯಂಕಾಲ ನಡೆದಿದೆ.


 

 ತುರುವೇಕೆರೆ :  ರಾಗಿ ಖರೀದಿ ಕೇಂದ್ರದ ಮೇಲೆ ಲೋಕಾಯುಕ್ತರು ದಿಢೀರ್‌ ದಾಳಿ ಮಾಡಿದ ಘಟನೆ ಬುಧವಾರ ಸಾಯಂಕಾಲ ನಡೆದಿದೆ.

Tap to resize

Latest Videos

ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಅತಿಯಾಗಿದೆ. ಸಾಮಾನ್ಯ ರೈತರು ರಾಗಿಯನ್ನು ಬಿಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಪ್ರತಿ ಟ್ರ್ಯಾಕ್ಟರ್‌ ಗೆ 500 ರಿಂದ 1000 ರು.ವರೆಗೆ ಅಲ್ಲಿನ ಸಿಬ್ಬಂದಿಗೆ ಲಂಚ ನೀಡಬೇಕು ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್‌ ಮತ್ತು ಇನ್ಸ್‌ಪೆಕ್ಟರ್‌ ಸತ್ಯನಾರಾಯಣ್‌ ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ದಾಳಿ ಮಾಡಿದರು.

ಆ ಸಂದರ್ಭದಲ್ಲಿ ಸಿಬ್ಬಂದಿ ಬಳಿ ಹೆಚ್ಚು ಹಣ ಇದ್ದದ್ದು ಕಂಡು ಬಂದಿದೆ. ಮ್ಯಾನೇಜರ್‌ ಬಳಿ 1200 ರು.ಗಳು, ಮತ್ತೊಬ್ಬ ಸಿಬ್ಬಂದಿ ಬಳಿ ಸುಮಾರು 15 ಸಾವಿರ ರು.ಗಳು ಇದ್ದವೆಂದು ಹೇಳಲಾಗಿದೆ. ನಿಯಮಾನುಸಾರ ಸಿಬ್ಬಂದಿ ತಮ್ಮ ಬಳಿ ಇರುವ ಹಣವನ್ನು ರಿಜಿಸ್ಟರ್‌ ಮಾಡಿಕೊಳ್ಳಬೇಕಿತ್ತು. ಆದರೆ ಆ ವ್ಯವಸ್ಥೆ ಇಲ್ಲದಿರುವುದು ಲೋಕಾಯುಕ್ತರ ಗಮನಕ್ಕೆ ಬಂದಿತು.

ಸಿಬ್ಬಂದಿ ಬಳಿ ಹೆಚ್ಚುವರಿ ಹಣ ಇದ್ದ ಬಗ್ಗೆ ಸೂಕ್ತ ವಿವರವನ್ನು ನೀಡಬೇಕೆಂದು ಸೂಚಿಸಿ ಸಹಾಯಕ ಕೃಷಿ ನಿರ್ದೇಶಕಿ ಪೂಜಾರವರಿಗೆ ಡಿವೈಎಸ್ಪಿ ಮಂಜುನಾಥ್‌ ಸೂಚಿಸಿ ಹಣವನ್ನು ಅವರಿಗೆ ನೀಡಿದರು.

15 ಸಾವಿರ ರು.ಗಳಿಗೂ ಹೆಚ್ಚು ಹಣ ಹೊಂದಿದ್ದ ಲಿಂಗರಾಜ್‌, ತಾವು ಶಿರಾದಿಂದ ಓಡಾಡುತ್ತಿದ್ದು ಬಾಡಿಗೆ ಮನೆಗೆ ಅಡ್ವಾನ್ಸ್‌ ಕೊಡುವ ಸಲುವಾಗಿ ಹಣವನ್ನು ತಂದಿದುದಾಗಿ ಸ್ಪಷ್ಟನೆ ನೀಡಿದರು.

ರಾಗಿ ಖರೀದಿ ಕೇಂದ್ರದಲ್ಲಿ ಸಾಕಷ್ಟುಅವ್ಯವಹಾರಗಳು ನಡೆಯುತ್ತಿವೆ ಎಂದು ರೈತಾಪಿಗಳಿಂದ ದೂರುಗಳು ಬರುತ್ತಿವೆ. ರೈತರಿಗೆ ಮೋಸವಾದಲ್ಲಿ ಯಾವುದೇ ಕ್ಷಣದಲ್ಲಿ ದಾಳಿ ಮಾಡಿ ಸೂಕ್ತ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಲೋಕಾಯುಕ್ತ ಅಧಿಕಾರಿಗಳು ರಾಗಿ ಖರೀದಿ ಕೇಂದ್ರದ ಸಿಬ್ಬಂದಿಗೆ ನೀಡಿದರು.

ವೇಗ ಪಡೆದುಕೊಳ್ಳದ ರಾಗಿ ಖರೀದಿ

 ತುಮಕೂರು :  ರೈತರು ಚೀಲದಲ್ಲಿ ತುಂಬಿಕೊಂಡು ಬಂದ ರಾಗಿಯನ್ನು ಸುರಿದು ಸರ್ಕಾರಿ ಮುದ್ರೆ ಇರುವ ಚೀಲಕ್ಕೆ ತುಂಬುವ ಪ್ರಕ್ರಿಯೆ ತಡವಾಗುತ್ತಿರುವುದರಿಂದ ರಾಗಿ ಖರೀದಿ ವೇಗ ಪಡೆದುಕೊಳ್ಳದೇ 2 ಕಿ.ಮೀ. ಉದ್ದ ವಾಹನಗಳು ನಿಲ್ಲುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಜಿಲ್ಲೆಯಲ್ಲಿ 62140 ಮಂದಿ ರೈತರು ನಫೆಡ್‌ನಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿ 11777, ಗುಬ್ಬಿಯಲ್ಲಿ 2475 ಮಂದಿ, ಕುಣಿಗಲ್‌ನಲ್ಲಿ 13822, ಮಧುಗಿರಿಯಲ್ಲಿ 1734, ಶಿರಾದಲ್ಲಿ 1144, ತಿಪಟೂರಿನಲ್ಲಿ 11065, ತುಮಕೂರು 6805 ಹಾಗೂ ತುರುವೇಕೆರೆಯಲ್ಲಿ 13318 ಮಂದಿ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.

click me!