
ಕೆಜಿಎಫ್ (ಅ.15): ತಾಲೂಕಿನಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದರು. ಕೆಜಿಎಫ್‌ನ ಪಾರಂಡಹಳ್ಳಿ ಗ್ರಾಮ ಪಂ, ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲೂಕು ಪಂಚಾಯಿತಿ ಕಟ್ಟಡದ ಉದ್ಘಾಟನೆ ನೇರವೇರಿಸಿ ಮಾತನಾಡಿದರು, ತಾಲೂಕಿನ ಅಭಿವೃದ್ಧಿಗೆ ಪಕ್ಷತೀತವಾಗಿ ಎಲ್ಲ ಪಕ್ಷಗಳು ಶ್ರಮಿಸಬೇಕು. ಚುನಾವಣೆ ಕೇವಲ 15 ದಿನಗಳಲ್ಲಿ ಮುಗಿಯುತ್ತದೆ, ಚುನಾವಣೆಯಲ್ಲಿ ಗೆದ್ದ ನಂತರ ಶಾಸಕರು ತಾಲೂಕಿನ ಅಭಿವೃದ್ಧಿಯತ್ತ ಗಮನಹರಿಸಬೇಕೆಂದು ಹೇಳಿದರು. ಕೆಜಿಎಫ್ ನಗರದಿಂದ ಬೆಂಗಳೂರು ನಗರಕ್ಕೆ ಪ್ರತಿನಿತ್ಯ ಸಾವಿರಾಯು ಯುವಕರು ಉದ್ಯೋಗವನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ, ಸ್ಥಳೀಯವಾಗಿ ಕಾರ್ಖಾನೆಗಳನ್ನು ಸ್ಥಾಪನೆ ಮಾಡಿ ಸ್ಥಳಿಯರಿಗೆ ಉದ್ಯೋಗವನ್ನು ಕಲ್ಪಿಸಲಾಗುವುದೆಂದು ತಿಳಿಸಿದರು. ಸಂಸದ ಮುನಿಸ್ವಾಮಿ ಮಾತನಾಡಿ, ಕೆಜಿಎಫ್ ತಾಲೂಕು ಪ್ರತ್ಯೇಕಗೊಂಡ ನಂತರ ಮೊದಲ ಸರ್ಕಾರಿ ಕಟ್ಟಡವನ್ನು ಉದ್ಘಾಟನೆ ಮಾಡಲಾಗುತ್ತಿದ್ದು, ಈ ವೇದಿಕೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯವರ ಕನಸಾದ ಜಲಜೀವನ್ ಕಾರ‍್ಯಕ್ರಮಕ್ಕೆ ಸಹ ಚಾಲನೆ ನೀಡಲಾಗುತ್ತಿದೆ. ಈ ಯೋಜನೆ 4 ಸಾವಿರ ಕೋಟಿ ರೂಪಾಯಿಗಳಯೋಜನೆಯಾಗಿದ್ದು, ಕೆಜಿಎಫ್ ತಾಲೂಕಿನಲ್ಲಿ ಮನೆ ಮನಗೆ ನಳ ಮೂಲಕ ಶುದ್ಧ ಕುಡಿವ ನೀರಿನ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ರೂಪಕಲಾಶಶಿಧರ್, ಹೊಸ ತಾಲೂಕಿಗೆ ಪಂಚಾಯತಿ ಕಟ್ಟಡವಿಲ್ಲ ಕಾರಣ ಕೆಲಸ ಕಾರ್ಯಗಳಿಗೆ ತೊಂದರೆಯಾಗಿರುವುದಾಗಿ ಸಚಿವರ ಬಳಿ ತಿಳಿಸಿದಾಗ ಕೂಡಲೇ ತಾಪಂ ಕಟ್ಟಡಕ್ಕೆ 2 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದರೆಂದು ಕೃತಜ್ಞತೆ ವ್ಯಕ್ತಪಡಿಸಿದರು.
ಬೆಮೆಲ್‌ನ 978 ಎಕರೆ ಭೂಮಿಯನ್ನು ತಾಲೂಕು ಆಡಳಿತ ವಶಕ್ಕೆ ವಾಪಸ್ ಪಡೆಯಲಾಗಿದ್ದು, ಕೆಜಿಎಫ್ ತಾಲೂಕಿನ ಅಭಿವೃದ್ದಿ ಹಿತದೃಷ್ಟಿಯಿಂದ ಕೈಗಾರಿಕಾ ವಲಯವನ್ನು ಮಾಡಿ ಸ್ಥಳೀಯ ಯುವರಿಗೆ ಉದ್ಯೋಗವನ್ನು ನೀಡುವಂತೆ ಶಾಸಕಿ ಮನವಿ ಮಾಡಿದರು.
ದೇಶಕ್ಕೆ ಬಿಜೆಪಿ ದೊಡ್ಡ ಅಪಾಯ: ರೂಪ ಶಶಿಧರ್
ಕಾರ‍್ಯಕ್ರಮದಲ್ಲಿ ಮಾವು ಅಭಿವೃದ್ದಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷರಾದ ವಾಸುದೇವ್, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪಂ, ಸಿಇಒ ಯುಕೇಶ್‌ಕುಮಾರ್.ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಹಾಗೂ ಪಾರಂಡಹಳ್ಳಿ ಗ್ರಾಮ ಪಂ ಅಧ್ಯಕ್ಷೆ ಎಸ್.ಆರ್ ತುಳಿಸಮ್ಮರಾಮಚಂದ್ರರೆಡ್ಡಿ ತಾಪಂ ಇಒ ಮಂಜುನಾಥ್ ಹಾಗೂ ಪಿಡಿಒಗಳು, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಉಪಸ್ಥಿತರಿದ್ದರು.
ದಲಿತ ಕೂಲಿಕಾರ್ಮಿಕರ ಮೇಲೆ ದೌರ್ಜನ್ಯ: ತನಿಖಾ ಸಮಿತಿ ರಚನೆಗೆ ಕೆಜಿಎಫ್ ಒತ್ತಾಯ
ಬ್ಯಾನರ್‌ಗಳ ಭರಟೆ: ಮಾಜಿ ಶಾಸಕ ವೈ.ಸಂಪಂಗಿ ರಸ್ತೆ ಉದ್ದಕ್ಕೂ ಮತ್ತು ತಾಲೂಕು ಪಂ ಕಟ್ಟಡದ ಕಾಂಪೌಂಡ್‌ಗೂ ಕಾರ‍್ಯಕ್ರಮದ ಉದ್ಘಾಟನೆಯ ಬ್ಯಾನರ್‌ಗಳನ್ನು ಕಟ್ಟಿರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಯಿತು. ಶಾಸಕರು ಸರ್ಕಾರದ ಮಟ್ಟದಲ್ಲಿ ಧ್ವನಿಯತ್ತಿ ಹೊಸ ತಾಲೂಕಿಗೆ ಗ್ರಾಮ ಪಂಚಾಯತಿ ಕಟ್ಟಡ ತಂದರೆ ಮಾಜಿ ಶಾಸಕರು ಬ್ಯಾನರ್‌ಗಳನ್ನು ಕಟ್ಟಿಸಿ ಪ್ರಚಾರ ಪಡೆಯುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬಂದವು.