Ramanagara; ಒಂಟಿ ಸಲಗ ಸೆರೆ ಹಿಡಿ​ಯು​ವಂತೆ ಗ್ರಾಮ​ಸ್ಥರ ಒತ್ತಾ​ಯ

By Kannadaprabha News  |  First Published Oct 15, 2022, 5:02 PM IST

ಒಂಟಿ ಸಲಗ ಸೆರೆ ಹಿಡಿ​ಯು​ವಂತೆ ಗ್ರಾಮ​ಸ್ಥರ ಒತ್ತಾ​ಯ. ಕೆಂಪಸಾಗರ ಬಳಿ ಬೀಡುಬಿಟ್ಟಆನೆ: ಸೆರೆ ಹಿಡಿಯಲು ಹರಸಾಹಸ. 


 ಮಾಗಡಿ (ಅ.15): ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಆತಂಕ ಸೃಷ್ಟಿ​ಸಿ​ರುವ ಒಂಟಿ ಸಲಗವನ್ನು ಕೂಡಲೆ ಸೆರೆ ಹಿಡಿ​ಯು​ವಂತೆ ಗ್ರಾಮ​ಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ. ತಾಲೂಕಿಗೆ ಮಂಗಳವಾರ ರಾತ್ರಿ ಹಾರೋಹಳ್ಳಿ ಕಡೆಯಿಂದ ಬಂದ ಒಂಟಿ ಸಲಗ ತಿಪ್ಪಗೊಂಡನಹಳ್ಳಿ, ಸಾವನದುರ್ಗ ಮಾರ್ಗವಾಗಿ ತಾಲೂಕಿನ ಹಲವು ಕಡೆ ದಾಂಧಲೆ ನಡೆ​ಸಿದೆ. ಶಿವಗಂಗೆ ಮೂಲಕ ಬನ್ನೇರುಘಟ್ಟಅರಣ್ಯ ಪ್ರದೇಶದ ಕಡೆ ಓಡಿಸಲು ಸಾಕಷ್ಟುಹರಸಾಹಸ ಪಟ್ಟರು. ಆದರೆ, ಒಂಟಿ ಸಲಗ ಮತ್ತೆ ಗುರುವಾರ ತಾಲೂಕಿನ ಜುಟ್ಟನಹಳ್ಳಿ, ಕೆಂಪುಸಾಗರ, ಸಾತನೂರು ಸುತ್ತಮುತ್ತಲ ಹಳ್ಳಿಗಳಲ್ಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿದೆ. ಗ್ರಾಮಸ್ಥರ ಮೊಬೈಲ್‌ನಲ್ಲಿ ಒಂಟಿ ಸಲಗ ಓಡಾಡುವ ದೃಶ್ಯ ಸೆರೆಯಾಗಿದ್ದು ಅರಣ್ಯ ಇಲಾಖೆ ಕೂಡಲೇ ಒಂಟಿ ಸಲಗವನ್ನು ಕಾಡಿಗೆ ಬಿಡುವ ಕೆಲಸ ಮಾಡಬೇಕು. ಇಲ್ಲವಾದರೆ ಬೆಳೆ ಮತ್ತು ಮನುಷ್ಯರ ಮೇಲೂ ದಾಳಿ ಮಾಡುವ ಆತಂಕವಿದ್ದು, ಕೂಡಲೇ ಅರಣ್ಯ ಇಲಾಖೆ ಒಂಟಿ ಸಲಗವನ್ನು ಹಿಡಿಯುವ ಕೆಲಸ ಮಾಡಬೇಕೆಂದು ಗ್ರಾಮ​ಸ್ಥರು ಒತ್ತಾಯಿಸಿದ್ದಾರೆ.

ಗುರುವಾರ ಸಂಜೆಯವರೆಗೂ ಆನೆ ಬೇರೆಡೆಗೆ ಓಡಿಸಲು ಅರಣ್ಯ ಸಿಬ್ಬಂದಿ ಹರಸಾಹಸಪಟ್ಟರೂ ಫಲಸಿಗಲಿಲ್ಲ. ಆದರೆ ಈಗ ಕೆಂಪಸಾಗರ ಬಳಿ ಆನೆ ಬೀಡುಬಿಟ್ಟಿದೆ. ಶುಕ್ರವಾರ ಬೆಳಗ್ಗೆ ಆನೆ ಜಾಡು ಹಿಡಿದು ಗ್ರಾಮಸ್ಥರಿಂದ ಮಾಹಿತಿ ಪಡೆದು ಒಂದೆಡೆ ಆನೆಯನ್ನು ತಡೆದು ಸೆರೆಹಿಡಿಯುವ ಬಗ್ಗೆ ಸಂಬಂಧ ಪಟ್ಟಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.

Tap to resize

Latest Videos

ಆನೆ ಓಡಿಸಲು ನಾಗರಿಕರಿಂದ ತೊಂದರೆ: ಸಾರ್ವಜನಿಕರಿಗೆ, ರೈತರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಆನೆ ಓಡಿಸಲು ಪ್ರಯತ್ನಸುತ್ತಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆ ಸಿಬ್ಬಂದಿ ಕಣ್ತಪ್ಪಿಸಿ ಆನೆ ನೋಡಲು ಚಿಕ್ಕಮಕ್ಕಳೊಂದಿಗೆ ಜಾತ್ರೆಯಂತೆ ಜನ ಮುಂದಾಗಿರುವುದರಿಂದ ಇತ್ತ ಆನೆ ಓಡಿಸುವುದೋ ಅಥವ ಸಾರ್ವಜನಿಕರನ್ನು ರಕ್ಷಿಸುವುದೋ ಎಂಬುವಂತಾಗಿದೆ.

ಮಾಗಡಿ ಅರಣ್ಯ ಸಿಬ್ಬಂದಿಗಿಂತ ನುರಿತ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಿ ತುರ್ತಾಗಿ ಆನೆ ಸೆರೆಹಿಡಿಯಲು ಮುಂದಾಗಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರು: ವಿಪರೀತ ಕಾಡಾನೆ ಕಾಟ,  ಓಡಿಸಲು ಹರಸಾಹಸ  ಪಡುತ್ತಿರುವ ಅರಣ್ಯ ಇಲಾಖೆ

ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರನ್ನು ಬಳಸಿಕೊಳ್ಳದೆ ಏಕಾಏಕಿ ಆನೆ ಓಡಿಸಲು ಮುಂದಾಗಿದ್ದಾರೆ. ಹುಲಿದುರ್ಗ ಅಥವಾ ಮಾಕಳಿ ಅರಣ್ಯ ಪ್ರದೇಶದ ಕಡೆ ಓಡಿಸಲು ಸಿಬ್ಬಂದಿ ಮುಂದಾಗಿದ್ದಾರೆ.

 

Ramanagara; ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಕಾಡಾನೆಗಳ ಹಿಂಡು, ಆತಂಕದಲ್ಲಿ ಗ್ರಾಮಸ್ಥರು

ಗ್ರಾಮದಲ್ಲಿ ರೈತರು ತಮ್ಮ ಹಸು,ಕರು,ಮೇಕೆ,ಕುರಿಗಳನ್ನು ಹೊರಗಡೆ ಕಟ್ಟಬೇಡಿ, ರಾತ್ರಿ ವೇಳೆ ಮನೆಯ ಒಳಗಡೆ ಇರುವಂತೆ ಅರಣ್ಯಾಧಿಕಾರಿಗಳು ನಾಗರೀಕರಲ್ಲಿ ಮನವಿ ಮಾಡಿದ್ದಾರೆ.

click me!